ಬಳ್ಳಾರಿ. ಬ. 24 : ಹಣ ಐಶ್ವರ್ಯ ಮತ್ತು ಆಸ್ತಿಗಳನ್ನು ಎಷ್ಟು ಬೇಕಾದರೂ ಸಂಪಾದಿಸಬಹುದು ಆದರೆ, ಆರೋಗ್ಯ ಹದಗೆಟ್ಟರೆ ಮತ್ತೆ ಪಡೆಯಲು ಆಗುವುದಿಲ್ಲ ಕಾರಣ ಯುವಕ, ಯುವತಿಯರು ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ, ಸದೃಢರಾಗಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಕಿವಿ ಮಾತು ಹೇಳಿದರು.
ಅವರು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಕೆ ಫೌಂಡೇಶನ್ ಹಾಗೂ ಬಳ್ಳಾರಿ ಜಿಲ್ಲಾ ಫಿಟ್ನೆಸ್ ಅಸೋಸಿಯೇಶನ್ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾಲ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಪುರುಷ ಹಾಗೂ ಮಹಿಳೆಯರ ದೇಹದಾಡ್ಯ ಸ್ಪರ್ಧೆ ಹಾಗೂ ಪವರ್ ಲಿಫ್ಟಿಂಗ್ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ಉತ್ತಮ, ಸದೃಢ ಆರೋಗಕ್ಕಾಗಿ ವ್ಯಾಯಾಮ, ಓಟ, ಜಾಗಿಂಗ್ ರೂಡಿಸಿಕೊಳ್ಳಬೇಕು, ಇತಿ ಮಿತಿಯಲ್ಲಿ ಶುಚಿಯಾದ ಆಹಾರ ಸೇವನೆಯಿಂದ ಸದೃಢ ಆರೋಗ್ಯವನ್ನು ಪಡೆಯಬಹುದು, ಯುವಕರು ಜಿಮ್, ವ್ಯಾಯಾಮದಲ್ಲಿ ತೊಡಗಿಕೊಳ್ಳಬೇಕು ಇದರಿಂದ ದೈಹಿಕ ದೃಢತೆಯನ್ನು ಪಡೆಯಬಹುದು, ಕಳೆದ 2021-22ರಲ್ಲಿ ಎದುರಾದ ಕೋವಿಡ್ ಸಂದರ್ಭದಲ್ಲಿ ಅನೇಕ ಯುವಕರು, ದೊಡ್ಡವರನ್ನು ಕಳೆದುಕೊಂಡಿದ್ದೇವೆ. ದೇಹಕ್ಕೆ ವ್ಯಾಯಾಮ ಅತ್ಯಗತ್ಯ. ಜಿ.ಕೆ.ಸ್ವಾಮಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಿ.ಕೆ.ಸ್ವಾಮಿ (ವಿಜಯ್) ಯುವಕರಿಗೆ ಉತ್ತಮ ವೇದಿಕೆ ಕಲ್ಪಿಸಿದ್ದಾರೆ ಇದು ಶ್ಲಾಘನೀಯ ಎಂದರು. ಯುವಕ ಯುವತಿಯರು ಫಿಟ್ನೆಸ್ ಗಾಗಿ ಸಾಕಷ್ಟು ಶ್ರಮಪಡುತ್ತಿರುವುದು ಕಂಡು ಬರುತ್ತಿದೆ. ನಮ್ಮ ಬಳ್ಳಾರಿಯಲ್ಲಿ ಜಿಲ್ಲಾ ಕ್ರೀಡಾಂಗಣ, ಹಾಕಿ ಸ್ಟೇಡಿಯಂ, ಬ್ಯಾಸ್ಕೆಟ್ ಬಾಲ್, ಸ್ವಿಮ್ಮಿಂಗ್, ಒಳಾಂಗಣ ಕ್ರೀಡಾಂಗಣ ಇದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಸಿಂಥಟಿಕ್ ಕ್ರೀಡಾಂಗಣ ಧೂಳು ತಿನ್ನುತ್ತಿದೆ, ಅದನ್ನು ಸ್ವಚ್ಛಗೊಳಿಸುವ ಕಾರ್ಯವಾಗಬೇಕು ಎಂದರು. ಜಿ.ಕೆ. ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಿ.ಕೆ.ಸ್ವಾಮಿ, ಉದ್ಯಮಿಗಳು, ಅದರಿಂದ ಬರುವ ಹಣದಲ್ಲಿ ಸಮಾಜಕ್ಕೆ ಏನಾದ್ರೂ ಕೊಡುಗೆ ನೀಡಬೇಕು ಎಂದು ಮುಂದೆ ಬಂದಿದ್ದಾರೆ, ಇಂತವರು ಬಹಳ ಅಪರೂಪ, ಪ್ರಸ್ತುತ ದಿನಗಳಲ್ಲಿ ಎಲ್ಲರ ಬಳಿ ಹಣವಿದೆ. ಆದರೆ, ಖರ್ಚು ಮಾಡುವ ಗುಣವಿರಬೇಕು. ಜಿ.ಕೆ.ಸ್ವಾಮಿ ಅವರು ಇಲ್ಲಿವರೆಗೆ ಆರೋಗ್ಯ, ಶಿಕ್ಷಣ, ಮಕ್ಕಳಿಗೆ ಲ್ಯಾಪ್ ಟಾಪ್ ವಿತರಣೆ, ಬಡಜನರ ಸೇವೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಗಮನಸೆಳೆದಿದ್ದಾರೆ. ಇದೆಲ್ಲದರ ಜೊತೆಗೆ ಕ.ಕ.ವಿಭಾಗ ಮಟ್ಟದ ಯುವಕ, ಯುವತಿಯರಿಗೆ ದೇಹದಾಡ್ಯ ಸ್ಪರ್ಧೆಗಳನ್ನು ಆಯೋಜಿಸಿ, ಬಳ್ಳಾರಿಯ ಕೀರ್ತಿ ಹೆಚ್ಚಿಸಿದ್ದಾರೆ, ಅವರಿಗೆ ನಮ್ಮೆಲ್ಲರ ಪ್ರೋತ್ಸಾಹ ಇರಲಿದೆ ಎಂದರು.
ಜಿಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಿ.ಕೆ.ಸ್ವಾಮಿ (ವಿಜಯ್) ಮಾತನಾಡಿ, ಪ್ರತಿಯೊಬ್ಬ ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಕ್ರೀಡೆಗಳಲ್ಲಿ ಸೋಲು, ಗೆಲುವು ಅನ್ನುವುದಕ್ಕಿಂತ ಭಾಗವಹಿಸುವುದು ಮುಖ್ಯ ಕ.ಕ.ಭಾಗದ ನಮ್ಮ ಯುವಕ, ಯುವತಿಯರಿಗೆ ಇದೊಂದು ಸ್ನೇಹ ಪೂರ್ವಕವಾಗಿ ಈ ಜಿಮ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ತೀರ್ಪುಗಾರರು ಅರ್ಹರಿಗೆ ಮಾತ್ರ ತೀರ್ಪು ನೀಡಿ, ಸಹಕರಿಸಬೇಕು ಎಂದರು. ತೀರ್ಪುಗಾರರಾಗಿ ಮೈಸೂರಿನ ಗಣೇಶ್ ಪ್ರಸಾದ್, ಲಕ್ಷ್ಮಿ ದಯಾನಂದ್, ಸುರೇಂದ್ರ, ಚಂದ್ರಪ್ಪ, ರಾಜೇಶ್ ಹೊಸಪೇಟೆ, ತಿಪ್ಪಯ್ಯ ಜಿ., ಲಕ್ಷ್ಮಿ ನಾರಾಯಣ, ಗೋಪಾಲ್ ಜಿ., ಶಶಿಧರ್, ರಘುಪತಿ, ಹಜರತ್ ಅಲಿ, ಎಂ.ನಾರಾಯಣ, ಮಂಜುನಾಥ್ ಚಿಕ್ಕ ಮಂಗಳೂರು ಅವರು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಕರಾಟೆ ಕಟ್ಟೇಸ್ವಾಮಿ
ಪಾಲಿಕೆ ಸದಸ್ಯ ಗೋವಿಂದರಾಜಲು, ರಘು, ಓಬಳೇಶ್, ಮೇಘನಾಥ್ ರೆಡ್ಡಿ, ಉಜ್ವಲಾ, ಕೆ.ಯರಿಸ್ವಾಮಿ, ಬಂಡಿಹಟ್ಟಿ ರಾಜು, ಇತರರಿದ್ದರು.


