ಶಿಕ್ಷಣದಿಂದ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯ: ಪಟೇಲ್

Sandeep Malannavar
ಶಿಕ್ಷಣದಿಂದ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯ: ಪಟೇಲ್
WhatsApp Group Join Now
Telegram Group Join Now
ಕೊಪ್ಪಳ :- ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಶಿಕ್ಷಣ ರಂಗದಲ್ಲಿ ಅಡಗಿದೆ ಮೊದಲು ನಾವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಏಕೆಂದರೆ ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಅಮ್ಜದ್ ಪಟೇಲ್ ಹೇಳಿದರು,
ಅವರು ಬುಧವಾರ ನಗರದ ಕೊಟಗಾರ್ ಗೇರಾ ಬಡಾವಣೆಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಇಲಾಖೆ ಮತ್ತು ಶಾಲೆಯ ಎಸ್ ಡಿ ಎಂ ಸಿ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಉರ್ದು ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಕಲಿಕಾ ಹಬ್ಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು,
ಮುಂದುವರೆದು ಮಾತನಾಡಿ ಇಂತಹ ಕಲಿಕಾ ಹಬ್ಬ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಗೆ ತರಲು ಇಂತಹ ವೇದಿಕೆ ಅತ್ಯಂತ ಸಹಕಾರಿಯಾಗಿದೆ, ಇಲಾಖೆಯ ಮತ್ತು ಸರ್ಕಾರದ ಈ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದ ಅವರು ಶಾಲೆಗೆ ಅವಶ್ಯಕ ಇನ್ನೆರಡು ಕೋಟಡಿ ಗಳ ನಿರ್ಮಾಣಕ್ಕಾಗಿ ಶಾಸಕರೊಂದಿಗೆ ಸಮಾಲೋಚನೆ ಮಾಡಿ ಅವರಿಗೆ ಮನವರಿಕೆ ಮಾಡಿ ಹೆಚ್ಚುವರಿ ಕೋಟಡಿಗಳ ಮಂಜುರಾತಿಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿ ಇಂತಹ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯವಾಗಿದೆ ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆ ಗಳಾಗಿದ್ದು ಅವರ ಭವಿಷ್ಯ ಉಜ್ವಲಗೊಳ್ಳಲು ಅವರನ್ನು ಇಂತಹ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳಲು ಅವರಿಗೆ ಶಿಕ್ಷಕರು ಪ್ರೇರಣೆ ನೀಡಬೇಕು ಎಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಅಮ್ಜದ್ ಪಟೇಲ್ ಅಭಿಪ್ರಾಯ ಪಟ್ಟರು,
ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಮ್ ಸಿ ಸಮಿತಿ ಅಧ್ಯಕ್ಷ ನೈಮುೂರ್ ರೆಹಮಾನ್ ಗೌರಿಪುರ ವಸಿದ್ದರು, ಮುಖ್ಯ ಅತಿಥಿಗಳಾಗಿ ಕೆ ಎಸ್ ಪಿ ಎಸ್ ಟಿ ಎ ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ್ ಮಂಜುನಾಥ ,ವಿಕಲ ಚೇತನರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ , ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ  ಹೋಳಿಬಸಯ್ಯ, ಪದ್ಮಜಾ ಪೌಲ್ಟ್ರಿ ಫಾರ್ಮ್ ನ ಪ್ರೊ, ಸ್ವರೂಪ್ ರೆಡ್ಡಿ, ಎಸ್ಡಿಎಂಸಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಹಿರಿಯ ಸಮಾಜ ಸೇವಕ ಸಮದ್ ಸಿದ್ದಿಕಿ, ಎಮ್, ಏ, ಮಾಜಿದ್ ಸಿದ್ದಿಕಿ, ನಿವೃತ್ತ  ಪ್ರಾಧ್ಯಾಪಕ ಅನ್ವರ್ ಹುಸೇನ್, ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ, ಸಮಾಜ ಸೇವಕ ಮುನೀರ್ ಸಿದ್ದಿಕಿ, ಬಿ ಆರ್ ಪಿ ಹನುಮರೆಡ್ಡಿ, ಶಿಕ್ಷಣ ಪ್ರೇಮಿ ಮಹಿಬೂಬ್ ಕುದುರಿಮತಿ, ಗಾಯಕ ಮೊಹಮ್ಮದ್ ರಫಿ ಉರ್ ರೆಹಮಾನ್, ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಸಿಮ್ರನ್ ಖಾಸಿಂಸಾಬ್ ಟಾಂಗೆವಾಲೆ ,ಬಿ ಆರ್ ಪಿ ಕನಕಪ್ಪ ವಾಹಿದಾ ತಾಜ್, ಸಿ ಆರ್ ಪಿ ಸೈಲಾನಿ ಭಾಷಾ ಸೇರಿದಂತೆ ಅನೇಕರು ಉಪಸಿತರಿದ್ದು ಉರ್ದು ಸಿಆರ್ ಪಿ ಮೈನುದ್ದೀನ್ ಅತ್ತಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು ಶಾಲೆಯ ಮುಖ್ಯ ಶಿಕ್ಷಕಿ ಬಶೀರಾ ಬಿ, ಆರಂಭದಲ್ಲಿ ಸ್ವಾಗತಿಸಿದರೆ ಸಹಶಿಕ್ಷಕಿ ಮಂಜುಳಾ ಶ್ಯಾವಿ ಕಾರ್ಯಕ್ರಮದ ನಿರೂಪಣೆ ನಿರ್ವಹಿಸಿದರು ಹಾಗೂ ಕೊನೆಯಲ್ಲಿ ಸಹ ಶಿಕ್ಷಕಿ ಪೂರ್ಣಿಮಾ ಪಟ್ಟಣಶೆಟ್ಟಿ ರವರು ವಂದನಾರ್ಪಣೆ ಮಾಡಿದರು, ನಂತರ ಉರ್ದು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಂದ ಕಲಿಕಾ ಹಬ್ಬ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿ ಜನಮನ ರಂಜಿಸಿತು, ನಂತರ ತಮ್ಮ ಪ್ರತಿಭೆಗಳ ಉತ್ತಮ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು, ಇದೆ ವೇಳೆ ಶಾಲೆಯಲ್ಲಿ ನೂತನವಾಗಿ ಗ್ರಂಥಾಲಯ ಸ್ಥಾಪಿಸಿ ಇದರ ಪ್ರಾರಂಭೋತ್ಸವ ಸಹ ಸದರಿ ಕಾರ್ಯಕ್ರಮದಲ್ಲಿ ನೆರವೇರಿಸಲಾಯಿತು,
WhatsApp Group Join Now
Telegram Group Join Now
Share This Article