ಬಳ್ಳಾರಿ :21.. ನಗರದ ಮಹಾನಂದಿ ಕೊಟ್ಟಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾರ್ವತಿ ನಗರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಮಂಗಳವಾರ ನಡೆಯಿತು. ಕ್ಲಸ್ಟರ್ ನ ಏಳು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮ ಕಲಿಕೆಗಳನ್ನು ಪ್ರದರ್ಶಸಿ, ಬಹುಮಾನ ಪಡೆದುಕೊಂಡರು. ಕಲಿಕಾ ಹಬ್ಬಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಪಿ.ಎರ್ರೆಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಕ್ಕಳ ಮುಕ್ತ ಕಲಿಕೆಯ ವಾತಾವರಣಕ್ಕೆ ಅನುಕೂಲಕರವಾಗಿ ಕಲಿಕಾ ಹಬ್ಬವನ್ನು ಸರ್ಕಾರವು ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ಮಕ್ಕಳೆಡೆಗೆ ತಲುಪಿಸುವ ವ್ಯವಸ್ಥೆಯನ್ನು ಸಂಭ್ರಮವಾಗಿಸುವ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ದ್ವಿಗುಣಗೊಳಿಸುವಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ ಭಾರತದಲ್ಲಿ ಇದು ಪ್ರಮುಖವಾಗಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು, ಶಿಕ್ಷಕರಿಗೆ ತರಬೇತಿ ನೀಡಲು ಮತ್ತು ಕಲಿಯುವ ಉತ್ಸಾಹವನ್ನು ಹೆಚ್ಚಿಸಲು ನಡೆಸಲಾದ ಒಂದು ಅಭಿಯಾನವಾಗಿದೆ.
ಸಂಕ್ಷಿಪ್ತವಾಗಿ, ಕಲಿಕಾ ಹಬ್ಬವು ಶಿಕ್ಷಣ ಮತ್ತು ಜ್ಞಾನವನ್ನು ಪ್ರೋತ್ಸಾಹಿಸುವ ಒಂದು ಸಮುದಾಯ ಕೇಂದ್ರಿತ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ನಂತರದಲ್ಲಿ ಮಾತನಾಡಿದ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಡಿ.ಶಿವಮ್ಮ ಅವರು ಕಲಿಕಾ ಹಬ್ಬವು ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಿ, ಒತ್ತಡವಿಲ್ಲದೆ ಸಂತೋಷದಿಂದ ಕಲಿಯುವ ಜೊತೆಗೆ ಕಲಿಕಾ ಹಬ್ಬ ಸಂತೋಷವಾಗಿ ಮತ್ತು ಅನುಭವಾತ್ಮಕ ಮೂಲಕ ಕಲಿಯಲು ಇದು ಉತ್ತೇಜನ ನೀಡುತ್ತದೆ .ವಿಮರ್ಶಾತ್ಮಕ ಚಿಂತನೆ, ಆತ್ಮವಿಶ್ವಾಸ, ಸೃಜನಾತ್ಮಕತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಕಲಿಕೆಯನ್ನು ಹೊರೆಯಾಗಿಸದೆ, ಹಬ್ಬದಂತೆ ಆಚರಿಸುವ ಮೂಲಕ ಕಲಿಕೆಯನ್ನು ಮೋಜಿನ ಚಟುವಟಿಕೆಯಾಗಿ ಮಾರ್ಪಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ.ಶಿವಶಂಕರ್ , ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಸುಧಾ , ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಉಪೇಂದ್ರ , ಹಿರಿಯ ದಲಿತ ಸಾಹಿತಿ ಎನ್ .ಡಿ.ವೆಂಕಮ್ಮ , ಸಿದ್ದಲಿಂಗಮ್ಮ.ಎಲ್ , ಪ್ರಮೀಳಾ ಬಾಯಿ ಎಂ , ಅನಿತಾ ಹೆಚ್.ವೈ , ಷಣ್ಮುಖ , ಕ್ಲಸ್ಟರ್ ನ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು , ಸಹ ಶಿಕ್ಷಕರು , ನಗರದ ಮುಖಂಡರುಗಳು ಅಡುಗೆ ಸಹಾಯಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


