ಓಟಿಎಸ್ ಪದ್ದತಿ ಸಾಲ ತಿರುವಳಿಗೆ ಅವಕಾಶ ಕಲ್ಪಿಸಿ :  ಕುರುಬರು ಶಾಂತಕುಮಾರ್ 

Sandeep Malannavar
ಓಟಿಎಸ್ ಪದ್ದತಿ ಸಾಲ ತಿರುವಳಿಗೆ ಅವಕಾಶ ಕಲ್ಪಿಸಿ :  ಕುರುಬರು ಶಾಂತಕುಮಾರ್ 
WhatsApp Group Join Now
Telegram Group Join Now
ಬಳ್ಳಾರಿ. ಜ. 30..: ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಓ ಟಿ ಎಸ್ ಪದ್ಧತಿಯಲ್ಲಿ ಸಾಲ ತಿರುವಳಿ ಮಾಡಿ ಹೊಸ ಸಾಲ ವಿತರಣೆ ಮಾಡುತ್ತಿದ್ದಾರೆ ಆದರೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಶಾಖೆಗಳಲ್ಲಿ  ಓ ಟಿ ಎಸ್ ಪದ್ದತಿಯಲ್ಲಿ ಸಾಲ ತಿರುವಳಿ ಮಾಡಲು ಮೀನಾ ಮೇಸ ಏಣಿಸುತ್ತಾ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹಲವು  ಜಿಲ್ಲೆಗಳ ರೈತರು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್ ನೇತೃತ್ವದಲ್ಲಿ ಬಳ್ಳಾರಿಯ ಕೇಂದ್ರ ಕಚೇರಿಯಲ್ಲಿ  ಪ್ರತಿಭಟನೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿದರು.
 ಅವರು ಇಂದು ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖ್ಯ ಶಾಖೆಯ ಬಳಿ ರೈತರಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
 ಈ ಸಂದರ್ಭದಲ್ಲಿ  ಪ್ರತಿಭಟನಕಾರರ ಬಳಿ ಬಂದ  ಜನರಲ್ ಮ್ಯಾನೇಜರ್ ಸತ್ಯಪ್ರಸಾದ್ ಚಳುವಳಿಗಾರರ ಜೊತೆ ಸಭಾಂಗಣದಲ್ಲಿ ಸಭೆ ನಡೆಸಿ ಚರ್ಚಿಸಿ ನಮ್ಮ ಗ್ರಾಮೀಣ ಬ್ಯಾಂಕಿನಲ್ಲಿ ಪ್ರಸಕ್ತ ವರ್ಷ 61,000 ರೈತರಿಗೆ ಸಾಲ ಒಟಿಎಸ್ ನಲ್ಲಿ ತೀರುವಳಿ ಮಾಡಿದ್ದೇವೆ ಈಗ  ಓಟಿಎಸ್ ನಲ್ಲಿ ತಿರುವಳಿ ಮಾಡುವ ರೈತರಿಗೆ ಅಸಲು ಹಣದಲ್ಲಿಯೂ ರಿಯಾಯಿತಿ ನೀಡಿ ಕೃಷಿ ಸಾಲ ತಿರುವಳಿ  ಮಾಡಿ ರೈತರಿಗೆ ಹೊಸ ಸಾಲ ತೀರುವಳಿ ಮಾಡಿದ ಹಣಕ್ಕಿಂತ ಹೆಚ್ಚಾಗಿ ಇಪ್ಪತ್ತೈದರಷ್ಟು ಸಾಲ ವಿತರಿಸಲಾಗುವುದು.
 ಸರ್ಕಾರಿ ಯೋಜನೆಗಳ ಹಣ  ಸಾಲಕ್ಕೆ ಜಮಾ ಮಾಡಿಕೊಳ್ಳುವುದು  ಕಾನೂನು ಬಾಹಿರ ಈ ಬಗ್ಗೆ ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ  ಈಗಲೇ ಸೂಚನೆ ನೀಡಲಾಗುವುದು
ವಸುಲಾತಿಗೆ ಜಾಮೀನುದಾರರ ಮೂಲಕ ಕಿರುಕುಳ ನೀಡುತ್ತಿರುವುದು ಹಾಗೂ ನ್ಯಾಯಾಲಯದಲ್ಲಿ ದಾವೆ ಕೂಡುವುದು ಬೇಡ ಎಂದು ತಾವು ಹೇಳುತ್ತಿದ್ದೀರಿ ಅಂತಹ ರೈತರು ಸಹಿ ಪಡೆದು ಸಾಲ ನವಿಕರಿಸಲಾಗುವುದು ಎಂದರು.
 ಹೊಸ ಟ್ರ್ಯಾಕ್ಟರ್ ಕೊಡುತ್ತೇವೆ ಎಂದು ಬ್ಯಾಂಕಿನವರು ಹಳೆ ಟ್ಯಾಕ್ಟರ್ ತೆಗೆದುಕೊಂಡು ಸಹಿ ಪಡೆದು ಸಾಲ ವಿತರಿಸಿಲ್ಲ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು ಇನ್ನೂ ಬಳ್ಳಾರಿಗೆ ಬಂದಿರುವ ರೈತರು ಲಿಖಿತ ರೂಪದಲ್ಲಿ ದೂರು ಸಲ್ಲಿಸಿದರೆ  ಅವರ ಸಮಸ್ಯೆ ಒಂದು ತಿಂಗಳಲ್ಲಿ ಪರಿಹರಿಸಲಾಗುವುದು ಇಂತಹ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಂದಿನ ತಿಂಗಳು 15ರ ನಂತರ ಮೈಸೂರಿನಲ್ಲಿ ವಲಯ ಮಟ್ಟದ ಸಭೆ ರೈತರ ಆಹ್ವಾನಿಸಿ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ  ಬಗೆಹರಿಸಲಾಗುವುದು ಎಂದು ತಿಳಿಸಿದರು  ಇಂದಿನ ಚಳುವಳಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್ .ರಾಜ್ಯಮಹಿಳಾ ಸಂಚಾಲಕಿ ಜೀವಿ ಲಕ್ಷ್ಮೀದೇವಿ ಕಮಲಮ್ಮ. ಬರನಪುರ ನಾಗರಾಜ್. ಬೈರಾರೆಡ್ಡಿ . ರವಿಚಂದ್ರ. ಪಿ ಸೋಮಶೇಖರ್. ನಂಜುಂಡಸ್ವಾಮಿ. ನಾಗೇಶ್ ಕುಮಾರ್. ಮಾದೇವಪ್ಪ. ಮುಂತಾದ ನೂರಾರು ರೈತರು ಇದ್ದರು.
WhatsApp Group Join Now
Telegram Group Join Now
Share This Article