ಕರ್ಕಶ ಶಬ್ದ ಮಾಡುವ ಸೈಲ್ಸರ್, ಕಾರಿನ ಟಿಂಟೆಡ್ ಕೂಲಿಂಗ ಪಿಲ್ಮ ತೆರವುಗೊಳಿಸಿದ ಪಿಎಸ್ಆಯ್ ಸಂಜಯ ತಿಪ್ಪರೇಡ್ಡಿ
ಮುದ್ದೇಬಿಹಾಳ : ಬಸವೇಶ್ವರ ವೃತ್ತದಲ್ಲಿ ಕರ್ಕಶ ಶಬ್ದ ಉಂಟು ಮಾಡುವ ಸೈಲೆನ್ಸರ್ ಬೈಕ ತಡೆದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಬೈಕನ್ನು ವಶಕ್ಕೆ ಪಡೆದ ಮುದ್ದೇಬಿಹಾಳ ಪೋಲಿಸ್ ಠಾಣೆಯ ಪಿಎಸ್ಆಯ್ ಸಂಜಯ ತಿಪ್ಪರೇಡ್ಡಿ ನೇತೃತ್ವದ ತಂಡವು ವಾಹನ ಸವಾರನಿಗೆ, ಸೈಲೆನ್ಸರ್ ತೆಗೆಯಿಸಿ ದಂಢ ವಿದಿಸಿ ಸೂಕ್ತ ಎಚ್ಚರಿಕೆ. ಎರ್ರಾ ಬಿರ್ರಿ ಬೈಕ ಓಡಿಸುತ್ತಾ ಸಾಗಿದರೆ ಬಿಳ್ಳುತ್ತೆ ಮತ್ತೆ ದಂಡ ಎಂದು ಎಚ್ಚರಿಸಿದರು. ಕಾರಿಗೆ ಕೂಲಿಂಗ ಫೀಲ್ಮ ಇದ್ದರೆ ಹುಷಾರ, ಮುದ್ದೇಬಿಹಾಳ ಪೋಲಿಸರು ವಿಶಿಷ್ಟ ಕಾರ್ಯಾಚರಣೆ ಪಿಎಸ್ಆಯ್ ಸಂಜಯ ತಿಪ್ಪರೇಡ್ಡಿ ಅವರು ಅಕ್ರಮವಾಗಿ ಟಿಂಟೆಡ್ (ಕೂಲಿಂಗ)ಗ್ಲಾಸ್ ಅಳವಡಿಸಿದ ವಾಹನಗಳ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಿದರು. ತಪಾಸಣೆ ಸಮಯದಲ್ಲಿ ಟಿಂಟೆಡ್ ಗ್ಲಾಸ್ ಬಳಸಿ ಕಾನೂನು ಉಲ್ಲಂಘಿಸುವ ವಾಹನವನ್ನು ತಡೆದು ಸ್ಥಳದಲ್ಲಿ ತೆರವು ಗೊಳಸಿ ತೆಗೆದುಹಾಕಿ ಚಾಲಕರಿಗೆ ಅರಿವು ಮೂಡಿಸಿದರು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೋಲಿಸರು ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದರು. ರಸ್ತೆ ಸುರಕ್ಷತೆ ಖಚಿತಪಡಿಸಿಕೊಳ್ಳಲು ಈ ಕಾರ್ಯಚರಣೆ ನಡೆಸಲಾಗಿದೆ ಎಂದು ಪಿಎಸ್ಆಯ್ ಸಂಜಯ ತಿಪ್ಪರೇಡ್ಡಿ ಹೇಳಿದರು. ಈ ಸಮಯದಲ್ಲಿ ಎಎಸ್ಆಯ್ ಕರೆಪ್ಪ ಅಸ್ಕಿ, ಹೊಕಳೆ, ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು.


