ಪಿಎಂಜೆಜೆಬಿವೈ, ಪಿಎಂಎಸ್ ಬಿವೈ ಯೋಜನೆ ಲಾಭ ಪಡೆಯಿರಿ: ಎಪಿವೈ ಪನಿಶಾಯನ್ ಎಂ

Pratibha Boi
ಪಿಎಂಜೆಜೆಬಿವೈ, ಪಿಎಂಎಸ್ ಬಿವೈ ಯೋಜನೆ ಲಾಭ ಪಡೆಯಿರಿ: ಎಪಿವೈ ಪನಿಶಾಯನ್ ಎಂ
WhatsApp Group Join Now
Telegram Group Join Now
ಕಾಗವಾಡ: ಪಿಎಂಜೆಜೆಬಿವೈ, ಪಿಎಂಎಸ್ ಬಿವೈ, ಎಪಿವೈ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡೆಸಿಕೊಳ್ಳುವಂತೆ ಕೆನರಾ ಬ್ಯಾಂಕ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಪನಿಶಾಯನ್ ಎಂ ಹೇಳಿದರು.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾ ಸಭಾವನದಲ್ಲಿ ತಾಲ್ಲೂಕು ಪಂಚಾಯತ ಹಾಗೂ ಕೆನರಾ ಬ್ಯಾಂಕ್ ಸಂಯೋಗದಲ್ಲಿ ಶುಕ್ರವಾರ ನಡೆದ ಹಣಕಾಸು ಸಾಕ್ಷರತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಸ್ಕ್ಯಾಮ್ ಪ್ರಕರಣಗಳು ಹೆಚ್ಚುತ್ತಿದ್ದು, ಆನಲೈನ್ ಮೂಲಕ ಬ್ಯಾಕಿಂಕ್ ವ್ಯವಹಾರ ನಡೆಸುವ ಪ್ರತಿಯೊಬ್ಬರು ಜಾಗರೂಕರಾಗಿರಬೇಕು ಎಂದು ತಿಳಿಸಿದರು.
ಇಒ ವೀರಣ್ಣ ವಾಲಿ ಅವರು ಮಾತನಾಡಿ, ಎನ್ಆರ್ ಎಲ್ ಎಂ ಯೋಜನೆಯಡಿ ಸರ್ಕಾರ ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಲಿಂಕೇಜ್ ಹಾಗೂ ವೈಯಕ್ತಿಕ ಮಹಿಳಾ ಉದ್ಯಮಿದಾರರಿಗೆ ಬ್ಯಾಂಕ್ ಸಾಲ ಕೊಡಿಸುಲಾಗುತ್ತಿದೆ. ಮಹಿಳೆಯರು ಇದರ ಲಾಭ ಪಡೆದು ಉದ್ಯಮ ಉತ್ತೇಜಿಸುವುದು ಹೆಚ್ಚಿನ ಜನರಿಗೆ ಕೆಲಸ ಒದಗಿಸುವುದಕ್ಕೆ ಪೇರೇಪಣೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಬಿ ವಿಜಯಕುಮಾರ, ಎನ್ಆರ್ ಎಲ್ ಎಂ ಸಂಯೋಜಕರಾದ ಆನಂದ ವಂಟಗೂಡೆ, ಕೆನರಾ ಬ್ಯಾಂಕ್ ಸಂಯೋಜಕ ಬಸವರಾಜ, ಸೆಲ್ಕೊ ಸೋಲಾರ್ ಸಂಯೋಜಕ ಬಸವರಾಜ ಅಗಸರ, ಅಕ್ಷತಾ ಲಟ್ಟೆ ಎನ್ಆರ್ ಎಲ್ ಎಂ ಪದಾಧಿಕಾರಿಗಳು, ಸಿಬ್ಬಂದಿಗಳು ಮುಂತಾದವರು ಇದ್ದರು.
WhatsApp Group Join Now
Telegram Group Join Now
Share This Article