ಕುಲಗೋಡ ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿದ ವಿರಾಟ ಹಿಂದೂ ಸಮ್ಮೇಳನ
ಮೂಡಲಗಿ : ದೇಶ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತ, ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಅನ್ನುವದು ಮುಖ್ಯ. ಹಿಂದೂತ್ವದಿಂದ ಮಠ ಹಾಗೂ ಮಠಾಧೀಶರು ಉಳಿಯಲು ಕಾರಣವಾಗಿದೆ ಎಂದು ಸದ್ಗುರು ಅಭಿನವ ಗುರುಲಿಂಗ ಜಂಗಮ ಮಹಾಪ್ರಭುಗಳು ಹೇಳಿದರು.
ಮಂಗಳವಾರದಂದು ತಾಲೂಕಿನ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವಸ್ಥಾನದ ಆವರಣದಲ್ಲಿ ವಿರಾಟ ಹಿಂದೂ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಧರ್ಮವನ್ನು ಯಾರು ರಕ್ಷಣೆ ಮಾಡುತ್ತಾರೋ ಅವರನ್ನು ಧರ್ಮ ರಕ್ಷಣೆ ಮಾಡುತ್ತದೆ. ನೂರಾರು ವ?ಗಳಿಂದ ಹಿಂದೂ ಧರ್ಮ ರಕ್ಷಣೆ ಮಾಡುತ್ತಿರುವದು ಸಂಘ ಪರಿವಾರ ಮಾತ್ರ ಎಂದರು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಭಾರತ ವಿಶ್ವಕ್ಕೆ ಗುರುವಾಗಬೇಕು. ಯುವಕರು ಧರ್ಮ ರಕ್ಷಣೆಗೆ ಪಣತೊಡಬೇಕು. ಧರ್ಮ ರಕ್ಷಣೆ ಮಾಡಿ ಮಡಿದ ಮಹತ್ಮರ ದಾರಿಯಲ್ಲಿ ನಡೆದು ಹಿಂದೂ ಧರ್ಮ ಉಳಿಸೋಣ ಎಂದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾ?ಣಕಾರರಾದ ನಂದು ಗಾಯಕವಾಡ ಮತ್ತು ಅಮೃತ ಕುಲಕರ್ಣಿ ಸುಧೀರ್ಘವಾಗಿ ಹಿಂದುತ್ವದ ಶಕ್ತಿ ಬಗ್ಗೆ ಮಾತನಾಡಿದರು. ಸಾಯಂಕಾಲ ೪ಕ್ಕೆ ಸಕಲವಾಧ್ಯಮೇಳದೊಂದಿಗೆ ಶೋಭಾ ಯಾತ್ರೆ ನಡೆಯಿತು. ಮಕ್ಕಳ ವೇ?ಭೂ?ಣ ಮತ್ತು ಮಕ್ಕಳ ಭರತನಾಟ್ಯ ಎಲ್ಲರ ಗಮನ ಸೆಳೆಯಿತು.
ಸಂದರ್ಭದಲ್ಲಿ ಮ.ನಿ.ಪ್ರ.ಸ್ವ ಶ್ರೀ ಶಿವಾನಂದ ಮಹಾಸ್ವಾಮಿಗಳು ಜಡಿಸಿದ್ಧೇಶ್ವರ ಮಠ ಸುಣಧೋಳಿ, ರೇಣುಕಜ್ಯೋತಿ ?.ಬ್ರ ಶ್ರೀ ಸಿದ್ದಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ಕೆ.ಕೆ.ಕೊಪ್ಪ, ಪೂ.ಶ್ರೀ ವಿಜಯ ಸಿದ್ದೇಶ್ವರ ಸ್ವಾಮಿಗಳು ಮನ್ನಿಕೇರಿ, ಪರಮ ಪೂಜ್ಯ ಅಭಿನವ ಚೌಕೇಶ್ವರ ದೇವರು ಯಾದವಾಡ, ಶ್ರೀ ಬಸವರಾಜ ಸ್ವಾಮಿಗಳು ಕಪರಟ್ಟಿ, ಶ್ರೀ ಶರಣ ಚನ್ನಬಸಪ್ಪ ಮುತ್ಯಾ ಯಾದವಾಡ, ಶ್ರೀ ಮಾಧವಾನಂದ ಮಹಾರಾಜರು ರಡ್ಡೇರಟ್ಟಿ, ಭೀಮಶಿ ಪೂಜೇರಿ, ರಾಮಣ್ಣ ಹುಕ್ಕೇರಿ, ಸುರೇಶ ಪಾಟೀಲ, ಮಹಾದೇವ ಶೆಕ್ಕಿ, ಗೋವಿಂದ ಕೊಪ್ಪದ, ರಾಜು ಯಡಹಳ್ಳಿ, ರವಿ ಪರುಶೆಟ್ಟಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.


