೮೪ನೇ ದಿನದ ರೈತರ  ಹೋರಾಟ ಬೆಂಬಲಿಸಿದ ಎಸ್.ಜಿ. ಆಯುರ್ವೇದ ಕಾಲೇಜು ವಿದ್ಯಾರ್ಥಿ, ವೈದ್ಯರು

Sandeep Malannavar
೮೪ನೇ ದಿನದ ರೈತರ  ಹೋರಾಟ ಬೆಂಬಲಿಸಿದ ಎಸ್.ಜಿ. ಆಯುರ್ವೇದ ಕಾಲೇಜು ವಿದ್ಯಾರ್ಥಿ, ವೈದ್ಯರು
WhatsApp Group Join Now
Telegram Group Join Now

ಕರ್ನಾಟಕ ರೈತ ಸಂಘದಿಂದ ಅಶೋಕ ವೃತ್ತದಲ್ಲಿ ಪ್ರತಿಭಟನೆ

ಕೊಪ್ಪಳ: ನಗರಸಭೆ ಮುಂದಿನ ಬಲ್ಡೋಟ ಹಠಾವೋ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಸಿಂಡಿಯಾ, ಅಲ್ಟ್ರಾಟೆಕ್, ಕೆ.ಪಿ.ಆರ್. ಕೆಮಿಕಲ್ಸ್ ವಿಸ್ತರಣೆ ವಿರೋಧಿಸಿ ೮೪ನೇ ದಿನದಲ್ಲಿ ಧರಣಿಯನ್ನು ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು, ವೈದ್ಯರು ಮತ್ತು ಕರ್ನಾಟಕ ರೈತ ಸಂಘ (ಎಐಯುಕೆಎಸ್) ಬೆಂಬಲಿಸಿದವು.
ಕೆ.ಆರ್.ಎಸ್. ರಾಜ್ಯ ಕಾರ್ಯದರ್ಶಿ ಕೊಡಗಿನ ಡಿ.ಎಸ್. ನಿರ್ವಾಣಪ್ಪ ಧರಣಿಯಲ್ಲಿ ಮಾತನಾಡಿ ’ಈ ಹೋರಾಟಕ್ಕೆ ಇಡೀ ಕರ್ನಾಟಕದ ಜನರ ಬೆಂಬಲವಿದೆ. ಪ್ರೊ. ಮಾಧವ್ ಗಾಡ್ಗೀಳ್ ವರದಿ ಪಶ್ಚಿಮ ಘಟ್ಟ ಪರಿಸರ ಉಳಿಸಲು ತಯಾರಾಯಿತು. ಕೇರಳ ವೈನಾಡಿನಲ್ಲಿ, ಕೊಡಗಿನಲ್ಲಿ ಪರಿಸರ ಹಾಳಾದ ಕಾರಣಕ್ಕೆ ಬೆಟ್ಟ ಕುಸಿದು ಸಾವಿರಾರು ಜನರು ಜೀವ ಕಳೆದುಕೊಂಡರು. ಉ.ಕ. ಜಿಲ್ಲೆಯಲ್ಲಿ ಕೈಗಾ ಪರಮಾಣು ಸ್ಥಾವರ ಪರಿಸರ ಹಾಳು ಮಾಡುತ್ತದೆಂದು ಮುಂಜಾಗ್ರತೆ ವಹಿಸಿ ಸಾಹಿತಿಗಳು, ಪರಿಸರವಾದಿಗಳು, ಮಠಾಧಿಪತಿಗಳು ಸೇರಿ ರಾಜ್ಯದ ಗಮನ ಸೆಳೆದಂತೆ, ಈಗ ಕೊಪ್ಪಳ ಜನರ ಹೋರಾಟ ರಾಜ್ಯದ ಎಲ್ಲಾ ಹೋರಾಟಗಾರರ ಗಮನ ಸೆಳೆಯುತ್ತಿದೆ. ಅದರಂತೆ ಮುಂದಿನ ೧೦೦ನೇ ದಿನದ ಹೋರಾಟದ ಶತದಿನಕ್ಕೆ ರಾಜ್ಯ ಮಟ್ಟದಲ್ಲಿ ’ಕೊಪ್ಪಳ ಚಲೋ’ ಕರೆ ಕೊಟ್ಟರೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ಮಾಡುತ್ತದೆ’ ಎಂದರು.
ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯಾಧ್ಯಕ್ಷರಾದ ಡಿ.ಎಚ್. ಪೂಜಾರ ಮಾತನಾಡಿ, ನಮ್ಮ ಸಂಘಟನೆ ಈ ವೇದಿಕೆ ಹುಟ್ಟಿದಾಗಿನಿಂದಲೂ ಜತೆಗಿದೆ. ಎ? ಪ್ರಯಾಸವಾದರೂ ೧.೫ ಲಕ್ಷ ಜನರ ಆರೋಗ್ಯ, ಜೀವ ಉಳಿಸಿಕೊಳ್ಳುವ ಅವಶ್ಯಕತೆ ಇದಕ್ಕೆ ಇರುವುದರಿಂದ ಈ ಹೋರಾಟಕ್ಕೆ ಸೋಲೇ ಇಲ್ಲ. ನಮ್ಮ ಸೋಲು ಅಂದರೆ ನಮ್ಮೆಲ್ಲರ ಸಾವು ಎಂದರ್ಥ. ನಾವು ಬದುಕಲು ಹೋರಾಡುವಾಗ ಎದುರಾಳಿ ಹಿಂದೆ ಸರಿಯಲೇಬೇಕು ಎಂದರು. ಇದಕ್ಕೂ ಮೊದಲು ಅಶೋಕ ವೃತ್ತದಿಂದ ಕೆ. ಆರ್. ಎಸ್. ಸಂಘದಿಂದ ಮೆರವಣಿಗೆ ಮಾಡುತ್ತಾ ಧರಣಿ ಸ್ಥಳಕ್ಕೆ ಬರಲಾಯಿತು.
ಧರಣಿಯನ್ನು ಉದ್ದೇಶಿಸಿ ವೈದ್ಯಕೀಯ ವಿದ್ಯಾರ್ಥಿಗಳು ಎಚ್ಚರಿಕೆಯ ಮಾತನಾಡಿ, ನಾವು ಹೋರಾಡಿ ಕಾರ್ಖಾನೆ ಹಿಂದಕ್ಕೆ ಕಳಿಸೋಣ ಎಂದರು. ಕರ್ನಾಟಕ ರೈತ ಸಂಘದ ಸಿಂಧನೂರು ಚಿಟ್ಟಿಬಾಬು, ಬಿ.ಎನ್. ಯರದಿಹಾಳ ಮಾತನಾಡಿದರು.
ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ. ಎಂ. ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಎಸ್.ಬಿ. ರಾಜೂರು, ರವಿ ಕಾಂತನವರ, ಶರಣು ಶೆಟ್ಟರ್, ಶರಣು ಗಡ್ಡಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಖ್ಬುಲ್ ರಾಯಚೂರು, ವೈದ್ಯರು ಶ್ರೀರಾಮ ಪಿ, ಡಾ. ವಿನಾಯಕ ಕುಬಿಹಾಳ, ಡಾ. ಮನು, ಡಾ. ವಿನಯ, ಡಾ.ರೋ?ನ್, ಡಾ. ಸಿದ್ರಾಮ್, ಡಾ. ಋಷಿಕೇಶ, ಡಾ. ಪ್ರವೀಣ, ವಿದ್ಯಾರ್ಥಿಗಳು ದೇವಿ ಪ್ರಸಾದ್, ಶರಣ್, ಮಹೇಶ, ಹೋರಾಟ ಶಂಭುಲಿಗಪ್ಪ ಹರಗೇರಿ, ಜಿ. ಬಿ. ಪಾಟೀಲ್, ಮಹಾದೆವಪ್ಪ ಮಾವಿನಮಡು, ದ್ಯಾಮಮ್ಮ ತಾವರಗೇರಾ, ಶಾಂತಮ್ಮ ಮೆಣೆದಾಳ, ಬಸವಲಿಂಗಮ್ಮ ತಾವರಗೇರಾ, ದೇವಪ್ಪ ಕಂಬಳಿ, ನಿರುಪಾದಿ ಬುನ್ನಟ್ಟಿ, ಶ್ಯಾಮೀದ ಮೆಣೆದಾಳ, ಮಲ್ಲೇಶಗೌಡ ಕನ್ನೇರಮಡು, ಬಸವರಾಜ ನರೇಗಲ್, ಶರಣಪ್ಪ ನವಲಹಳ್ಳಿ, ವಿಜಯಮಹಾಂತೇಶ ಹಟ್ಟಿ ರೈತ ಸಂಘದ ಸದಸ್ಯರು ಹಲವಾರು ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡರು.

WhatsApp Group Join Now
Telegram Group Join Now
Share This Article