ಸಮಾಜ ಸೇವಕ ಮಾನವೀಯ ಮೌಲ್ಯಗಳು ಪ್ರತಿಪಾದಕ ಲಿಂಗೈಕ್ಯ ಭೀಮಣ್ಣ ಖಂಡ್ರೆ : ಬಿ. ಪಂಚಾಕ್ಷರಪ್ಪ

Sandeep Malannavar
ಸಮಾಜ ಸೇವಕ ಮಾನವೀಯ ಮೌಲ್ಯಗಳು ಪ್ರತಿಪಾದಕ ಲಿಂಗೈಕ್ಯ ಭೀಮಣ್ಣ ಖಂಡ್ರೆ : ಬಿ. ಪಂಚಾಕ್ಷರಪ್ಪ
WhatsApp Group Join Now
Telegram Group Join Now
ಬಳ್ಳಾರಿ20..: ಲೋಕ ನಾಯಕ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಗೌರವ ಅಧ್ಯಕ್ಷರಾಗಿದ್ದ ಲಿಂಗೈಕ್ಯ ಡಾ. ಭೀಮಣ್ಣ ಖಂಡ್ರೆ ಸಮಾಜ ಸೇವಕರಾಗಿ ಮಾನವೀಯತೆ ಮತ್ತು ಮೌಲ್ಯಗಳ ಪ್ರತಿಪಾದಕರಾಗಿದ್ದರು. ಅವರ ಸರಳತೆ ಸತ್ಯ ಮತ್ತು ನಿಷ್ಠೆ ಅತ್ಯುತ್ತಮ ಜನ ಪರ  ಕಾಳಿಜಿಯೊಂದಿಗೆ ಜನರೊಂದಿಗೆ ಬೆರೆತು ತಮ್ಮ ಜೀವನವನ್ನೆಲ್ಲ ಸಮಾಜದ ಹಿತಕ್ಕಾಗಿ ಅರ್ಪಿಸಿದ ಮಹಾನ್ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ಅಗಲಿಕೆ ಇಡೀ ನಾಡಿಗೆ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರು ಬಿಟ್ಟುಹೋದ ಸಮಾಜ ಸೇವೆಯನ್ನು ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಅವರಂತೆ ಸಾಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಬಳ್ಳಾರಿ ಜಿಲ್ಲಾ ಅಧ್ಯಕ್ಷ  ಬಿ. ಪಂಚಾಕ್ಷರಪ್ಪ ನುಡಿ ನಮನ ಸಲ್ಲಿಸಿದರು.
ನಗರದ ಜಗದ್ಗುರು ಕೊಟ್ಟೂರು ಸ್ವಾಮಿ ತಾತನವರ ಮಠದ ಪ್ರೌಢದೇವರಾಯ ಸಭಾ ಮಂಟಪದ ಆವರಣದಲ್ಲಿ ಬಳ್ಳಾರಿ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ವತಿಯಿಂದ ಲಿಂಗೈಕ್ಯ ಲೋಕ ನಾಯಕ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಗೌರವ ಅಧ್ಯಕ್ಷ ಡಾ. ಬೀಮಣ್ಣ ಖಂಡ್ರೆ ರವರ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮವನ್ನು  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
 ರೈಲ್ವೆ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಕೆ. ಎಂ. ಮಹೇಶ್ವರಯ್ಯ ಸ್ವಾಮಿ ಮಾತನಾಡಿ,  ಅಖಿಲ ಭಾರತ ವೀರಶೈವ ಮಹಾಸಭಾ ಪ್ರಮುಖ ಕೊಂಡಿಗಳಾದ ಎನ್. ತಿಪ್ಪಣ್ಣ, ಶ್ಯಾಮನೂರು ಶಿವಶಂಕರಪ್ಪ, ಮತ್ತು ಡಾ. ಭೀಮಣ್ಣ ಖಂಡ್ರೆ ಹೀಗೆ ಸಾಲು ಸಾಲು ಮಹನೀಯರು ನಮ್ಮನ್ನು ಅಗಲಿರುವುದು ಈ ನಾಡಿಗೆ ಸಮಾಜಕ್ಕೆ ದೊಡ್ಡ ಆಘಾತ ಮತ್ತು ನೋವಿನ ಸಂಗತಿ . ಸಮಾಜಕ್ಕೆ ತುಂಬಲಾರದ ಬಾರಿ ನಷ್ಟ. ಅವರಂತೆ ಸಮಾಜ ಒಟ್ಟಾಗಿ ಒಂದಾಗಿ ಹೋಗುವ ಸತ್ಸಂಪ್ರದಾಯ ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದರು.
ರೈತ ಹೋರಾಟಗಾರ ಪುರುಷೋತ್ತಮ ಗೌಡ ಮಾತನಾಡಿ, ಶತಾಯುಷಿ ಲಿಂಗೈಕ್ಯ ಭೀಮಣ್ಣ ಖಂಡ್ರೆ ಯವರು ಸಮಾಜಕ್ಕೆ ಸೇವೆ ಸಲ್ಲಿಸಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಕಸಾಪ  ನಿಕಟ ಪೂರ್ವ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ಗುರು ವಿರಕ್ತರನ್ನು ಒಂದುಗೂಡಿಸಿದ ಮೇರು ನಾಯಕರು.ನಮ್ಮ ಸಮಾಜದ ಏಳು ಬೀಳುಗಳನ್ನು ಕಷ್ಟ ನಿಷ್ಟೂರಗಳನ್ನು ದೌರ್ಬಲ್ಯಗಳನ್ನು ನಿಭಾಯಿಸುವ ಶಕ್ತಿ  ಅವರಲ್ಲಿತ್ತು.. ಈಗ ನಮ್ಮ ಸಮುದಾಯ ಈ ದೊಡ್ಡ ಜವಾಬ್ದಾರಿಯನ್ನು ಮುನ್ನಡೆಸಿಕೊಂಡು ಒಗ್ಗಟ್ಟಾಗಿ ಹೋಗುವ ಕೆಲಸ ನಿರ್ವಹಿಸಬೇಕಾಗಿದೆ ಎಂದರು.
 ಸಮಾಜದ ಮುಖಂಡರಾದ ಕೋಳೂರು ಚಂದ್ರಶೇಖರ ಗೌಡ, ವಕೀಲ ಕಣೇಕಲ್ಎರಿಸ್ವಾಮಿ ಗೌಡ, ಎಚ್ ಕೆ.ಗೌರಿಶಂಕರ ಸ್ವಾಮಿ, ಕಾರ್ಯಕ್ರಮದಲ್ಲಿ ಮಹನೀಯರನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆಎಂ ಪುಟ್ಟರಾಜ, ಎಸ್ ಎಂ ನಾಗರಾಜ ಸ್ವಾಮಿ ಸಿರಿಗೇರಿ, ಡಿ ಅರುಣ್ ಕುಮಾರ್ ದಾಸಪುರ, ಮುಖಂಡರಾದ ಕೇಣಿ ಬಸವರಾಜ್, ಬಿಸ್ಲಳ್ಳಿ ಬಸವರಾಜ್, ಲಿಂಗರೆಡ್ಡಿ, ಮೌಲ್ಯ ಮಂಜುನಾಥ, ಜಾಲಿಹಾಳ್ ಶ್ರೀಧರ್, ಕೊಂಚಗೇರಿ ಮಂಜುನಾಥ, ವಿಕೆ ತಿಪ್ಪೇಶ್ ಗೌಡ ಕಪ್ಗಗಲ್, ದಿವಾಕರ ಗೌಡ, ಹಾಗೂ ಸಮಾಜದ ಮುಖಂಡರು ಇನ್ನಿತರರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article