ನೇಸರಗಿ. ಇಲ್ಲಿನ ಸರ್ಕಾರಿ ಪಿ ಯು ಕಾಲೇಜಿನ 2024 ನೇ ಸಾಲಿನ ದ್ವಿತೀಯ ಪಿ ಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅಪಾರ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಪಾಲ್ಗೊಂಡ 69 ಜನರಲ್ಲಿ 63 ವಿದ್ಯಾರ್ಥಿಗಳು ತೇರ್ಗಡೆ ಅಗಿದ್ದು 91% ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ 50 ವಿದ್ಯಾರ್ಥಿಗಳಲಿ 49 ಜನ ಪಾಸಾಗಿ 98% ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ 31 ಜನರಲ್ಲಿ 31 ಜನ ಪಾಸಾಗಿ 100% ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಶೃಷ್ಠಿ ಪೂಜೇರಿ (586)ಪ್ರಥಮ್ ಸ್ಥಾನ ಪಡೆದರೆ, ವೀರನಗೌಡ ಪಾಟೀಲ (577) ದ್ವಿತೀಯ ಸ್ಥಾನ ಪಡೆದರೆ, ಕವಿತಾ ಜೂಟ್ಟಪ್ಪನವರ (543) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸವಿತಾ ಕೆಂಪಗೇರಿ (566) ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ, ಪರಸಪ್ಪ ಹಮ್ಮನವರ (561) ಅಂಕ ಪಡೆದು ದ್ವಿತೀಯ ಸ್ಥಾನ, ಭಾರತಿ ಕವಲದ (560) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಈರಮ್ಮ ಕಮತಗಿ (535)ಅಂಕ ಪಡೆದು ಪ್ರಥಮ ಸ್ಥಾನ, ದೀಪಾ ಸಿಂದ್ಯಾನಟ್ಟಿ (514) ಅಂಕ ಪಡೆದು ದ್ವಿತೀಯ ಸ್ಥಾನ, ಶೃಷ್ಠಿ ಧೂಲಪ್ಪನವರ (412) ಅಂಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಪ್ರಾಂನ್ಸುಪಾಲರಾದ ಎನ ಏಮ್ . ಕುದರಿಮೋತಿ, ಕಾಲೇಜು ಸುಧಾರಣ ಸಮಿತಿ ಅಧ್ಯಕ್ಷರು, ಶಾಸಕರಾದ ಬಾಬಾಸಾಹೇಬ್ ಪಾಟೀಲ, ಉಪಾಧ್ಯಕ್ಷರ ಬಸವರಾಜ್ ಚಿಕ್ಕನಗೌಡ್ರ್,ಭೋಧಕ್, ಭೋಧಕೇತರ್ ಸಿಬ್ಬಂದಿ, ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.