ಊರಿಗೆ ಒಂದು ಕೆರೆ ಹಾಗೂ ರುದ್ರಭೂಮಿ ಮುಖ್ಯ : ಸತೀಶ ನಾಯ್ಕ

Sandeep Malannavar
WhatsApp Group Join Now
Telegram Group Join Now

ಹಸಿರು ಕ್ರಾಂತಿ : ಎಂ. ಕೆ. ಹುಬ್ಬಳ್ಳಿ :
ವೈಯಕ್ತಿಕ  ಜೀವನಕ್ಕೆ ಆಸ್ತಿ ಎಷ್ಟು ಮುಖ್ಯವೋ,  ಅಷ್ಟೇ ಒಂದು ಊರಿಗೆ ಕೆರೆ ಹಾಗೂ ರುದ್ರಭೂಮಿ ಮುಖ್ಯ  ಎಂದು ಬೆಳಗಾವಿಯ ಶ್ರೀ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಅವರು  ಹೇಳಿದರು.

ಅವರು ಯೋಜನೆಯ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ರಮ ದಡಿಯಲ್ಲಿ ಪಟ್ಟಣದ ಎರಡು  ರುದ್ರಭೂಮಿಗೆ ಸಿಲಿಕಾನ್ ದಹನ  ಚೇಂಬರ್ ಅಳವಡಿಸಿ ಅವುಗಳನ್ನು ಪಟ್ಟಣ ಪಂಚಾಯತಕ್ಕೆ ಹಸ್ತಾಂತರಿಸಿ ಮಾತನಾಡಿ,  ಧರ್ಮಸ್ಥಳ ಧರ್ಮಾಧಿಕಾರಿಗಳು ರಾಜ್ಯದಲ್ಲಿ ಇರುವ  ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಈ ಕಾರ್ಯಕ್ರಮದಡಿ ದಹನ ಶೆಡ್, ಸಿಲಿಕಾನ್ ದಹನ ಚೇಂಬರ್, ಆವರಣ ರಚನೆ, ರುದ್ರ ಭೂಮಿಯಲ್ಲಿ ಗಿಡ ನೆಡುವುದು, ಕಟ್ಟಿಗೆ ಕೊಠಡಿ, ವಿದ್ಯುತ್ಕರಣ, ಸ್ನಾನ ಗೃಹ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ನೇರವು ನೀಡುತ್ತಿದ್ದಾರೆ. ಅವರು ಇಲ್ಲಿಯ ವರೆಗೆ 910  ರುದ್ರಭೂಮಿಗಳಿಗೆ ಸಿಲಿಕಾನ ಚೇಂಬರ್ ವಿತರಿಸಿದ್ದಾರೆ.  ಈ ಯೋಜನೆ ಅಡಿಯಲ್ಲಿ ಪಟ್ಟಣಕ್ಕೆ ಎರಡು ದಹನ ಚೇಂಬರ ಶ್ರೀ ಕ್ಷೇತ್ರದಿಂದ  ನೀಡಲಾಗಿದೆ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿಕೊಳ್ಳಿ ಎಂದರು.
ಈ ವೇಳೆ ಕಿತ್ತೂರು ಯೋಜನಾಧಿಕಾರಿ ಬಿ. ಆರ್. ಯೋಗಿಶ ವಲಯ ಮೇಲ್ವಿಚಾರಕರಾದ ಜನಾರ್ಧನ್, ಪಪಂ ಮುಖ್ಯಾಧಿಕಾರಿಗಳಾದ ರವಿ ಮಾಸ್ತಿಹೋಳಿಮಠ, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಪಕ್ಕಿರಪ್ಪ ಸಕ್ರೆನ್ನವರ, ರುದ್ರಪ್ಪ ಕೊಡ್ಲಿ, ಅದೃಶ್ಯಾನಂದ ಗದ್ದೆಹಳ್ಳಿಶೆಟ್ಟಿ, ಪ್ರಕಾಶ ಕೊಡ್ಲಿ, ಮಂಜುನಾಥ ಕಡಕೋಳ, ಪ್ರಕಾಶ ಗಿರಜಿಮಣಿ, ಸಮೀರ ಪಟೇಲ, ಸುಭಾನಿ ಅಗಸಿಬಾಗಿಲ ಲಕ್ಷ್ಮಣ ದೇಮಟ್ಟಿ, ಹಾಗೂ ಯೋಜನೆ ಸ್ವಸಹಾಯ ಸಂಘದ ಪ್ರತಿನಿಧಿಗಳು ಇದ್ದರು.

WhatsApp Group Join Now
Telegram Group Join Now
Share This Article