ಓಂಕಾರ ಆಶ್ರಮ ಮಠದ ಪಟ್ಟಾಧಿಕಾರಿಯಾಗಿ ಮಾತೋಶ್ರೀಗಳಾದ ಬ್ರಮರಾಂಭಿಕಾದೇವಿ ಹಾಗೂ ನಾಗಲಾಂಬಿಕಾ ದೇವಿಯವರ ನೇಮಕ

Sandeep Malannavar
ಓಂಕಾರ ಆಶ್ರಮ ಮಠದ ಪಟ್ಟಾಧಿಕಾರಿಯಾಗಿ ಮಾತೋಶ್ರೀಗಳಾದ ಬ್ರಮರಾಂಭಿಕಾದೇವಿ ಹಾಗೂ ನಾಗಲಾಂಬಿಕಾ ದೇವಿಯವರ ನೇಮಕ
WhatsApp Group Join Now
Telegram Group Join Now
23.ರಾಯಬಾಗ ; ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ಶ್ರೀ ದಿ. ಶಿವಶಂಕರ ಸ್ವಾಮೀಜಿಗಳು ಮರಣ ಹೊಂದುವ ಮೊದಲೇ ಮೃತ್ಯುಪತ್ರ ಬರೆದಿಟ್ಟು ಪತ್ರದ ಪ್ರಕಾರ ಇಂದು ಓಂಕಾರ ಆಶ್ರಮ ಮಠದ ಪಟ್ಟಾಧಿಕಾರಿಯಾಗಿ ಮಾತೋಶ್ರೀಗಳಾದ ಬ್ರಮರಾಂಭಿಕಾದೇವಿ ಹಾಗೂ ನಾಗಲಾಂಬಿಕಾ ದೇವಿಯವರನ್ನು ಸಹಸ್ರಾರು ಜನರ  ಹಾಗೂ ಸ್ವಾಮೀಜಿಗಳ ಸಮ್ಮುಖದಲ್ಲಿ ನೇಮಕ ಮಾಡಲಾಯಿತು.
ನಂತರ ಚಿಕ್ಕೋಡಿ ಚರಮೂರ್ತಿಮಠದ ಸಂಪಾದನ ಸ್ವಾಮೀಜಿಗಳು ಮಾತನಾಡಿ, ಓಂಕಾರ ಆಶ್ರಮ ಮಠದ ಶಿವಶಂಕರ ಸ್ವಾಮೀಜಿಗಳು ಮಠದಲ್ಲಿ ಪಾಠ ಪ್ರವಚನ ಮಾಡಿ, ಬಂದ ಭಕ್ತರಿಗೆ ದಾಸೋಹ ನೀಡುತ್ತಿದ್ದರಲ್ಲದೇ ಕೃಷಿಯಲ್ಲಿ ಆಯುರ್ವೇದದಲ್ಲಿ ಉತ್ತಮ ಪರಿಣತಿ ಹೊಂದಿದ್ದರು. ಇವರಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಹಾಗೂ ಸ್ವಾಮೀಜಿ ಬಳಗ ಹೊಂದಿದ್ದರು. ಅವರ ಇಂದು ಲಿಂಗೈಕ್ಯರಾಗಿದ್ದು ಎಲ್ಲರಿಗೂ ದುಃಖದ ವಿಷಯವಾಗಿದೆ. ಅವರು ಬರೆದಂತಹ ಮೃತ್ಯ ಪತ್ರದ ಪ್ರಕಾರ ಇಬ್ಬರ ಮಾತೋಶ್ರೀಗಳ ಮಠದ ಜವಾಬ್ದಾರಿ ತೆಗೆದುಕೊಂಡು ಶ್ರೀಗಳು ನಡೆದುಕೊಂಡ ಹೋದ ದಾರಿಯಲ್ಲಿ ತಾವೂ ಸಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನ್ಯಾ. ಎಲ್ ಬಿ ಚೌಗುಲೆ ಮೃತ್ಯುಪತ್ರ ಓದಿದರು. ಈ ವೇಳೆ, ಶ್ರೀ ವೀರಭದ್ರೇಶ್ವರ ಮಹಾಸ್ವಾಮಿಗಳು,  ಶ್ರೀ ಬಸವಲಿಂಗ ಮಹಾಸ್ವಾಮಿಜಿ,  ಶ್ರೀ ಜ್ಞಾನಾನಂದ ಸ್ವಾಮೀಜಿ,  ಶ್ರೀ ಸಂಗಮೇಶ್ವರ ಸ್ವಾಮೀಜಿ,  ಶ್ರೀ ಮರುಘರಾಜೇಂದ್ರ ಮಹಾಸ್ವಾಮಿ,  ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ,  ಶ್ರೀ ಅಭಿನವ ಬ್ರಹ್ಮಾನಂದ ಮಹಾಸ್ವಾಮಿಜಿ, ಶ್ರೀ ಯತೀಶ್ವರಾನಂದ ಮಹಾಸ್ವಾಮಿಜಿ,  ಶ್ರೀ ಕೃಪಾನಂದ ಮಹಾಸ್ವಾಮೀಜಿ,  ಶ್ರೀ  ಕಾಡಯ್ಯ ಹಿರೇಮಠ,  ಶ್ರೀ ಮಹೇಶ್ವರಾನಂದ ಮಹಾಸ್ವಾಮಿಜಿ, ಬಸವರಾಜ ಮಹಾಸ್ವಾಮಿಜಿ, ಶ್ರೀ ಪ್ರಾಣಲಿಂಗ ಮಹಾಸ್ವಾಮೀಜಿ,  ರಾಮಚಂದ್ರ‌ ಕಾಟೆ, ಈರಗೌಡ ಪಾಟೀಲ, ಧೂಳಗೌಡ ಪಾಟೀಲ, ಮಲ್ಲಿಕಾರ್ಜುನ್ ಕೋರೆ, ತಾತ್ಯಾಸಾಹೇಬ್ ಕಾಟೆ, ಅನೀಲ ಹಂಜೆ, ಮಹಾವೀರ ಪಾಟೀಲ, ಪಾರೀಸ್ ಉಗಾರೆ, ಭರತೇಶ ಬನವಣೆ, ಅರುಣ ಐಹೊಳೆ, ರಮೇಶ‌ ಕಿಚಡೆ, ಸತ್ಯಪ್ಪ ಭಿಷ್ಠೆ,ಕಿರಣ ಕಲೋಲಕರ,  ಅಶೋಕ ಮಂಗಸೂಳೆ, ಅಜೀತ ಖಮಲಾಪುರೆ, ಅಜ್ಜಾ ನಾಗರಾಳೆ, ತುಕಾರಾಮ ಪಾಟೀಲ  ಸೇರಿದಂತೆ ಅನೇಕ ಭಕ್ತಾಧಿಗಳು ಇದ್ದರು.
ಪೋಟೊ
ರಾಯಬಾಗ :ತಾಲೂಕಿನ ಬಾವನಸೌಂದತ್ತಿ ಗ್ರಾಮದ  ಓಂಕಾರ ಆಶ್ರಮ ಮಠಕ್ಕೆ ಮಾತೋಶ್ರೀಗಳಾದ ಬ್ರಮರಾಂಭಿಕಾ ಹಾಗೂ ನಾಗಲಾಂಬಿಕಾ ದೇವಿಯವರನ್ನು  ಹಲವು ಸ್ವಾಮೀಜಿ ಹಾಗೂ ಭಕ್ತರ ಸಮ್ಮುಖದಲ್ಲಿ ನೇಮಕ ಪತ್ರ ನೀಡಲಾಯಿತು.
WhatsApp Group Join Now
Telegram Group Join Now
Share This Article