ಬಳ್ಳಾರಿ:29. ನಗರದಲ್ಲಿ ಬಹುತೇಖ ಕುಣಿಗಳಿಂದಲೇ ಕೂಡಿರುವ ರಸ್ತೆಗಳನ್ನು ಜನ, ವಾಹನಗಳ ಸೂಕ್ತ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಲು 127.5 ಕೋಟಿ ರೂಗಳ ವೆಚ್ಚದ ಯೋಜಬೆ ಸಿದ್ದಪಡಿಸಿದೆ ಎಂದು ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ ಹೇಳಿದ್ದಾರೆ.
ನಗರದ ರಸ್ತೆಗಳ ಹಾಳಾಗಿರುವ ಬಗ್ಗೆ ಅನೇಕ ದೂರುಗಳು ಬಂದಿವೆ, ಅನೇಕ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಕುಣಿಗಳಿಂದ ಕೂಡಿದ ನಗರದ 105 ರಸ್ತೆಗಳನ್ನು ಗುರುತಿಸಿದೆ. ಅವುಗಳನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸಾಲ ಯೋಜನೆಯಡಿ ರಾಜ್ಯ ಸರ್ಕಾರವು ಮಹಾತ್ಮಾಗಾಂಧಿ ನಗರ ವಿಕಾಶ ಯೋಜನೆಯಡಿ 127.5 ಕೋಟಿ ರೂ ವೆವ್ಚದಲ್ಲಿ ಅಗಲೀಕರಣ, ಅಭಿವೃದ್ಧಿ, ಮರು ಡಾಂಬರೀಕರಣ ಮಾಡಲಿದೆ.
ಬಳ್ಳಾರಿ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ 87.5 ಕೋಟಿ ರೂ ಮತ್ರು ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ನಗರದ ರಸ್ತೆಗಳನ್ನು 40 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲಾಗುತ್ತಿದೆ. ಈಗಾಗಲೇ ಕೆಲವು ರಸ್ತೆಗಳ ಕಾಮಗಾರಿಗೆ ಭೂಮಿಪೂಜೆ ಮಾಡಿದೆ, ಹಲವು ರಸ್ತೆಗಳ ಕಾಮಗಾರಿ ಆರಂಭಿಸಲು ವರಕ್ ಆರ್ಡರ್ ನೀಡಿದೆ. ಸಧ್ಯದಲ್ಲೇ ಕಾಮಗಾರಿಗಳು ಆರಂಭವಾಗಲಿವೆ ಎಂದು ಹೇಳಿದರು.


