ಯುವ ಸಮುದಾಯ ಉದ್ಯಮ ಆರಂಭಿಸಲು ಮುಂದಾಗಬೇಕು: ಸೋಮಶೇಖರ

Sandeep Malannavar
ಯುವ ಸಮುದಾಯ ಉದ್ಯಮ ಆರಂಭಿಸಲು ಮುಂದಾಗಬೇಕು: ಸೋಮಶೇಖರ
WhatsApp Group Join Now
Telegram Group Join Now
ಬಳ್ಳಾರಿ,ಜ.30.- ಯುವ ಸಮುದಾಯ ಸರ್ಕಾರದ ಯೋಜನೆಗಳನ್ನು ಪಡೆದುಕೊಂಡು ಉದ್ಯಮ ಆರಂಭಿಸುವAತರಾಗಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಅವರು ಹೇಳಿದರು.
ಗುರುವಾರ, ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ಪ್ರಧಾನಮಂತ್ರಿಗಳ ಉದ್ಯೋಗ ಸೃಷ್ಠಿ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ 10 ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಳ್ಮೆ, ಆತ್ಮವಿಶ್ವಾಸ, ಧೈರ್ಯದಿಂದ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವ ಮೂಲಕ ಆರ್ಥಿಕವಾಗಿ ಬೆಳೆಯಬೇಕು. ಬಳಿಕ ಇತರರಿಗೂ ಉದ್ಯೋಗ ನೀಡಲು ಮುಂದಾಗಬೇಕು ಎಂದು ಮಾರ್ಗದರ್ಶನ ನೀಡಿದರು.
ಕೆನರಾ ಬ್ಯಾಂಕ್ ನ ವ್ಯವಸ್ಥಾಪಕ ಶ್ಯಾಮ್ ಅವರು ಮಾತನಾಡಿ, ಒಂದು ಉದ್ಯಮ ಸ್ಥಾಪಿಸಲು ಸಾಲ ಪಡೆದುಕೊಂಡು ಸರಿಯಾಗಿ ಮರುಪಾವತಿ ಮಾಡಿದರೆ ಇನ್ನೂ ಹೆಚ್ಚಿನ ಸಾಲ ಪಡೆದುಕೊಳ್ಳಲು ಅವಕಾಶವಿರುತ್ತದೆ ಎಂದು ತಿಳಿಸಿದರು
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ರಾಜೇಸಾಬ್ ಎಚ್ ಎರಿಮನಿ ಅವರು ಮಾತನಾಡಿ, ಕಾರ್ಯಕ್ಷೇತ್ರದಲ್ಲಿ ಪರಿಪೂರ್ಣತೆಯಿಂದ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಕೆಎಸ್‌ಐಡಿಸಿ ಎಜಿಎಂ ಮಲ್ಲಿಕಾರ್ಜುನ, ಸಂಸ್ಥೆಯ ಉಪನ್ಯಾಸಕರಾದ ಜಡೇಶ, ದಿನೇಶ ಕುಮಾರ, ಸಿದ್ದಲಿಂಗಮ್ಮ, ಸಂತೋಷ ಕುಮಾರ, ಪರಮೇಶ ಹಾಗೂ ಯಶಸ್ವಿ ಉದ್ಯಮಿಗಳು ಮತ್ತು 30 ಜನ ಶಿಬಿರಾರ್ಥಿಗಳು ಇದ್ದರು.
WhatsApp Group Join Now
Telegram Group Join Now
Share This Article