ಮಾನವೀಯ ಮೌಲ್ಯಗಳನ್ನು ಒಳಗೊಂಡ ಜ್ಞಾನವನ್ನು ಪ್ರಸ್ತುತ ಶಿಕ್ಷಣದಲ್ಲಿ ಒಳಗೊಳ್ಳುಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ.ಖಾನ್ ಅಭಿಪ್ರಾಯಪಟ್ಟರು.
ನಗರದ ಬಹುಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ (ಸಿ.ಎಂ.ಡಿ.ಆರ್) ಐ.ಸಿ.ಎಸ್.ಆರ್.ಸಂಸ್ಥೆ,
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠವು ಕನ್ನಡ ಅಧ್ಯಯನ ಪೀಠದ ಸಭಾಂಗಣದಲ್ಲಿ ಸಹಯೋಗದಲ್ಲಿ ಆಯೋಜಿಸಿದ ಭಾರತೀಯ ಜ್ಞಾನ ಪರಂಪರೆ ಮತ್ತು ಆದಿಕವಿ ವಾಲ್ಮೀಕಿ ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ತಕ್ಷಶಿಲೆಯ ವಿಶ್ವವಿದ್ಯಾನಿಲಯದಿಂದ ಜ್ಞಾನ ಹಂತಹಂತವಾಗಿ ಬೆಳದು ಬಂದಿದೆ.
ವಾಲ್ಮೀಕಿ, ಕಬೀರ, ಕನಕದಾಸರು, ಸ್ವಾಮಿ ವಿವೇಕಾನಂದರ ವಿಚಾರಗಳ ಮೂಲಕ ಜ್ಞಾನವನ್ನು ಭಾರತದ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ವಿಶೇಷ ಜ್ಞಾನವನ್ನು ಹೊಂದಿದೆ. ಅಧ್ಯಯನ ಪೀಠಗಳು ವಿಶೇಷ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಗಾರ, ಚಿಂತನೆ,ವಿಚಾರ ಸಂಕಿರಣಗಳು ಆಯೋಜಿಸುವದು ಅವಶ್ಯಕವಾಗಿದೆ. ಪ್ರಸ್ತುತ ತಂತ್ರಜ್ಞಾನದ ಪ್ರಭಾವದಿಂದಾಗಿ ಜ್ಞಾನದ ಹರಿವು ಹೆಚ್ಚಾಗಿದೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ವೆಂಕಟಗಿರಿ ದಳವಾಯಿ ವಾಲ್ಮೀಕಿ ರಾಮಾಯಣ ಐತಿಹಾಸಿಕ ಮಹತ್ವ ಮತ್ತು ವೈಶಿಷ್ಟ್ಯಗಳು ಎಂಬ ವಿಷಯದ ಕುರಿತು ಮಾತನಾಡಿ ವಾಲ್ಮೀಕಿ ರಾಮಾಯಣವನ್ನು ವಿವಿಧ ರೀತಿಯಲ್ಲಿ ಜನಮಾನರು ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ. ರಾಮಾಯಣ ಮತ್ತು ಮಹಾಭಾರತ ಇವು ಭಾರತೀಯ ಸಂಸ್ಕೃತಿಯ ಭಾಷೆಗಳಾಗಿವೆ. ಬುಡಕಟ್ಟು ಸಮುದಾಯದಗಳಲ್ಲಿ ರಾಮಾಯಣ ಹಾಸುಹೊಕ್ಕಾಗಿದೆ ವಾಲ್ಮೀಕಿ ಮತ್ತು ವ್ಯಾಸ ಅವರು ಭಾರತದ ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡಿದ್ದಾರೆ ರಾಮಾಯಣ ಪುರೋಹಿತ, ಮಠಗಳಲ್ಲಿ ಮತ್ತು ವಚನಕಾರರಲ್ಲಿ ಮಾತ್ರ ರಾಮಾಯಣ ಹಾಸುಹೊಕ್ಕಾಗಿತ್ತು, ಮೂಲ ರಾಮಾಯಣದಿಂದ ಹಿಡಿದು ಇಲ್ಲಿಯವರೆಗೆ ರಾಮಾಯಣದಲ್ಲಿ ಭಿನ್ನವಾದ ಪಠ್ಯಗಳಿಂದ ಹಲವಾರು ಮಿಥ್ಯಗಳನ್ನು ಕಾಣಸಿಗುತ್ತವೆ ಎಂದರು. ರಾಮನನ್ನು ವೈಭವಿಕರಿಸುವ ಉದ್ದೇಶ ವಾಲ್ಮೀಕಿ ಇರಲಿಲ್ಲ. ಆದರೆ ಅನೇಕ ಐತಿಹಾಸಿಕ ಸಂಶೋಧಕರು ರಾಮಾಯಣವನ್ನು ಭಿನ್ನವಾಗಿ ಹೇಳಲು ಪ್ರಯತ್ನಿಸಿದ್ದಾರೆ ಎಂದ ಅವರು ಕೆಲವೊಂದು ಬಡಕಟ್ಟುಗಳಲ್ಲಿ ರಾವಣನನ್ನು ಪೂಜಿಸುತ್ತಿದ್ದರು ಎಂದ ವಿವರಿಸಿದರು. ವಾಲ್ಮೀಕಿ ಅವರು ತಮ್ಮ ಮೂಲ ರಾಮಾಯಣವನ್ನು ಸೃಜನಶಿಲತೆ ಮೂಲಕ ಹೇಳಿದ್ದಾರೆ ಎಂದರು.
ಬೆಂಗಳೂರಿನ ಆರ್. ವಿ.ಪ್ರಥಮ ದರ್ಜೆ ಕಾಲೇಜಿನ
ನಿವೃತ್ತ ಪ್ರಾಧ್ಯಾಪಕ ಶ್ರೀರಾಮ ಭಟ್ ಅವರು
ವಾಲ್ಮೀಕಿ ರಾಮಾಯಣದಲ್ಲಿ ಧರ್ಮದ ಪರಿಕಲ್ಪನೆ: ರಾಜ ಧರ್ಮ, ಕುಟುಂಬ ಧರ್ಮ ಮತ್ತು ಮಾನವ ಧರ್ಮ ಎಂಬ ವಿಷಯದ ಕುರಿತು ಮಾತನಾಡಿ
ರಾಮಾಯಣದಲ್ಲಿ ಧರ್ಮಕ್ಕೆ ವಿಶೇಷವಾದ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ರಾಮನು ನಡೆದ ಮಾರ್ಗವನ್ನು ಧರ್ಮವೇಂದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಲಾದ್ದಾನೆ.
ರಾಮಾಯಣವನ್ನು ಎರಡು ಪರಂಪರೆಗಳನ್ನು ನೋಡಬಹುದು ಒಂದು ಜಾನಪದ ರಾಮಾಯಣ ಇನ್ನೊಂದು ಶಿಷ್ಟ ಸಾಹಿತ್ಯವನ್ನು ಹೊಂದಿದ ರಾಮಾಯಣವಾಗಿ ರೂಪುಗೊಂಡಿದೆ ಎಂದ ಅವರು ರಾಮಾಯಣ ಮಹಾಭಾರತ ಎರಡು ಮಹಾನ್ ಕಾವ್ಯಗಳು ಭಾರತದ ಸಮಗ್ರತೆಯನ್ನು ಹೊಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡದ ಸಿ.ಎಂ.ಡಿ.ಆರ್.ನಿರ್ದೇಶಕ ಪ್ರೊ.ಬಸವಪ್ರಭು ಜಿರ್ಲಿ ಮಾತನಾಡಿ ಜ್ಞಾನದ ಮೂಲಕ ವಿಜ್ಞಾನದ ವಿವಿಧ ವಿಷಯಗಳನ್ನು ತಿಳಿಯಬಹುದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ವಿಜ್ಞಾನಿಕ ಹಿನ್ನೆಲೆ ಇದೆ. ಭಾರತದ ಸಂಸ್ಕೃತಿ ಮತ್ತು ಪರಂಪರೆಯು ವೈಜ್ಞಾನಿಕತೆ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ ಎಂದರು.
ರಾಮಾಯಣ ಒಂದು ವೈಜ್ಞಾನಿಕ ಗ್ರಂಥವಾಗಿದ್ದು, ಮನೋವೈಜ್ಞಾನಿಕ, ಸಾಮಾಜಿಕವಾಗಿ ಅನೇಕ ರೀತಿಯ ವೈಜ್ಞಾನಿಕ ವಿಷಯಗಳನ್ನು ರಾಮಾಯಣದಲ್ಲಿ ಒಳಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠದ ಸಂಯೋಜಕರಾದ ಪ್ರೊ.ಅಶೋಕ ಹುಲಬಂಡಿ, ವಿಚಾರ ಗೋಷ್ಠಿಯ ಸಂಯೋಜಕ ಡಾ.ದುಂಡಪ್ಪ ಬಡಲಕ್ಕನವರ, ಸಿ.ಎಂ.ಡಿ.ಆರ್ ಪ್ರಾಧ್ಯಾಪಕ ಪ್ರೊ.ಜೈ ಪ್ರಭಾಕರ, ಡಾ.ನಯನತಾರಾ, ಡಾ.ಪ್ರತೀಕ ಮಾಳಿ, ಪ್ರೊ.ವೇದಮೂರ್ತಿ, ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಜರಿದ್ದರು.
ಫೋಟೋ ಶೀರ್ಷಿಕೆ:
ಕರ್ನಾಟಕ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠ ಮತ್ತು ಸಿ.ಎಂ.ಡಿ.ಆರ್ ಸಂಸ್ಥೆ ಆಯೋಜಿಸಿದ ಒಂದು ದಿನದ ವಿಚಾರ ಗೋಷ್ಠಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎ.ಎಂ.ಖಾನ್ ಉದ್ಘಾಟಿಸಿ ಮಾತನಾಡಿದರು.


