ವಿವೇಕಾನಂದರ ಆಧ್ಯಾತ್ಮಿಕ ಸಾಮರ್ಥ್ಯ, ಜ್ಞಾನ ಸಂಪತ್ತು ಯುವಕರಿಗೆ ಆದರ್ಶವಾಗಿಲಿ : ನ್ಯಾ. ಚಂದ್ರಶೇಖರ ದಿಡ್ಡಿ

Sandeep Malannavar
ವಿವೇಕಾನಂದರ ಆಧ್ಯಾತ್ಮಿಕ ಸಾಮರ್ಥ್ಯ, ಜ್ಞಾನ ಸಂಪತ್ತು ಯುವಕರಿಗೆ ಆದರ್ಶವಾಗಿಲಿ : ನ್ಯಾ. ಚಂದ್ರಶೇಖರ ದಿಡ್ಡಿ
WhatsApp Group Join Now
Telegram Group Join Now

ಬಾಗಲಕೋಟೆ: ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಸಾಮರ್ಥ್ಯ,ಜ್ಞಾನ ಸಂಪತ್ತು ಯುವಕರಿಗೆ ಆದರ್ಶವಾಗಿಲಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಹಿರಿಯ ಸಿವಿಲ್‌ನ್ಯಾಯಾಧೀಶರಾದ ಚಂದ್ರಶೇಖರ ದಿಡ್ಡಿ ಹೇಳಿದರು.
ನಗರದ ಬಿವಿವ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು; ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಾಗಲಕೋಟೆ; ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬಾಗಲಕೋಟೆ, ಹಾಗೂ ಅಸೋಸಿಯೇ?ನ್, ಬಾಗಲಕೋಟೆ ಇವಗಳ ಸಂಯೋಗದಲ್ಲಿ ಬುಧವಾರ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಜಯಂತಿ – ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾಮಿ ವಿವೇಕಾನಂದರು ಸಾಮಾನ್ಯ ವ್ಯಕ್ತಿಗಿಂತ ಸಾವಿರಪಟ್ಟು ಹೆಚ್ಚಿನ ಬುದ್ಧಿಶಕ್ತಿ ಹೊಂದಿದ್ದ ಮಹಾನ್ ಚಿಂತಕರು, ಚಿಕಾಗೋ ವಿಶ್ವ ಧರ್ಮ ಸಮ್ಮೇಳದಲ್ಲಿ ಕೊನೆಯವರಾಗಿ ಭಾ?ಣ ಮಾಡಿದರೂ ಜಗತ್ತನ್ನೇ ಆಕರ್ಷಿಸಿದ ಅವರ ಬೌದ್ಧಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯ ಯುವಕರಿಗೆ ಆದರ್ಶವಾಗಿದೆ, ಇಂದಿನ ವಿದ್ಯಾರ್ಥಿಗಳು ಮೊಬೈಲ್, ರೀಲ್ಸಗಳ ಹಿಂದೆ ಬೀಳದೆ, ಹೆಚ್ಚು ಪುಸ್ತಕ ಓದಿ ಜ್ಞಾನ ಸಂಪಾದಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಜಗನ್ನಾಥ ಚವ್ಹಾಣ ಅವರು ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ ಸದೃಢ ದೇಹದಲ್ಲಿ ಸದೃಢ ಮನಸು ಇರುತ್ತದೆ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಇಂದಿನ ಯುಕರಿಗೆ ಮನದಟ್ಟು ಮಾಡಿಕೊಟ್ಟರು. ಯುವಕರು ಗುರಿ,ನಿ? ಮತ್ತು ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಭಾ?ಣ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾದ ಭಾ?ಣ ಸ್ಪರ್ಧೆಯ ವಿ?ಯಗಳು ಕನ್ನಡ ಶಕ್ತಿಶಾಲಿ ಹಾಗೂ ಸುಸ್ಥಿರ ಭಾರತದ ನಿರ್ಮಾಣಕ್ಕಾಗಿ ಯುವಶಕ್ತಿಯ ಸಬಲೀಕರಣ ಭಾ?ಣ ಸ್ಪರ್ಧೆಯಲ್ಲಿ, ಪ್ರಥಮ ಸ್ಥಾನ ತೇಜಸ್ವಿನಿ ದೊಡ್ಡಮನಿ, ದ್ವಿತೀಯ ಸ್ಥಾನ ಮಾಯರಾಜ್, ತೃತೀಯ ಸ್ಥಾನ ಗುರುಪಾದಯ್ಯ ಇನ್ನು ಪ್ರಬಂಧ ಸ್ಪರ್ಧೆಯ ವಿ?ಯಗಳಲ್ಲಿ ಕನ್ನಡ ರಾ? ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ಸ್ವಾಮಿ ವಿವೇಕಾನಂದರ ದೃಷ್ಟಿಕೋನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಯಜ್ಞಪತಿ ಪೂಜಾರಿ, ದ್ವಿತೀಯ ಸ್ಥಾನ ಪೂರ್ಣಿಮಾ ಬೋಕಿ, ತೃತೀಯ ಸ್ಥಾನ ಅಮೃತಾ ಪಂಡರಪುರ ಅವರುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ ಶ್ರೀಮತಿ ಗಿರಿಜಾ ಎಂ. ನಾವದಗಿ, ಸಿಬ್ಬಂದಿ ಕಾರ್ಯದರ್ಶಿ ಡಾ. ಎಂ. ನಂಜುಂಡಸ್ವಾಮಿ ಹಾಗೂ ಮಹಾವಿದ್ಯಾಲಯದ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ಶ್ರೀಮತಿ ನಂದಿನಿ ಎನ್. ದೊಡ್ಡಮನಿ ಅವರು ಸ್ವಾಗತ ಭಾ?ಣ ಮಾಡಿದರು ಹಾಗೂ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಶೀತಲ್ ವಿ. ಬಾರ್ಷಿ ಅವರು ವಂದನಾರ್ಪಣೆ ಸಲ್ಲಿಸಿದರು.
ಪೋಟೋ ೦೧ ವಿವಿಧ ಸ್ಪರ್ದೇಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ವಿತರಿಸಿದರು.

WhatsApp Group Join Now
Telegram Group Join Now
Share This Article