ರಾಮದುರ್ಗ ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಾರ್ಯಾಲಯ ವತಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಗ್ರಾಮ ಪಂಚಾಯಿತಿ ಅವರಾದಿ ಗ್ರಂಥಾಲಯದಲ್ಲಿ ಶನಿವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹಾದೇವಿ ಬಾಡಗಾರ, ಸದಸ್ಯರಾದ ಮಂಜುಳಾ ರೋಣದ, ವಿಜಯಲಕ್ಷ್ಮೀ ದಾಸರ, ವಸಂತಗೌಡ ಪಾಟೀಲ, ಅಡಿವೆಪ್ಪ ಮೋಟೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ ಎಸ್ ಗುಡದನ್ನವರ, ಗ್ರಂಥಾಲಯ ಮೇಲ್ವಿಚಾರಕ ತುಕಾರಾಮ ಮೋಟೆ, ಪುಂಡಲೀಕ ಮೇಟಿ ಹಾಗೂ ಮಹಿಳಾ ಸ್ವ – ಸಹಾಯ ಸಂಘಗಳ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.


