ಕ್ಷೇತ್ರ ಅಧ್ಯಯನ ಪ್ರವಾಸ ಜ್ಞಾನ ವಿಕಾಸಕ್ಕೆ ಪೂರಕ : ತಳವಾರ

Pratibha Boi
ಕ್ಷೇತ್ರ ಅಧ್ಯಯನ ಪ್ರವಾಸ ಜ್ಞಾನ ವಿಕಾಸಕ್ಕೆ ಪೂರಕ : ತಳವಾರ
WhatsApp Group Join Now
Telegram Group Join Now

ಸಂಕೇಶ್ವರ : ಸ್ಥಳೀಯ ಪಿ.ಎಮ್ ಶ್ರೀ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ಧಾರವಾಡ ಕೃಷಿ ವಿಶ್ವ ವಿದ್ಯಾಲಯಕ್ಕೆ ಕ್ಷೇತ್ರ ಅಧ್ಯಯನ ಪ್ರವಾಸ ಕೈಗೊಳ್ಳಲಾಯಿತು.

ಮಕ್ಕಳಿಗೆ ಪಠ್ಯ ಪುಸ್ತಕದ ಜೊತೆಗೆ ವೀಕ್ಷಣೆ ಮೂಲಕ ಜ್ಞಾನ ವಿಕಾಸಕ್ಕೆ ಪೂರಕವಾಗುವ ಉದ್ದೇಶದಿಂದ ಮಕ್ಕಳಿಗೆ ಕ್ಷೇತ್ರ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಕರಾದ ಎ.ಎ.ತಳವಾರ ತಿಳಿಸಿದರು.

ವಿದ್ಯಾರ್ಥಿಗಳಿಗೆ ಎಂ.ಕೆ ಹುಬ್ಬಳ್ಳಿಯಲ್ಲಿರುವ ಬಸವಣ್ಣನವರ ಮಡದಿಯ ಐಕ್ಯ ಸ್ಥಳಕ್ಕೆ ಭೇಟಿ ನೀಡಿ ನಂತರ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಡಾ ! ವಿ.ಬಿ.ಕುಲಿಗೋಡ ಅವರನ್ನು ಭೇಟಿ ಮಾಡಿ ಪರಿಸರದ ಬಗ್ಗೆ ಮಾಹಿತಿ ಪಡೆಯಲಾಯಿತು.

ಕೃಷಿ ವಿಧ್ಯಾರ್ಥಿಗಳು ಬೆಳೆದ ಬೆಳೆಗಳಾದ ಹತ್ತಿ, ಕಾಳು ಮೆಣಸು ಹಾಗೂ ವಿವಿಧ ತರಹದ ಜೋಳದ ಬೆಳೆಗಳು ಮತ್ತು ಔಷಧಿ ಸಸ್ಯಗಳು, ಮರಗಳ ಪ್ರಾಮುಖ್ಯತೆ ಬಗ್ಗೆ
ಮಕ್ಕಳು ಮಾಹಿತಿ ಪಡೆದರು.

ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪ್ರಾಯೋಗಿಕ ಕಲಿಕೆಯ ಅರಿವನ್ನು ಮಕ್ಕಳಲ್ಲಿ ಮೂಡಿಸಿದರು. ದ.ರಾ.ಬೇಂದ್ರೆಯವರ ಸ್ವಗೃಹಕ್ಕೆ ಮಕ್ಕಳು ಭೇಟಿ ಹಾಗೂ ವಿನಯ ಕುಲಕರ್ಣಿಯವರು ಡೈರಿ ಫಾರ್ಂನ ವೈಶಿಷ್ಟತೆಯನ್ನು ಗಮನಿಸಿದರು.

ಶಾಲೆಯ ಮುಖ್ಯೋಪಾಧ್ಯಾಕರಾದ ಎ.ಎ.ತಳವಾರ, ಶಿಕ್ಷಕರಾದ ಬಿ.ಎಮ್.ವಾದರೆ, ಎಸ್.ಟಿ. ಮದ್ಯಾಪಗೋಳ್, ಎಸ್.ಎಚ್ ಬಾಗವಾನ, ಪ್ರಿಯಾಂಕಾ ಬಂದಾಯಿ, ಎಲ್.ಎ. ಮಿರಜಕರ್, ಗೀತಾ ಮುಧೋಳ, ಶಬಾನಾ ಹುಣಶಿಕಟ್ಟಿ, ಸೈರಾಭಾನು ರವಡೂರ, ಬಿ.ಬಿ.ಪಾಟೀಲ, ಸಾವಂತನ್ನರ ಸೇರಿದಂತೆ ಅನೇಕರು ಹಾಜರಿದ್ದರು.

WhatsApp Group Join Now
Telegram Group Join Now
Share This Article