ಚಿಕ್ಕೋಡಿ:ಮಾರ್ಚ 2026 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 90 ಕಿಂತ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಸಿ.ಟಿ.ಇ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉಚಿತ ಪ್ರವೇಶ ನೀಡಲಾಗುವುದೆಂದು ಯುವ ನಿರ್ದೇಶಕರಾದ ಶ್ರೀಪಾದ ಓಂಕಾರ ಕುಲಕರ್ಣಿ ಹೇಳಿದರು.
ಚಿಕ್ಕೋಡಿಯ ಆರ್.ಡಿ.ಪ್ರೌಢ ಶಾಲೆ ಮತ್ತು ಆರ್.ಎಮ್.ಬಾಲಿಕಾ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಶತಪ್ರಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿಪಿಐ ವಿ.ಎಸ್.ಚೌಗಲಾ ಮಾತನಾಡಿ ಮಕ್ಕಳು ಯಾವತ್ತೂ ದೊಡ್ಡ ಕನಸನ್ನು ಕಾಣಬೇಕು ಮತ್ತು ತಾಳ್ಮೆಯಿಂದ ಸಾಧನೆಯನ್ನು ಮಾಡಬೇಕೆಂದು ಎಂದರಯ.ಇನ್ನೊರ್ವ ಅತಿಥಿಗಳಾದ ಪಿಎಸ್ ಐ ಬಿ.ಎಸ್.ನೇರ್ಲಿ ಮಾತನಾಡಿ ಆರ್.ಡಿ.ಪ್ರೌಢ ಶಾಲೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ಶಿಕ್ಷಣಕ್ಕೆ ಅತೀ ಹೆಸರುವಾಸಿಯಾಗಿದೆ ಎಂದು ತಿಳಿಸಿದರಲ್ಲದದೇ ಈ ಸಂಸ್ಥೆಯಲ್ಲಿ ಕಲಿಯುತ್ತಿರುವಂತಹ ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆದು ತಮ್ಮ ವೈಯಕ್ತಿಕ ಹಾಗೂ ಸಂಸ್ಥೆಯ ಹೆಸರನ್ನು ರಾಜ್ಯದಲ್ಲಿ ಮಟ್ಟದಲ್ಲಿ ತರಬೇಕೆಂದು ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಸಿ.ಟಿ.ಇ.ಸಂಸ್ಥೆಯ ಉಪಾಧ್ಯಕ್ಷರಾದ ವಿ.ಎಸ್.ಮಾಂಜರೇಕರ,ಸಿ.ಟಿ.ಇ.ಸಂಸ್ಥೆ ಯ ನಿರ್ದೇಶಕರಾದ,ಎಸ್.ಬಿ.ಕುಲಕರ್ಣಿ,ವಿ .ಪಿ.ಶೇಡಬಾಳ,.ಕಿರಣ ಕುಲಕರ್ಣಿ, ಆಡಳಿತಾಧಿಕಾರಿಗಳಾದ.ಎಸ್.ಜಿ. ಜಹಾಗೀರದಾರ ಹಾಗೂ ಜಂಟಿ ಕಾರ್ಯದರ್ಶಿಗಳಾದ ಎಮ್.ಎಸ್.ದೇಶಪಾಂಡೆ,ಸಂಕೇತ ಮಾಂಜರೇಕರ, ಆರ್.ಡಿ.ಪ್ರೌಢ ಶಾಲೆ ಮತ್ತು ಆರ್.ಎಮ್.ಬಾಲಿಕಾ ಪ್ರೌಢ ಶಾಲೆಯ ಆಡಳಿತಾಧಿಕಾರಿಗಳಾದ.ಎಸ್.ಎಸ್.ಖೋತ ಆರ್.ಡಿ.ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ .ಜಿ.ಪಿ ಇನಾಮದಾರ ಆರ್.ಎಮ್.ಬಾಲಿಕಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ .ಎಚ್.ಎಸ್.ಕುಲಕರ್ಣಿ ಶ್ರೀಮತಿ.ಡಿ.ಕೆ.ಶಹಾ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಆರ್.ಪಿ.ದೊಡಮನಿ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಕಾಯಕ್ರಮದಲ್ಲಿ ಉಪಸ್ಥಿತರಿದ್ದರು.ಎಸ್.ಎಸ್.ಖೋತ ಇವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ಶಾಲೆಯ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿಕ ಕಾರ್ಯಕ್ರಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನ ಗೆದ್ದರು. ಈ ಭವ್ಯ ಕಾರ್ಯುದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.
ಶ್ರೀಮತಿ ಉಮಾ ಪತ್ತಾರ ವರದಿ ವಾಚನ ಮಾಡಿದರು.ಶ್ರೀಮತಿ ಸುಧಾ ಹುದ್ದಾರ ವಂದಿಸಿದರು ಎಸ್. ಆರ್. ದಳವಾಯಿ ನಿರೂಪಿಸಿದರು


