ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದಲ್ಲಿ 50 ಸಾವಿರ ಸದಸ್ಯರು

Sandeep Malannavar
ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದಲ್ಲಿ 50 ಸಾವಿರ ಸದಸ್ಯರು
WhatsApp Group Join Now
Telegram Group Join Now
ಬಳ್ಳಾರಿ, ಜ.20..: ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮಹಿಳಾ ಸರ್ಕಾರಿ ನೌಕರರಿಗೆ ಪ್ರಾಧಾನ್ಯತೆ ದೊರೆಯದ ಕಾರಣ ಅಸ್ತಿತ್ವಕ್ಕೆ ಬಂದಿರುವ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದಲ್ಲಿ 50 ಸಾವಿರ ಸದಸ್ಯರಿದ್ದಾರೆಂದು ಸಂಘದ ಅಧ್ಯಕ್ಷೆ  ರೋಶಿನಿಗೌಡ ಹೇಳಿದ್ದಾರೆ.
ಅವರು ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ. ಮಾತನಾಡುತ್ತಾ,. ರಾಜ್ಯದಲ್ಲಿ  2.5 ಲಕ್ಷ ಮಹಿಳಾ ನೌಕರಿದ್ದರೂ, ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಪ್ರಾತಿನಿಧ್ಯ ದೊರೆಯದ ಕಾರಣ ನಾವು ಪ್ರತ್ಯೇಕವಾಗಿ ಮಹಿಳಾ ಸಂಘ ಅಸ್ತಿತ್ವಕ್ಕೆ ತಂದಿದ್ದೇವೆ.‌2023 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು 50 ಸಾವಿರ ಸದಸ್ಯರು ಇದ್ದಾರೆಂದರು.
ವೇತನ ಸಹಿತ ಋತುಚಕ್ರ ರಜೆ ನೀಡಲು ಹೋರಾಟ ಮಾಡಿ ಯಶಸ್ವಿಯಾಗಿದೆ. ರಾಜ್ಯದ 18 ಜಿಲ್ಲೆಯಲ್ಲಿ ಜಿಲ್ಲಾ ಘಟಕಗಳು ಅಸ್ತಿತ್ವಕ್ಕೆ ಬಂದಿವೆ ಬಳ್ಳಾರಿ ಜಿಲ್ಲೆಯಲ್ಲಿ ಸಹ ಸಂಘ ಅಸ್ತಿತ್ವಕ್ಕೆ ಬರುತ್ತಿದೆ.  ಶಾಂತಮ್ಮ ಅಧ್ಯಕ್ಷರಾಗಿದ್ದಾರೆಂದರು.
ಮಹಿಳಾ ನೌಕರರ ಸುರಕ್ಷತೆ, ಅವರ ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಉಳಿದ ಜಿಲ್ಲೆಗಳಲ್ಲೂ ಸಂಘದ ಶಾಖೆಗಳು ಆರಂಭಿಸಲಿದೆಂದು ಹೇಳಿದರು.
ಸಂಘದ ಖಜಾಂಚಿ ಡಾ.ವೀಣಾ ಕೃಷ್ಣ ಮೂರ್ತಿ,  ಉಪಾಧ್ಯಕ್ಷೆ  ಮಧುಮತಿ ಹಿರೇಮಠ್,  ಸಂಘಟನಾ ಕಾರ್ಯದರ್ಶಿ, ಆಶಾರಾಣಿ ,  ಜಿಲ್ಲಾ ಅಧ್ಯಕ್ಷೆ ಶಾಂತಮ್ಮ ಮೊದಲಾದವರು ಸುದ್ದಿಗೋಷ್ಟಿಯಲ್ಲಿ ಇದ್ದರು.
WhatsApp Group Join Now
Telegram Group Join Now
Share This Article