ಮೂಡಲಗಿ: ಹಿಂದೂ ಸಮ್ಮೇಳನ ಸಂಚಾಲನ ಸಮಿತಿ, ಕಲ್ಲೋಳಿ ವತಿಯಿಂದ ಜನೇವರಿ 31 ಶನಿವಾರರಂದು ಸಂಜೆ 04.00 ಗಂಟೆಗೆ ಕಲ್ಲೋಳಿ ಪಟ್ಟಣದ ಬಲಭೀಮ ರಂಗ ಮಂದಿರದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಮಾವೇಶದ ಅಂಗವಾಗಿ ಮಧ್ಯಾಹ್ನ 03.00 ಗಂಟೆಗೆ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಮೈದಾನದಿಂದ ಬಲಭೀಮ ರಂಗ ಮಂದಿರದವರೆಗೆ ಡೊಳ್ಳು ಕುಣಿತ, ಕರಡಿ ಮಜಲು, ಝಾಂಜ್ ಪಥಾಕ್, ಮಹಿಳೆಯರಿಂದ ಬೃಹತ್ ಕುಂಭ ಮೇಳ, ಭಾರತ ಮಾತೆಯ ಭಾವಚಿತ್ರ ಸಹಿತವಾಗಿ ಬೃಹತ್ ಶೋಭಾ ಯಾತ್ರೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ನಂತರ ವೇದಿಕೆ ಕಾರ್ಯಕ್ರಮವು ಸಂಜೆ 04.00 ಗಂಟೆಗೆ ಪ್ರಾರಂಭವಾಗಲಿದ್ದು. ಹುಕ್ಕೇರಿ ಕ್ಯಾರಗುಡ್ಡ ಮಠದ ಪೂಜ್ಯ ಶ್ರೀ ಅಭಿನವ ಮಂಜುನಾಥ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
ಸುರೇಶ ನಿಂಗಪ್ಪನವರ, ವೈಭವಿ ಕುಲಕರ್ಣಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ಸಮಸ್ತ ಹಿಂದೂ ಭಾಂಧವರಿಗಾಗಿ ಮಹಾಪ್ರಸಾದ ವ್ಯವಸ್ಥೆಯನ್ನು ಸಂಘಟಕರು ಆಯೋಜಿಸಿದ್ದಾರೆ. ಕಲ್ಲೋಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿಂದೂ ಕಾರ್ಯಕರ್ತರು ಹಾಗೂ ದೇಶಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಂದು ಸಂಘಟಕರು ವಿನಂತಿಸಿದ್ದಾರೆ.


