ಚಡಚಣ: ಈ ತಪಾಸಣೆ ಕಾರ್ಯಕ್ರಮದಲ್ಲಿ ೧೨೦ಕ್ಕೂ ಹೆಚ್ಚಿನ ಜನರು ಭಾಗವಹಿಸಿ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡರು. ಈ ತಪಾಸಣೆಯಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ರೋಗ, ಸಂಧಿ ರೋಗ, ಮೂಳೆ ಹಾಗೂ ಕೀಲು ರೋಗ, ರಕ್ತ ಹೀನತೆ ಪರೀಕ್ಷೆಗಳನ್ನು ಮಾಡಲಾಯಿತು. ಅಲ್ಲದೆ ಉಚಿತವಾಗಿ ಮಾತ್ರೆಗಳು ಹಾಗೂ ವೈದ್ಯರೊಂದಿಗೆ ಆಪ್ತ ಸಮಾಲೋಚನೆ ನಡೆಸಲಾಯಿತು ಎಂದು ಡಾ.ಜಿ.ಬಿ.ಕುಂಬಾರರವರು ಹೇಳಿದರು.
ಶುಕ್ರವಾದಂದು ರೇವತಗಾಂವ ಗ್ರಾಮದ ದಿ. ಬಂದಣ್ಣಸಾಹುಕಾರ ಕುಂಬಾರರವರ ನಾಲ್ಕನೇ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬರವನ್ನು ಉದ್ದೇಶಿಸಿ ಮಾತನಾಡಿದ ಅವರು. ನಿಯಮಿತ ಆರೋಗ್ಯ ತಪಾಸಣೆ ಮಾಡುವ ಮೂಲಕ ಸಕಾಲದಲ್ಲಿ ರೋಗಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮಹಾದೇವ ಅಂಕಲಗಿಯವರು ಮಾತನಾಡುತ್ತ. ಗ್ರಾಮೀಣ ಭಾಗದ ಸಾಮಾನ್ಯ ಜನರು ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಇಂತಹ ಆರೋಗ್ಯ ತಪಾಸಣಾ ಶಿಬಿರಗಳಿಂದ ಜನರು ಆರೋಗ್ಯ ತಪಾಸಣೆ ಮಾಡಿಕೊಂಡು ಚಿಕಿತ್ಸೆ ಪಡೆಯಲು ಸಾಧ್ಯ ಎಂದರು.
ಜನರಿಂದ ಉತ್ತಮ ಸ್ಪಂದನೆ: ಶಿಬಿರಕ್ಕೆ ಆಗಮಿಸಿದ ನೂರಾರು ಜನರು ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡರು. ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ತಜ್ಞ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆದರು. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂತು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗೌರವ: ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಕೀರ್ತಿ ಹಕ್ಕೆ(ಪ್ರಥಮ) ೫೦೦೧ ರೂ. ವಿಜಯಲಕ್ಷ್ಮೀ ಉಮದಿ(ದ್ವಿತೀಯ) ೩೦೦೧ ರೂ. ಹಾಗೂ ವಿನಾಯಕ ದೈವಾಡಿ(ತೃತೀಯ) ೨೦೦೧ ರೂ. ಬಹುಮಾನ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
’ಆರೋಗ್ಯವೇ ಭಾಗ್ಯ’ ಎಂಬ ಆಶಯದೊಂದಿಗೆ ಆಯೋಜಿಸಲಾಗಿದ್ದ ಈ ಶಿಬಿರವು ನಿಜಕ್ಕೂ ಅನೇಕ ಜನರ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಯಿತು.
ಈ ವೇಳೆಯಲ್ಲಿ ತಜ್ಞ ವೈದ್ಯರಾದ ಡಾ.ವಿವೇಕ ನಿಕಮ್, ಡಾ.ಅಕ್ಷಯ ಗುಂಡ, ಡಾ.ಅತುಲ ನಿಕಮ್, ಡಾ. ಬಿ.ಸಿ.ನಿಂಬರಗಿ, ಡಾ.ದೇವೇಂದ್ರ ಕುಂಬಾರ, ಆರ್.ಡಿ.ಹಕ್ಕೆ, ಸುರೇಶ ಬಗಲಿ, ಗುರು ಜೇವೂರ, ಜೆಇಇ ಎಂ.ಬಿ.ಕುಂಬಾರ, ಮಹಾದೇವ ದೈವಾಡಿ, ಚೆನ್ನಪ್ಪ ಕುಂಬಾರರವರುಗಳು ಸೇರಿದಂತೆ ಮಂಗಳವೇಡಾದ ಬ್ಲೂಕ್ರಾಸ್ ಲ್ಯಾಬೋರೇಟರಿಯ ಪ್ರತಿನಿಧಿಗಳಾದ ಪ್ರಕಾಶ, ಚೆನ್ನು ಹಾಗೂ ಸಂಜೀವಿನಿ ಆಸ್ಪತ್ರೆಯ ಸಿಬ್ಬಂದಿಗಳು, ಕುಟುಂಬಮತ್ತು ಗ್ರಾಮಸ್ಥರ ಸಹಕಾರದಿಂದ ಶಿಬಿರವು ಯಶಸ್ವಿಯಾಗಿ ನೆರವೇರಿತು.


