“ಬ್ಯಾಂಕಿನ ವ್ಯವಹಾರ ವೃದ್ಧಿಗೆ ಗ್ರಾಹಕ ಕೇಂದ್ರಿತ ಸೇವೆ ಅತ್ಯಂತ ಮುಖ್ಯ”

Sandeep Malannavar
“ಬ್ಯಾಂಕಿನ ವ್ಯವಹಾರ ವೃದ್ಧಿಗೆ ಗ್ರಾಹಕ ಕೇಂದ್ರಿತ ಸೇವೆ ಅತ್ಯಂತ ಮುಖ್ಯ”
WhatsApp Group Join Now
Telegram Group Join Now

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಬಳ್ಳಾರಿಯಲ್ಲಿ ಬಿಸಿನೆಸ್ ಡೆವಲಪ್‌ಮೆಂಟ್ ಮೀಟ್

ಬಳ್ಳಾರಿ29- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ Business development meet ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅವ್ವಾರು ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಗೌರವ ಕಾರ್ಯದರ್ಶಿಗಳಾದ ಶ್ರೀ ಕೆ.ಸಿ. ಸುರೇಶ್ ಬಾಬು,  ದಾರಸಿಂಗ್ ನಾಯಕ್, ಜೋನಲ್ ಹೆಡ್, ಹೈದರಾಬಾದ್ ಅವರು ಮತ್ತು  ದೊಡ್ಡ ರಂಗಪ್ಪ, ರೀಜನಲ್ ಹೆಡ್, ಹುಬ್ಬಳ್ಳಿ ಅವರ ನೇತೃತ್ವದಲ್ಲಿ ಉದ್ಘಾಟಿಸಲಾಯಿತು.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಶ್ರೀ ಅವ್ವಾರು ಮಂಜುನಾಥ್ ಅವರು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಮಹತ್ವದ ಪಾತ್ರ ವಹಿಸಿಕೊಂಡಿದೆ. ಗ್ರಾಮೀಣ ಅಭಿವೃದ್ಧಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ತೇಜನ, ಮಹಿಳಾ ಸಬಲೀಕರಣ ಹಾಗೂ ಯುವ ಉದ್ಯಮಿಗಳಿಗೆ ಬೆಂಬಲ ನೀಡುವಲ್ಲಿ ಬ್ಯಾಂಕ್ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ಜೊತೆಗೆ ಶ್ರೀ ದಾರಸಿಂಗ್ ನಾಯಕ್ ಅವರ ಮಾರ್ಗದರ್ಶನ ಹಾಗೂ ಶ್ರೀ ದೊಡ್ಡ ರಂಗಪ್ಪ ಅವರ ಪರಿಣಾಮಕಾರಿ ನಾಯಕತ್ವ ಎಲ್ಲರಿಗೂ ಪ್ರೇರಣೆಯಾಗಿದೆ. ಅವರ ಅನುಭವ ಹಾಗೂ ಸಲಹೆಗಳು ಬ್ಯಾಂಕಿನ ಬೆಳವಣಿಗೆಗೆ ಹೊಸ ದಿಕ್ಕು ನೀಡಲಿವೆ ಎಂದು ಅಭಿಪ್ರಾಯಪಟ್ಟರು.

ಗೌರವ ಕಾರ್ಯದರ್ಶಿಗಳಾದ .ಸಿ. ಸುರೇಶ್ ಬಾಬು ಅವರು ಮಾತನಾಡಿ, ಇಂದಿನ Business development meet ಕಾರ್ಯಕ್ರಮದ ಉದ್ದೇಶ ಬ್ಯಾಂಕಿನ ವ್ಯವಹಾರ ವೃದ್ಧಿ, ಗ್ರಾಹಕ ಸೇವೆಯ ಗುಣಮಟ್ಟ ಹೆಚ್ಚಿಸುವುದು ಹಾಗೂ ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ತಂತ್ರಜ್ಞಾನ ಮತ್ತು ನವೀನ ಆಲೋಚನೆಗಳನ್ನು ಅಳವಡಿಸಿಕೊಳ್ಳುವುದಾಗಿದೆ. ಹೊಸ ಅವಕಾಶಗಳನ್ನು ಗುರುತಿಸಿ, ಬ್ಯಾಂಕಿನ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕು, ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.

ಶ್ರೀ ದೊಡ್ಡ ರಂಗಪ್ಪ, ರೀಜನಲ್ ಹೆಡ್, ಹುಬ್ಬಳ್ಳಿ ಅವರು ಮಾತನಾಡಿ, ತಂಡದ ಕೆಲಸವೇ ಯಶಸ್ಸಿನ ಮೂಲ ಎಂದು ಹೇಳಿದರು. ಬ್ಯಾಂಕು ಸಿಬ್ಬಂದಿ ಹಾಗೂ ಅಧಿಕಾರಿಗಳು ಒಂದಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ವ್ಯವಹಾರ ವೃದ್ಧಿ ಸಾಧ್ಯ. ಗ್ರಾಹಕರ ವಿಶ್ವಾಸ ಗಳಿಸುವುದು ಹಾಗೂ ಗುಣಮಟ್ಟದ ಸೇವೆ ಒದಗಿಸುವುದೇ ಬ್ಯಾಂಕಿನ ಮೊದಲ ಆದ್ಯತೆ ಎಂದು ಹೇಳಿದರು.

ದಾರಸಿಂಗ್ ನಾಯಕ್, ಜೋನಲ್ ಹೆಡ್, ಹೈದರಾಬಾದ್ ಅವರು ಮಾತನಾಡಿ, ಬ್ಯಾಂಕಿನ ವ್ಯವಹಾರ ವೃದ್ಧಿಗೆ ಗ್ರಾಹಕ ಕೇಂದ್ರಿತ ಸೇವೆ ಅತ್ಯಂತ ಮುಖ್ಯವಾಗಿದೆ. ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಂಡರೆ, ಬ್ಯಾಂಕಿನ ಕಾರ್ಯಕ್ಷಮತೆ ಹೆಚ್ಚಲಿದೆ. ಉದ್ಯಮಿಗಳಿಗೆ ಅಗತ್ಯವಿರುವ ಹಣಕಾಸು ನೆರವು ಸಮಯಕ್ಕೆ ಸರಿಯಾಗಿ ಒದಗಿಸುವ ಮೂಲಕ ಆರ್ಥಿಕ ಬೆಳವಣಿಗೆಯಲ್ಲಿ ಬ್ಯಾಂಕ್ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಚಿತ್ರದುರ್ಗ ಬ್ರಾಂಚ್‌ನ ವ್ಯವಸ್ಥಾಪಕರಾದ ಶ್ರೀ ಶ್ರೀಧರ್ ಹಾಗೂ ಬಳ್ಳಾರಿ ಬ್ರಾಂಚ್‌ನ ವ್ಯವಸ್ಥಾಪಕರಾದ ಶ್ರೀ ಪ್ರಭು ಶ್ರೀನಿವಾಸ್ ಸ್ವಾಗತ ನಿರ್ವಹಿಸಿದರು. ಗ್ರಾಹಕರು ಕೇಳಿದ ಪ್ರಶ್ನೆಗಳಿಗೆ ಬ್ಯಾಂಕಿನ ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಶ್ರೀ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ ಶ್ರೀ ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿಗಳಾದ,  ವಿ.ರಾಮಚಂದ್ರ, ಖಜಾಂಚಿಗಳಾದ  ನಾಗಳ್ಳಿ ರಮೇಶ್, ಮಾಜಿ ಅಧ್ಯಕ್ಷರಾದ ಡಾ. ರಮೇಶ್ ಗೋಪಾಲ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಕಮಿಟಿ ಚೇರ್ಮನ್‌ಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article