ಕೋಟ್ಯಂತರ ರೂಪಾಯಿ ವಂಚನೆ ಆರೋಪಿ ವಾಸವಿ ಹೋಮ್ ನೀಡ್ಸ್ ಮಾಲೀಕ ವಿಶ್ವನಾಥ ಪತ್ತೆ

Sandeep Malannavar
ಕೋಟ್ಯಂತರ ರೂಪಾಯಿ ವಂಚನೆ ಆರೋಪಿ ವಾಸವಿ ಹೋಮ್ ನೀಡ್ಸ್ ಮಾಲೀಕ ವಿಶ್ವನಾಥ ಪತ್ತೆ
WhatsApp Group Join Now
Telegram Group Join Now
ಬಳ್ಳಾರಿ, ಜ.29. ನಗರದ ಕುಂಬಾರ ಓಣಿಯಲ್ಲಿನ ಕಟ್ಟಡದಲ್ಲಿ ಅಧಿಕ ಲಾಭಾಂಶದ ಆಮಿಷವೊಡ್ಡಿ, ಅಕ್ರಮವಾಗಿ ಚೀಟಿ ವ್ಯವಹಾರ ನಡೆಸುತ್ತ, ಜನರಿಂದ ಕೋಟ್ಯಾಂತರ ರೂ ಹಣ ಪಡೆದು ವಂಚಿಸುತ್ತಿದ್ದ ‘ವಾಸವಿ ಹೋಮ್‌ ನೀಡ್ಸ್ ಮಳಿಗೆ’ಯ ಮಾಲೀಕ ವಿಶ್ವನಾಥ್‌ ಕಳೆದ ಎಪ್ರಲ್ ನಲ್ಲಿ ಪೊಲೀಸರಿಂದ ಬಂಧಿತನಾಗಿ, ಜಾಮೀನು ಪಡೆದು ನಂತರ ಆತ್ಯಹತ್ಯೆಯ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ. ಈತನನ್ನು ಪೊಲೀಸರು ಬಂಧಿಸಿ ಆತನಿಂದ ರಿಕವರಿ ಪ್ರಕ್ರಿಯೆ ನಡೆದಿದೆ ಎಂದು ತಿಳಿದು ಬಂದಿದೆ.
ವಿಶ್ವನಾಥ ತಮ್ಮ ಮಳಿಗೆಯಲ್ಲಿ ಹೋಮ್ ನೀಡ್ಸ್ ಸಾಮಾಗ್ರಿ ಖರೀದಿ ಮಾಡಿದರೆ ಶೇ 20 ರಷ್ಟು ಇತರೇ ಸಾಮಾಗ್ರಿ ಕೊಡುವುದಾಗಿ. ಕೂಪನ್ ಕೊಡುತ್ತಿದ್ದ.
ನಂತರ ಹಣ ಡೆಪಾಸಿಟ್ ಮಾಡಿದರೆ ಶೇ. 20 ರಷ್ಟು ಬಡ್ಡಿ ಹಣದ ವಸ್ತು ಕೊಡುವುದಾಗಿ ಹಣ ಸಂಗ್ರಹ ಮಾಡುತ್ತಿದ್ದ.
ಈ ರೀತಿ ಕನಿಷ್ಠ 10 ಸಾವಿರದಿಂದ 5 ಲಕ್ಷದ ವರಗೆ ಸಾವಿರಾರು ಮಂದಿ ವಿಶ್ವನಾಥ್‌ ಗೆ ಚೀಟಿ ವ್ಯವಹಾರಕ್ಕೆ ಹಣ ಹೂಡಿಕೆ ಮಾಡಿದ್ದರು. ಈತನ ವ್ಯವಹಾರದ ಬಗ್ಗೆ ಸಂಶಯ ಬಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನಂತರ ಆತ ಜಾಮೀನು ಪಡೆದು ಹೊರ ಬಂದು ಎಲ್ಲರಗೂ ಹಣ ನೀಡುವುದಾಗಿ ಹೇಳಿ ರಾತ್ರೋ ರಾತ್ರಿ ಆತ್ಯಹತ್ಯೆಯ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ.
ಈ ಬಗ್ಗೆ ನಗರದ ಬ್ರೂಸ್‌ ಪೇಟೆ ಪೊಲೀಸ್‌ ಠಾಣೆಗೆ ತೆರಳಿ ಜನತೆ ದೂರು ಸಲ್ಲಿಸಿದ್ದರು. ಇತನನ್ನು ಹುಡುಕುತ್ತಿದ್ದ ಪೊಲೀಸರು ಈವರೆಗೆ ಪತ್ತೆಹಚ್ಚಿರಲಿಲ್ಲ. ಆದರೆ ಹೊಸ ಎಸ್ಪಿ ಬಂದ ಮೇಲೆ ವಿಶ್ವನಾಥನ್ನು ಹುಡುಕಿ ತಂದು ಆತನಿಂದ ರಿಕವರಿ ಮಾಡುತ್ತಿದ್ದಾರಂತೆ ಪೊಲೀಸರು.
WhatsApp Group Join Now
Telegram Group Join Now
Share This Article