ARTO ಜಯರಾಂ ನಾಯಕ ಮನೆ ಕಳ್ಳತನ

Sandeep Malannavar
ARTO ಜಯರಾಂ ನಾಯಕ ಮನೆ ಕಳ್ಳತನ
Oplus_16908288
WhatsApp Group Join Now
Telegram Group Join Now
ARTO ಜಯರಾಂ ನಾಯಕ ಮನೆ ಕಳ್ಳತನ, ಚಿನ್ನಾಭರಣ ಸೇರಿ 19  ಲಕ್ಷ ರೂ.ಗಳಿಗೂ  ಅಧಿಕ ವಸ್ತುಗಳ ಕಳುವು,
ಮುದ್ದೇಬಿಹಾಳ : ತಾಲ್ಲೂಕಿನ ನೇಬಗೇರಿ ತಾಂಡಾದ ನಿವಾಸಿ ಜಮಖಂಡಿ ARTO ಜಯರಾಂ ನಾಯಕ ಅವರ ಮುದ್ನಾಳ ಗ್ರಾಮದ ತೋಟದ ಮನೆಯಲ್ಲಿ ಜ.21 ರಂದು ಮಧ್ಯರಾತ್ರಿ ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳುವು ಮಾಡಿಕೊಂಡು ಕಳ್ಳರು ಪರಾರಿಯಾದ ಘಟನೆ ಬುಧವಾರ ನಡೆದಿದೆ. ಜಮಖಂಡಿ ಎ.ಆರ್.ಟಿ.ಒ ಆಗಿ ಸೇವೆಯಲ್ಲಿರುವ ಜಯರಾಮ ನಾನಪ್ಪ ನಾಯಕ ಅವರ ಮನೆಗಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಜ. 21 ರಂದು ಸಾಯಂಕಾಲ 6 ಗಂಟೆಯಿಂದ ಜ. 22 ರಂದು ರಾತ್ರಿ 00-20 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡುವ ಉದ್ದೇಶದಿಂದ ನಮ್ಮ ಮನೆಯ ಬಾಗಿಲುಗಳ ಕೀಲಿ ಕೊಂಡಿ ಮುರಿದು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ 10,76,000/- ರೂ.ಕಿಮ್ಮತ್ತಿನ ಬಂಗಾರದ ಆಭರಣ ಸೇರಿದಂತೆ 9,00,000/- ನಗದು  ಒಟ್ಟು 19,76,000/- ರೂ ಕಿಮ್ಮತ್ತಿನ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಪೋಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮೊಹ್ಮದ ಫಸಿವುದ್ದೀನ, ಅಪರಾಧ ವಿಭಾಗದ ಪಿಎಸೈ ಆರ್ ಎಸ್ ಭಂಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
WhatsApp Group Join Now
Telegram Group Join Now
Share This Article