ಬಳ್ಳಾರಿ:ಜ,30- ನಗರದ ಆರಾಧ್ಯ ದೈವ ಕೋಟೆ ಮಲ್ಲೇಶ್ವರ ಸ್ವಾಮಿಯ ರಥೋತ್ಸವ ನಾಡಿದ್ದು ಫೆ. 1 ರಂದು ನಡೆಯಲಿದ್ದು. ತೇರು ಬೀದಿಯಲ್ಲಿರುವ ರಥ ನಿರ್ಮಾಣವಾಗಿರುವುದನ್ನು ನಿನ್ನೆ ಸಂಜೆ ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಪರಿಶೀಲನೆ ನಡೆಸಿದರು.
ತೇರು ನಿಂತಿರುವ ಸ್ಥಳದಿಂದ ಎಲ್ಲಿಯವರೆಗೆ ಎಳೆಯುತ್ತದೆ. ತೇರು ತೆರಳುವ ರಸ್ತೆ ದುರಸ್ಥಿ ಮಾಡಲಾಗಿದೆಯಾ, ಎಷ್ಟು ಜನ ಸೇರುತ್ತಾರೆ. ಜನರ ನಿಯಂತ್ರಣಕ್ಕೆ ಬಂದೋಬಸ್ತು ಹೇಗೆ ಮಾಡುತ್ತಿದೆ ಎಂಬುದನ್ನು ನಗರ ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ ಮತ್ತವರ ಸಿಬ್ಬಂದಿಯೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.
ಈ ವೇಳೆ ರತೋತ್ಸವದಲ್ಲಿ ಪ್ರತಿ ವರ್ಷ ತೊಡಗಿಕೊಳ್ಳುವ ಕರ್ನಾಟಕ ಯುವಕ ಸಂಘದ ಅಧ್ಯಕ್ಷ ಜಿ.ಬಸವರಾಜ್ ಮೊದಲಾದವರು ಈ ಹಿಂದಿನ ವ್ಯವಸ್ಥೆ ಕುರಿತು ಮಾಹಿತಿ ನೀಡಿ. ಬೆಳಿಗ್ಗೆ 11.15 ಕ್ಕೆ ಮಡಿತೇರು, ಬ್ರಹ್ಮರತೋತ್ಸವ ಸಂಜೆ 4 ಗಂಟೆಗೆ ನಡೆಯಲಿದೆಂದು ತಿಳಿಸಿದರು.


