ಹುನಗುಂದ: ಸನಾತನ ಧರ್ಮ, ಸಂಸ್ಕೃತಿಯ ಮೇಲೆ ವಿದೇಶಿಗರಿಂದ ನಿರಂತರ ದಾಳಿಗಳು ನಡೆಯುತ್ತಾ ಬಂದರೂ ಇವುಗಳ ಕುರಿತು ಜನರಿಗಿರುವ ಭಕ್ತಿ ಮತ್ತು ಶೃದ್ದೆಯನ್ನು ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.
ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀಗುರು ಸಾರ್ವಭೌಮ ಪಾದಯಾತ್ರಾ ಸಮಿತಿ ಆಶ್ರಯದಲ್ಲಿ ಮಂತ್ರಾಲಯಕ್ಕೆ ೨೫ನೇ ವರ್ಷದ ಪಾದಯಾತ್ರೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಯ್ಯೋಧ್ಯ, ಕಾಶಿ, ಸೋಮನಾಥ ದೇವಾಲಯಗಳ ಮೇಲೆ ದಾಳಿಯಾಗಿರುವುದು ಇದಕ್ಕೆ ಸ್ಪಷ್ಟ ನಿದರ್ಶನ. ಸಮಾಜ ಮತ್ತು ವ್ಯಕ್ತಿತ್ವದ ಪರಿವರ್ತನೆಯ ಭಾಗವೇ ಪುಣ್ಯಕ್ಷೇತ್ರಗಳಿಗೆ ಕೈಗೊಳ್ಳುವ ಪಾದಯಾತ್ರೆ. ಇವುಗಳಿಂದ ಚಿತ್ತಶುದ್ದಿ ಹಾಗೂ ಸಾಂಗತ್ಯ ಸಂಸ್ಕಾರ ನೀಡುತ್ತದೆ ಎಂದು ಹೇಳಿದರು.
ಕಲಬುರ್ಗಿ ದಕ್ಷಿಣ ಕೇತ್ರದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಪಾದಯಾತ್ರೆಯಿಂದ ಕೇವಲ ದೇಹ ದಂಡನೆಯಾದರೆ ಸಾಲದು. ಅದರ ಅನು?ನ ವ?ವಿಡಿ ಆಗಬೇಕು. ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.
ಪಾದಯಾತ್ರೆ ಸಮಿತಿ ಅಧ್ಯಕ್ಷ ಮಾಧವ ದೇಶಪಾಂಡೆ, ಪ್ರಾಸ್ತಾವಿಕವಾಗಿ ಮಾತನಾಡಿ, ಸರಳ ಆಲೋಚನೆಯಿಂದ ಆರಂಭವಾದ ಪಾದಯಾತ್ರಯು ಇಂದು ರಜತ ಸಂಭ್ರಮದ ಮಹತ್ವದ ಹಂತವನ್ನು ತಲುಪಿದ್ದು, ರಾಘವೇಂದ್ರ ಸ್ವಾಮಿಗಳ ಪರಮಾನುಗ್ರಹದಿಂದ ಭಕ್ತರ ಬದುಕಿಗೆ ದಾರಿದೀಪವಾಗಿ ಬೆಳಗಿದೆ. ಈ ಪವಿತ್ರ ಪರಂಪರೆ ಮುಂದಿನ ಪೀಳಿಗೆಗೂ ಪ್ರೇರಣೆಯಾಗಲಿ, ಧರ್ಮ ಸೇವೆಯ ಸಂದೇಶವನ್ನು ಇನ್ನ? ವ್ಯಾಪಕವಾಗಿ ಹರಡಲಿ ಎಂದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಜು ಗುಡ್ಡದ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಉಮೇಶ ಮೇಟಿ, ಸಂಗನಗೌಡ ಗೌಡರ, ಶಂಭುಗೌಡ ಪಾಟೀಲ, ಭಾ? ಶಿವನಗುತ್ತಿ, ಶ್ರೀನಿವಾಸ ದೇಸಾಯಿ ಉಪಸ್ಥಿತರಿದ್ದರು.
ಸರಸ್ವತಿ ಭಜನಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ವಸಂತ ದೇಶಪಾಂಡೆ ಸ್ವಾಗತಿಸಿದರು. ವಿಜಯಕುಮಾರ ಕುಲಕರ್ಣಿ ನಿರೂಪಿಸಿದರು. ಮುರಳಿ ದೇಶಪಾಂಡೆ ವಂದಿಸಿದರು.


