ಅಕ್ರಮ ಅದಿರು ಸಾಗಾಣೆಗೆ ಅವಕಾಶ ನೀಡಲ್ಲ: ಪೆನ್ನೇಕರ್
ಬಳ್ಳಾರಿ, ಜ.20::ಅಕ್ರಮ ಅದಿರು ಸಾಗಾಣೆ ತಡೆಯುವುದು ಮೂಲತಃ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜವಾಬ್ದಾರಿಯಾದರೂ. ಅಕ್ರಮ ಯಾವುದೇ ನಡೆದರೂ ಅದನ್ನು ಪೊಲೀಸ್ ಇಲಾಖೆ ನಿಯಂತ್ರಣಕ್ಕೆ ತರುವುದಾಗಿರುತ್ತದೆ. ಈ ಹಿನ್ನಲೆಯಲ್ಲಿ ಕಳೆದ ಮೂತು ದಿನಗಳ ಹಿಂದೆ 20 ಟನ್ ಅಕ್ರಮ ಅದಿರು ಸಾಗಾಣೆಯ ಲಾರಿಯನ್ನು ತಡೆದು ಇದರ ಹಿಂದೆ ಯಾವ ಶಕ್ತಿ ಇದೆ ಎನ್ನುವುದನ್ನು ಪತ್ತೆ ಹಚ್ಚಲಿದೆಂದು ನೂತನ ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಹೇಳಿದ್ದಾರೆ.
ಜ.16 ರಂದು 20 ಟನ್ ಅದಿರನ್ನು ಪರ್ಮಿಟ್ ಇಲ್ಲದೆ ಎನ್ ಎಂ ಡಿ ಸಿ ಸಿ ಬ್ಲಾಕ್ ನಿಂದ ಹೊತ್ತು ತಂದ ಲಾರಿಯನ್ನು ಬಾಬಯ್ಯ ಕ್ರಾಸ್ ಬಳಿ ತಡೆದು ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಚಾಲಕ ಮೊಳಕಾಲ್ಮುರಿನ ಚಿದಾನಂದಪ್ಪ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದೆ. ಆತ ನೀಡಿದ ಮಾಹಿತಿಯಂತೆ ಅದಿರನ್ನು ಆಂದ್ರಪ್ರದೇಶದ ನೇಮಕಲ್ಲು ಬಳಿ ಇರುವ ಸಾಯಿ ಬಾಲಾಜಿ ಪೆಲೆಟ್ ಪ್ಲಾಂಟ್ ಗೆ ತೆಗೆದುಕೊಂಡು ಹೋಗುತ್ತಿತ್ತು ಎಂದು ಹೇಳಿದ್ದಾನೆ. ಆ ಲಾರಿಗೆ ಜಿಪಿಎಸ್ ಇದೆ. ಅದು ಎಲ್ಲಿಂದ ಬಂತು, ಈ ಹಿಂದೆ ಎಲ್ಲೆಲ್ಲೆ ಓಡಾಡಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪತ್ತೆಹಚ್ಚಲಿದೆಂದು ಹೇಳಿದ್ದಾರೆ.
ಬೃಹತ್ ಮಟ್ಟದ ಅಕ್ರಮ ಗಣಿಗಾರಿಕೆಗೆ ಸಿಇಸಿ ಬ್ರೇಕ್ ಹಾಕಿದ ಮೇಲೆ ಇಂತಹ ಕೃತ್ಯಕ್ಕೆ ಅವಕಾಶ ಇರಲಿಲ್ಲ. ಆದರೂ ಪರ್ಮಿಟ್ ಇಲ್ಲದೆ ಇನ್ನೂ ಅದಿರು ಸಾಗಾಣೆ ನಡೆಯಿತ್ತಿದೆ ಎಂದರೆ ಮತ್ತೆ ಗಣಿ ಮಾಫಿಯಾ ತನ್ನ ಕೈ ಚಳಕ ನಿಲ್ಲಿಸಿಲ್ಲ ಎಂಬುದು ಸಾಬೀತಾಗಿತ್ತಿದೆ. ಇದನ್ನು ಹೀಗೆ ಬಿಟ್ಟರೆ ಮತ್ತೆ ಇದು ಜಿಲ್ಲೆಯ ರಾಜಕಾರಣದಲ್ಲಿ ಈ ಹಿಂದಿನಂತೆ ಎಡೆ ಎತ್ತುವ ಸಾಧ್ಯತೆಗಳಿವೆ.
ಕೇಂದ್ರ ಭದ್ರತಾ ಪಡೆಯ ಕಣ್ಣು ತಪ್ಪಿಸಿ ಎನ್ ಎಂ ಡಿ ಸಿಯಿಂದ ಅಕ್ರಮ ಅದಿರು ಹೊರಗಡೆ ಬಂದಿದ್ದರೆ. ಇದರಲ್ಲಿ ಅಲ್ಲಿನ ಅಧಿಕಾರಿಗಳ ಕೈವಾಡದ ಬಗ್ಗೆಯೂ ತನಿಖೆ ಆಗಬೇಕಿದೆ.


