ಈ ಕಟ್ಟಡವನ್ನು ಮಠದಿಂದ ಸುಮಾರು 3ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಶಿಕ್ಷಣ ಸಂಸ್ಥೆಯು ಈಗಾಗಲೇ ಕಲಾ ಕಾಲೇಜನ್ನು ಯಶಸ್ವಿಯಾಗಿ ನಡೆಸುತ್ತಲಿದೆ ಇದರೊಂದಿಗೆ ಮುಂದಿನ ದಿನಗಳಲ್ಲಿ ವಿಜ್ಞಾನ ವಿಭಾಗವನ್ನೂ ಕೂಡ ತೆರೆಯಲು ಪ್ರಯತ್ನಗಳು ನಡೆಯುತ್ತಿವೆ.
ಅದರಂತೆ ಮುಂದಿನ ದಿನಗಳಲ್ಲಿ ಕನ್ನಡ ಮತ್ತು ಆಂಗ್ಲ ಕಾನ್ವೆಂಟ್ ಶಾಲೆಗಳನ್ನೂ ಕೂಡ ಪ್ರಾರಂಭಿಸಲು ಪ್ರಯತ್ನಿಸಲಾಗಿವುದು ಎಂದರು. ಈ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಘಟಪ್ರಭಾ, ಮಲ್ಲಾಪೂರ ಮತ್ತು ಸುತ್ತಲಿನ ಎಲ್ಲ ಗ್ರಾಮದ ಹಿರಿಯರು ಗ್ರಾಮಸ್ಥರು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ.
ನಮ್ಮ ಎಸ್ ಡಿ ಟಿ ಹೈಸ್ಕೂಲ್ ನ ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಇನ್ನುಳಿದಂತೆ ಎಲ್ಲ ಹಳೇ ವಿದ್ಯಾರ್ಥಿಗಳು ತುಂಬು ಆಸಕ್ತಿಯಿಂದ ಕಾರ್ಯಕ್ರಮದ ಯಶಸ್ವಿಗೆ ಶ್ರಮ ಪಡುತ್ತಿದ್ದಾರೆ ಎಂದು ಸಂತಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಕೆ ಎಸ್ ನಾಗರಾಜ್, ಪದಾಧಿಕಾರಿಗಳು ಸದಸ್ಯರುಗಳು ಮತ್ತು ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಮಠಪತಿ, ಶ್ರೀ ರಾಯರ, ಶ್ರೀ ಕರಿಗಾರ ಮುಂತಾದವರು ಭಾಗವಹಿಸಿದ್ದರು.
ಶ್ರೀ ಡಿ.ರವಿ ಚೆನ್ನಣವರ ಸಂವಾದ :
ವಿಶೇಷವಾಗಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಪೋಲಿಸ್ ಉಪಮಹಾನಿರ್ದೇಶಕರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳು ಶ್ರೀ ರವಿ ಡಿ ಚೆನ್ನಣವರ ಅವರ ವಿಶೇಷ ಉಪನ್ಯಾಸ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀಗಳು ವಿವರಿಸಿದರು.
ನಮ್ಮ ಎಸ್ ಡಿಟಿ ಹೈಸ್ಕೂಲ್ ಹಳೇ ವಿದ್ಯಾರ್ಥಿಗಳ ಸಂಘ ಶಾಲೆಯ ಅಭಿವೃದ್ಧಿಗೆ ಶ್ರಮಿಸಲಿದೆ – ಕೆ ಎಸ್ ನಾಗರಾಜ್
ಈ ನಮ್ಮ ಎಸ್ ಡಿ ಟಿ ಹೈಸ್ಕೂಲ್ ಗೆ ಸುಮಾರು 7 ದಶಕಗಳ ಇತಿಹಾಸವಿದೆ ಈಗಾಗಲೇ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಳೆದ ಸಾಲಿನಲ್ಲಿ ರಿಜಿಸ್ಟರ್ ಮಾಡಿಸಲಾಗಿದೆ. ಈ ಹೈಸ್ಕೂಲಿನಲ್ಲಿ ಕಲಿತು ಹೋದ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳನ್
ಈ ಸಂದರ್ಭದಲ್ಲಿ ನಮ್ಮ ಘಟಪ್ರಭಾ ಎಸ್ ಡಿ ಟಿ ಹೈಸ್ಕೂಲ್ ನಲ್ಲಿ ಓದಿದ ವಿದ್ಯಾರ್ಥಿಗಳು ಸಂಘಕ್ಕೆ ಸೇರಬಯಸುವವರು ಈ ಕೆಳಗಿನ ದೂರವಾಣಿಗೆ 9620 100500 ವಾಟ್ಸ್ ಪ್ ಮೂಲಕ ಸೇರಿಕೊಳ್ಳಬಹುದು ಎಂದು ವಿವರಿಸಿದರು.
ಸಂಘದಲ್ಲಿ ಸದಸ್ಯತ್ವ ಪಡೆಯುವುದರಿಂದ ನಮ್ಮ ಹೈಸ್ಕೂಲ್ ಮತ್ತು ಕಾಲೇಜ್ ನ ಸಮಗ್ರ ಅಭಿವೃದ್ಧಿಗೆ ಹಾಗೂ ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಶಕ್ತಿ ಹೆಚ್ಚಿಸುವುದು ಹಾಗೂ ಶಿಕ್ಷಣ ಸಂಸ್ಥೆಗೆ ಮೂಲ ಸೌಕರ್ಯಗಳಿಗೆ ನಾವೂ ತನು-ಮನ-ಧನದ ಸಹಾಯ ನೀಡುವ ಮೂಲಕ ಶಿಕ್ಷಣ ಸಂಸ್ಥೆ ಅಭಿವೃದ್ದಿಗೆ ಸಹಕರಿಸಲು ಸಂಘವು ನಿರಂತರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳು ಮತ್ತು ಹಿರಿಯ ಶಿಕ್ಷಕರುಗಳಾದ ಮಠಪತಿ, ರಾಯರ, ಕರಿಗಾರ ಮುಂತಾದವರು ಭಾಗವಹಿಸಿದ್ದರು.


