ಚಿಕ್ಕೋಡಿ: ಸಿ.ಟಿ.ಇ. ಸಂಸ್ಥೆಯ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥೆಯ ಉಪಾಧ್ಯಕ್ಷರಾದ ವಿ. ಎಸ್. ಮಾಂಜರೇಕರ ರವರು ವಹಿಸಿ ಶತಮಾನದಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ಕರ್ಷ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು ಇಂದಿಗೂ ಕೂಡಾ ವಿದ್ಯಾರ್ಥಿಗಳಿಗೆ ಆದುನಿಕ ಶಿಕ್ಷಣ ನೀಡುವಲ್ಲಿ ಸಮರ್ಥವಾಗಿದೆ ಪಾಲಕರ ಅಪೇಕ್ಷೆಗೂ ಮೀರಿ ಎಲ್ಲ ರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು ನೀಡಲಾಗುವದು ಎಂದು ಹೇಳಿದರು. ಅಲ್ಲದೇ ಪಾಲಕರಿಗೆ ತಮ್ಮ ಮಕ್ಕಳನ್ನು ಮೋಬೈಲ್ ಮತ್ತು ಟಿ.ವಿ. ಗಳಿಂದ ಅಂತರ ಕಾಯ್ದುಕೊಳ್ಳುವಂತೆ ಗಮನಹರಿಸಬೇಕೆಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪನಿರ್ದೇಶಕರ ಕಾರ್ಯಾಲಯದ ಶಿಕ್ಷಣ ಸಂಯೋಜಕರಾದ ಎ. ಹೆಚ್. ಬಿರಾದರ ರವರು ಮಾತನಾಡಿ ಮಕ್ಕಳಿಗೆ ಪೌಷ್ಠಿಕ ಅಹಾರಗಳನ್ನು ನೀಡಿ ದೇಶಕ್ಕೆ ಸದೃಢ ಮಕ್ಕಳನ್ನು ನೀಡುವ ಕಾಯಕವನ್ನು ಮಾಡಬೇಕು ಎಂದು ಪೋಷಕರಿಗೆ ತಿಳಿ ಹೇಳಿದರು. ಅಲ್ಲದೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಗುರು-ಹಿರಿಯರಿಗೆ ಗೌರವ ನೀಡುವಂತೆ ಮಕ್ಕಳನ್ನು ಬೆಳೆಸಬೇಕಾಗಿರುವದು ಇಂದಿನ ದಿನಮಾನದಲ್ಲಿ ಅನಿವಾರ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ಹಂತ ಮುಗಿಸಿ ಪ್ರಾಥಮಿಕ ಹಂತಕ್ಕೆ ಪ್ರವೇಶಿಸಿದ ಯು.ಕೆ.ಜಿ ಪುಟಾಣಿಗಳನ್ನು ಗೌರವ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸಿ.ಟಿ.ಇ. ಸಂಸ್ಥೆಯ ಹಿರಿಯ ನಿರ್ದೇಶಕರಾದ ವಿ.ಪಿ. ಶೇಡಬಾಳ ರವರು ಗೌರವ ಅತಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಹಾಗೂ ಹಿರಿಯ ನಿರ್ದೇಶಕರಾದ ಎಸ್. ಬಿ. ಕುಲಕರ್ಣಿ,ನಿರ್ದೇಶಕರಾದ ಓಂಕಾರ ಎಸ್. ಕುಲಕರ್ಣಿ, ಕಿರಣ ಸಿ. ಕುಲಕರ್ಣಿ, ಜಂಟಿ ಕಾರ್ಯದರ್ಶಿಗಳಾದ ಶ್ರೀ ಮಿಥುನ ಎಸ್. ದೇಶಪಾಂಡೆ, ಸಂಕೇತ ವಿ. ಮಾಂಜರೇಕರ, ಸಿ.ಬಿ.ಎಸ್.ಇ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಎ. ಪಿ. ಜೋಶಿ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾರಾದ ಮಹಾಂತೇಶ ಎಸ್. ಮಲಾಬಾದೆ ಉಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆಯೋಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಿಯಾದ ಕು. ರೂಪಾ ಪಿ. ರಾಂಪೂರ ಸ್ವಾಗತಿಸಿದರು, ಶಿಕ್ಷಕರಾದ ಸುಧೀರ. ಜೆ. ಪಾಟೀಲ ಅಧ್ಯಕ್ಷರ ಮತ್ತು ಅತಿಥಿಗಳ ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಆಕರ್ಷಕ ನೃತ್ಯ ಕಾರ್ಯಕ್ರಮಗಳು ಜರುಗಿದವು. ಹಾಗೂ ಈ ಸಂದರ್ಭದಲ್ಲಿ ಸಿ.ಟಿ.ಇ. ಸಂಸ್ಥೆಯ ಅಂಗಸಂಸ್ಥೆಯಾದ ಪದವಿ, ಪದವಿಪೂರ್ವ ಮತ್ತು ಪತ್ರಕಾರರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ಪಾಲಕರು ಅಪಾರ ಪ್ರಮಾಣದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸದರು. ಕಾರ್ಯಕ್ರಮದ ನಿರೂಪಣೆಯನ್ನು ಆನಂದ ಸಿ ಬ್ಯಾಕೂಡೆ ಮತ್ತು ಶ್ರೀಮತಿ ಎ. ಎಸ್. ಮಂಗಾವತಿರವರು ನಿರ್ವಹಿಸಿದರು.


