ಎಐ ತಂತ್ರಜ್ಞಾನ ಛಾಯಾಗ್ರಾಹಕರ ಉದ್ಯೋಗ ನಿರ್ವಹಣೆಗೂ ಸಾಕಷ್ಟು ಸವಾಲುಗಳನ್ನು ತಂದೊಡ್ಡಿದೆ :ಪಾರ್ಥನಳ್ಳಿ

Sandeep Malannavar
ಎಐ ತಂತ್ರಜ್ಞಾನ ಛಾಯಾಗ್ರಾಹಕರ ಉದ್ಯೋಗ ನಿರ್ವಹಣೆಗೂ ಸಾಕಷ್ಟು ಸವಾಲುಗಳನ್ನು ತಂದೊಡ್ಡಿದೆ :ಪಾರ್ಥನಳ್ಳಿ
WhatsApp Group Join Now
Telegram Group Join Now

ಜಮಖಂಡಿ: ಛಾಯಾಗ್ರಾಹಕರ ಸೇವೆ ಅಪಾರವಾಗಿದೆ. ತಂತ್ರಜ್ಞಾನ ಬೆಳೆದು ಎಐ ನ ಯುಗದಲ್ಲಿ ಛಾಯಾಗ್ರಾಹಕ ವೃತ್ತಿಯಲ್ಲಿರುವರು ಸಾಕಷ್ಟು ಶ್ರಮ ವಹಿಸಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಂಜುಮನ್‌ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಡಾ,ತೌಫಿಕ್‌ ಪಾರ್ಥನಳ್ಳಿ ಹೇಳಿದರು.

ಸೋಮವಾರ ಛಾಯಾಗ್ರಾಹಕರ ಭವವದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನ ಬೆಳೆದ ಪರಿಣಾಮ ಅನೇಕ ಉದ್ಯೋಗಗಳಿಗೆ ಹೊಡೆತ ಕೊಟ್ಟದೆ ಆಪೈಕಿ ಛಾಯಾಗ್ರಾಹಕರಿಗೂ ಉದ್ಯೋಗ ನಿರ್ವಹಣೆ ಸಾಕಷ್ಟು ಸವಾಲುಗಳನ್ನು ತಂದೊಡ್ಡಿದೆ ಇಂಥಹ ಪರಿಸ್ಥಿತಿಯಲ್ಲಿ ಕಷ್ಟಕರ ಜೀವನ ನಡೆಸುತ್ತಿರುವ ಛಾಯಾಗ್ರಾಹಕರು ಬದುಕಿನ ಹೋರಾಟ ನಡೆಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ತಮ್ಮ ಕಷ್ಟಗಳಲ್ಲಿ ಸದಾ ಜೊತೆಗಿರುತ್ತೇನೆ ಎಂದು ಭರವಸೆ ನೀಡಿದರು, ತಾಲೂಕು ಸಂಘಕ್ಕೆ ವಯಕ್ತಿಕವಾಗಿ 50 ಸಾವಿರ ರೂ,ಗಳ ಆರ್ಥಿಕ ಸಹಾಯ ಮಾಡುವದಾಗಿ ಹೇಳಿದರು. ಛಾಯಾಗ್ರಾಹಕರು ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿರುವ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ಸಂಘದ ಹಿರಿಯರಾದ ಅಶೋಕ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಹದಿನಾಲ್ಕು ವರ್ಷಗಳಿಂದ ಸಂಘ ನಡೆದು ಬಂದ ಹಾದಿ ಹಾಗೂ ಸಂಘದ ಸಾಧನೆಗಳ ಬಗ್ಗೆ ವಿವರಿಸಿದರು. ಡಾ. ರಮೇಶ ಡಪಳಾಪುರ ಹಾಗೂ ನೇತ್ರಾಧಿಕಾರಿ ರಾಜಶ್ರೀ ಮಾಳಿ ಶಿಬಿರದಲ್ಲಿ ಭಾಗವಹಿಸಿ ನೇತ್ರ ತಪಾಸಣೆ ನಡೆಸಿದರು..ಸುಮಾರು 60ಕ್ಕೂ ಹೆಚ್ಚು ಜನರ ನೇತ್ರ ತಪಾಸಣೆ ನಡೆಸಲಾಯಿತು.

ಸಂಘದ ಅಧ್ಯಕ್ಷ ಹಾಸಿಮ ಜಮಖಂಡಿ, ಉಪಾಧ್ಯಕ್ಷ ಸಿದ್ದು ಗಡದಿ, ಕಾರ್ಯದರ್ಶಿ ರಮೇಶ ಹಲವಾಯಿ, ಖಜಾಂಚಿ ಶ್ರೀಶೈಲ ಮಾಳಿ ಹಾಗೂ ನಿರ್ದೇಶಕರಾದ ಶೇಖರ ಹರಕಂಗಿ, ಮುಜಾಹಿದ್ ದಿಲವಾರ್, ಅಣ್ಣಸಾಬ ಕಾಶಿದ, ಈರನಗೌಡ ಪಾಟೀಲ, ಆನಂದ ಪುಕಾಳೆ, ಸಂಜಯ ಕಬ್ಬುರಿ, ಸಿದ್ದು ಮಾಳಿ, ರವೀಂದ್ರ ಜಂಬಿಗಿ, ಅಸ್ಗರ ಶೇಖ, ಜಗದೀಶ ತೆಗ್ಗಿನಮಠ, ಚಾಂದಸಾಬ ಬಾಗನಿ, ಅಣ್ಣಪ್ಪ ಮೋಹಿತೆ, ರವೀಂದ್ರ ಕೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಮೇಶ್ ಹಲವಾಯಿ ಸ್ವಾಗತಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article