ಬಳ್ಳಾರಿ, ಜ. 20 : ರೆಸ್ಟೋರೆಂಟ್ ಕ್ಷೇತ್ರದಲ್ಲಿ ಪ್ರಸಿದ್ಧ ಆಹಾರ ಬ್ರಾಂಡ್ ಹೆಸರು ಹೊಂದಿರುವ ಫೈವ್ ಸ್ಟಾರ್ ಸ್ಪೆಷಲಿಟಿಗಳೊಂದಿಗೆ ಪಿಸ್ತಾ ಹೌಸ್ ರೆಸ್ಟೋರೆಂಟ್, ನಗರದ ಅರುಣಾ ಕಾಮೀನೇನಿ ಆಸ್ಪತ್ರೆ ಪಕ್ಕದಲ್ಲಿ, ಹೊಸಪೇಟೆ ರಸ್ತೆ ಬಳ್ಳಾರಿಯಲ್ಲಿ ಆರಂಭವಾಗುತ್ತಿರುವುದನ್ನು ತಿಳಿಸಲು ಸಂತೋಷವಾಗುತ್ತದೆ. ನಮ್ಮ ಪಿಸ್ತಾ ಹೌಸ್ ನಲ್ಲಿ ಗುಣಮಟ್ಟದ ಶುಚಿ ರುಚಿ ಆಹಾರ ದೊಂದಿಗೆ, ಸ್ವಚ್ಛತೆ ಮತ್ತು ನಂಬಿಕೆಗೆ ಹೆಸರಾದ ಪ್ರಪಂಚದ ಪ್ರತಿಷ್ಠಿತ ಐದು ದೇಶಗಲ್ಲಿ ಪ್ರಖ್ಯಾತಿಯನ್ನು ಹೊಂದಿರುವ ಪಿಸ್ತಾ ಹೌಸ್ ಇದೀಗ ಬಳ್ಳಾರಿಯಲ್ಲಿ ಪ್ರಾರಂಭಿಸಲಾಗುತ್ತಿದೆ.
ಪಿಸ್ತಾ ಹೌಸ್ ವಿಶೇಷತೆಗಳಾದ ಜಾಫ್ರಾನಿ ಬಿರಿಯಾನಿ, ಬೇಕರಿ ಉತ್ಪನ್ನಗಳು ಮತ್ತು ಜಾಫ್ರಾನಿ ಟೀ ಪಿಸ್ತಾ ಹೌಸ್‌ನ ಪ್ರಮುಖವಾದ ಖಾದ್ಯ ಮತ್ತು ಪಾನೀಯಗಳನ್ನು ಹೊಂದಿರುವ ಪಿಸ್ತಾ ಹೌಸ್ ಬ್ರಾಂಡ್‌ಗೆ ಅಮೆರಿಕಾ (USA), ಒಮಾನ್, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಖತಾರ್ (Qatar) ಮತ್ತು ಭಾರತದ ಅನೇಕ ಭಾಗಗಳಲ್ಲಿ ಫ್ರಾಂಚೈಸಿಗಳು ಇದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಗುರುತನ್ನು ಪಡೆದಿದೆ.
ಬಳ್ಳಾರಿಯ ಪಿಸ್ತಾ ಹೌಸ್ ರೆಸ್ಟೋರೆಂಟ್‌ನ ಮಾಲೀಕರು ಮಲ್ಲಿಕಾರ್ಜುನ ರೆಡ್ಡಿ ಗ್ರಾಹಕರ ಸೌಲಭ್ಯ ಮತ್ತು ಆಹಾರದ ಶುದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಈ ರೆಸ್ಟೋರೆಂಟ್‌ನಲ್ಲಿ ಶಾಕಾಹಾರ, ಮಾಂಸಹಾರಕ್ಕೆ ವಿಶೇಷವಾದ ಮತ್ತು ಪ್ರತ್ಯೇಕ ಕಿಚನ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.
ಇದರ ಜೊತೆಗೆ ಈ ರೆಸ್ಟೋರೆಂಟ್‌ನಲ್ಲಿ 200 ಕ್ಕೂ ಹೆಚ್ಚು ಜನರಿಗೆ ಅನುಕೂಲವಾಗುವ ವಿಶಾಲ ಫಕ್ಷನ್ ಹಾಲ್ ಲಭ್ಯವಿದ್ದು, ಇದು ಜನ್ಮದಿನ ಆಚರಣೆಗಳು, ಎಂಗೇಜ್‌ಮೆಂಟ್ ಮತ್ತು ಇತರ ಕುಟುಂಬ ಮತ್ತು ಕಛೇರಿ, ಸಂಘ ಸಂಸ್ಥೆ, ಎಂ. ಎನ್. ಸಿ ಕಂಪನಿಗಳ ಕಾರ್ಯಕ್ರಮಗಳಿಗೆ ಅತ್ಯಂತ ಸೂಕ್ತವಾಗಿದೆ.
ತಾಜಾ ಪದಾರ್ಥಗಳು, ನೈಜ ರುಚಿಗಳು ಮತ್ತು ಉತ್ತಮ ಸೇವೆಗಳ ಮೂಲಕ ಬಳ್ಳಾರಿಯ ಜನರಿಗೆ ಪಿಸ್ತಾ ಹೌಸ್ ಒಂದು ನಂಬಿಗಸ್ತ ಭೋಜನ ಕೇಂದ್ರವಾಗಲಿದೆ, ನಮ್ಮ ಈ ಸೇವೆಯನ್ನು ಬಳ್ಳಾರಿ ನಾಗರಿಕರೂ, ಆಹಾರ ಪ್ರಿಯರು ಸದುಪಯೋಗ ಮಾಡಿಕೊಳ್ಳುವ ಪಿಸ್ತಾ ಹೌಸ್ ಮಾಲೀಕರಾದ ಮಲ್ಲಿಕಾರ್ಜುನ ರೆಡ್ಡಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮ ಆಹಾರ ಪದಾರ್ಥಗಳನ್ನು ಆನ್ಲೈನ್ ನಲ್ಲಿ ಸಹ ಲಭ್ಯವಿದ್ದು ಗ್ರಾಹಕರು ಮನೆಯಲ್ಲಿ ಕುಳಿತು ನಮ್ಮ ಆಹಾರ ಪದಾರ್ಥಗಳ ರುಚಿಯನ್ನು ಸವಿಯಬಹುದು ಎಂದು ಹೋಟೆಲ್ ನ ಮಾಲೀಕರು ತಿಳಿಸಿದ್ದಾರೆ.


