ಪ್ರಭಾಕರ ಕೋರೆ ಅವರನ್ನು ಸತ್ಕರಿಸಿದ ಈರಣ್ಣ ಕಡಾಡಿ

Sandeep Malannavar
ಪ್ರಭಾಕರ ಕೋರೆ ಅವರನ್ನು ಸತ್ಕರಿಸಿದ ಈರಣ್ಣ ಕಡಾಡಿ
WhatsApp Group Join Now
Telegram Group Join Now
ಬೆಳಗಾವಿ:2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕೆಎಲ್‌ಇ ಸಂಸ್ಥೆಯ ನಿಕಟಪೂರ್ವ ಕಾರ್ಯಾಧ್ಯಕ್ಷರು ಹಾಗೂ ರಾಜ್ಯಸಭೆಯ ಮಾಜಿ ಸದಸ್ಯರಾದ ಡಾ. ಪ್ರಭಾಕರ ಕೋರೆ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಭೇಟಿಯಾಗಿ ಸನ್ಮಾನಿಸಿ  ಶುಭ ಕೋರಿದರು.
ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರಾಗಿ ಡಾ. ಪ್ರಭಾಕರ್ ಕೋರೆ ಅವರು 4 ದಶಕಗಳಿಗೂ ಹೆಚ್ಚು ಕಾಲ 38 ಸಂಸ್ಥೆಗಳನ್ನು 300 ಕ್ಕೂ ಅಧಿಕ ಅಂಗ ಸಂಸ್ಥೆಗಳಿಗೆ ವಿಸ್ತರಿಸಿದ್ದಾರೆ. ಶಿಕ್ಷಣ, ವೈದ್ಯಕೀಯ ಹಾಗೂ ಸಮಾಜಮುಖಿ   ಕ್ಷೇತ್ರಗಳಲ್ಲಿ ಅವರು ನೀಡಿದ ಅಮೂಲ್ಯ ಸೇವೆಗೆ 2026ನೇ ಸಾಲಿನ  ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿರುವುದು ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.
ಬೆಳಗಾವಿ ವಿಧಾನಸಭಾ ಅಧಿವೇಶನ ನಡೆಯಲು ಕಾರಣೀಭೂತರು, ವೀರಶೈವ ಲಿಂಗಾಯತ ಸಮಾಜದ ಚಟುವಟಿಕೆಗಳ ಆಶ್ರಯದಾತರು, ಕನ್ನಡ ಪರ ಚಟುವಟಿಕೆಗಳಿಗೆ ಪ್ರೋತ್ಸಾಹದಾಯಕರು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸೇವೆ ನೀಡಲು ದೇವರು ಅವರಿಗೆ ಹೆಚ್ಚಿನ ಆಯುಷ್ಯ ಆರೋಗ್ಯ  ನೀಡಲಿ ಎಂದು ಶುಭ ಹಾರೈಸಿದರು.
WhatsApp Group Join Now
Telegram Group Join Now
Share This Article