ಜೀವನದಲ್ಲಿ ಸೋಲು ಗೆಲುವು ಮುಖ್ಯವಲ್ಲ ; ಸೋಲೇ ಗೆಲುವಿನ ಮೆಟ್ಟಿಲು : ಸಂಸದ ಈ ತುಕಾರಾಂ

Sandeep Malannavar
ಜೀವನದಲ್ಲಿ ಸೋಲು ಗೆಲುವು ಮುಖ್ಯವಲ್ಲ ; ಸೋಲೇ ಗೆಲುವಿನ ಮೆಟ್ಟಿಲು : ಸಂಸದ ಈ ತುಕಾರಾಂ
WhatsApp Group Join Now
Telegram Group Join Now
ಬಳ್ಳಾರಿ. ಜ. 20.: (ತೋರಣಗಲ್ಲು ) ಮನುಷ್ಯ ಅಥವಾ ವಿದ್ಯಾರ್ಥಿಯ ಜೀವನದಲ್ಲಿ ಸೋಲು ಗೆಲುವು ಸಹಜ ಅದನ್ನು ಮೆಟ್ಟಿನಿಂತು ಜೀವನದ ಗುರಿಯನ್ನು ಸಾಧಿಸಿ ಕೊಳ್ಳಬೇಕು ಎಂದು ಬಳ್ಳಾರಿ ವಿಜಯನಗರ ಸಂಸದರಾದ ಈ ತುಕಾರಾಂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
 ಅವರು ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ಗ್ರಾಮದ ಜಿಂದಾಲ್ ಆದರ್ಶ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಭಾರತ ಸ್ಕೌಟ್ ಮತ್ತು ಗೈಡ್ ಬಳ್ಳಾರಿ ಜಿಲ್ಲಾ ಸಂಸ್ಥೆ ಮತ್ತು ಜಿಂದಾಲ್ ಆದರ್ಶ ವಿದ್ಯಾಲಯ ಶಂಕರ್ ಗುಡ್ಡ ತೋರಣಗಲ್ಲು ಇವರ ಸಂಯುಕ್ತ ಆಶಯದಲ್ಲಿ ಆಯೋಜಿಸಲಾಗಿದ್ದ ಕಬ್ಸ್  ಬುಲ್ ಬುಲ್ಸ್ ಸ್ಕೌಟ್ ಗೈಡ್ಸ್ ಮತ್ತು ರೋವರ್ಸ್ ಅಂಡ್ ರೇಂಜರ್ಸ್ ಹಾಗೂ ದಳ ನಾಯಕರುಗಳ ರಾಜ್ಯಮಟ್ಟದ ಗೀತ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದ ಶೈಲಿಯಲ್ಲಿ ಶಿಸ್ತು ಮತ್ತು ಸಂಯಮವನ್ನು  ಕಾಪಾಡಿಕೊಳ್ಳಲು ಭಾರತ್ ಸ್ಕೌಟ್ ಅಂಡ್ ಗೈಡ್ ಸಂಸ್ಥೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಈ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಜೀವನ ಶೈಲಿಯನ್ನು ಉತ್ತಮಪಡಿಸಿಕೊಳ್ಳಬೇಕು ಇಂತಹ ಕಾರ್ಯಕ್ರಮಗಳಿಗೆ ನಾನು ಮುಂದಿನ ದಿನಗಳಲ್ಲಿ ಕಾರ್ಯಕ್ರಮಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆ  ಸಹಾಯ ಸಹಕಾರವನ್ನು ಮಾಡಿಕೊಡುತ್ತೇನೆ ಎಂದ ಅವರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ರಾಜ್ಯಮಟ್ಟದ ಅಥವಾ ರಾಷ್ಟ್ರ ಮಟ್ಟದ ಕಾರ್ಯಕ್ರಮವನ್ನು ನಮ್ಮ ತಾಲೂಕು ಅಥವಾ ಜಿಲ್ಲೆಯಲ್ಲಿ ಹಮ್ಮಿಕೊಂಡಲ್ಲಿ ಅದ್ದೂರಿಯಾಗಿ ನಾನೇ ಮುಂದೆ ನಿಂತು ನಡೆಸಿಕೊಡುತ್ತೇನೆ ಎಂದು ಭರವಸೆಯನ್ನು ನೀಡಿದರು.
 ನನ್ನ ಜೀವನದ ಏಳುಬೀಳುಗಳಲ್ಲಿ ಏಳಿಗೆಯನ್ನ  ಹೆಚ್ಚಾಗಿ ಕಂಡಿದ್ದೇನೆ ಅದಕ್ಕೆ ಕಾರಣವೆಂದರೆ ನನ್ನ ಶಿಸ್ತು ಮತ್ತು ಸಂಯಮ ಸೇವಾ ಮನೋಭಾವ  ಕಾರಣ ವಿದ್ಯಾರ್ಥಿಗಳು ಸಹ ಇದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತರಾದ ಪಿ ಜಿ ಆರ್ ಸಿಂಧ್ಯಾ ಮಾತನಾಡಿ, `ಸೈಟ್-ಗೈಡ್ ಚಳವಳಿಯು ಪ್ರಪಂಚದಾದ್ಯಂತ ವ್ಯಾಪಿಸಿರುವ ಅಂತರಾಷ್ಟ್ರೀಯ ಯುವಚಳವಳಿಯಾಗಿದೆ. ಈ ಚಳವಳಿಯು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಬದುಕಿನ ಶಿಕ್ಷಣ,
ಪರಿಸರ ಪ್ರಜ್ಞೆ, ಮನೋಬಲ, ಸಹಕಾರ, ಜಾತ್ಯಾತೀತ ಮನೋಭಾವ, ರಾಷ್ಟ್ರೀಯತೆ, ಸಾಹಸಪ್ರಿಯತೆ, ಕ್ರೀಡಾ ಮನೋಭಾವ, ಕ್ರಿಯಾಶೀಲನೆ, ಸಚ್ಚಾರಿತ್ರ ಜೀವನ ಕೌಶಲ್ಯ, ನಾಯಕತ್ವ ಮತ್ತು ಉದಾತ್ತ ಜೀವನ ಮೌಲ್ಯಗಳನ್ನು ಮೈಗೂಡಿಸುವ ಉದ್ದೇಶವುಳ್ಳ ಸ್ವಯಂ ಸೇವಾ ಸಂಸ್ಥೆಯಾಗಿದೆ. ಸ್ಕೌಟ್ಸ್  ಮತ್ತು ಗೈಡಿಂಗ್‌ನಲ್ಲಿ ಕರ್ನಾಟಕ ರಾಜ್ಯವು ದೇಶದ ಮುಂಚೂಣಿ ರಾಜ್ಯವಾಗಿದ್ದು, ಪ್ರಸ್ತುತ 7.84 ಲಕ್ಷ ಬನ್ನೀಸ್, ಕಬ್, ಬುಲ್‌ಬುಲ್, ಸ್ಕೌಟ್, ಗೈಡ್, ರೋವರ್, ರೇಂಜರ್ ವಿದ್ಯಾರ್ಥಿಗಳು ಜೀವನ ಶಿಕ್ಷಣ
ಕಲಿತು, ಉತ್ತಮ ನಾಗರಿಕರಾಗಿ ರೂಪುಗೊಂಡಿದ್ದಾರೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ತನ್ನ ಕಾರ್ಯ ಚಟುವಟಿಕೆಯಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಅಭಿವೃದ್ಧಿ ಹೊಂದುವಂತೆ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಜೀವನದಲ್ಲಿ ದೇಶದ ಬಗ್ಗೆ ದೇಶಪ್ರೇಮ ದೇಶದ ಬಗ್ಗೆ ಗೌರವ ನಾಡಿನ ಬಗ್ಗೆ ಗೌರವ ಮತ್ತು ತಮ್ಮ ಜೀವನ ಶೈಲಿಯಲ್ಲಿ ಏಕಾಗ್ರತೆಯನ್ನು ಕಲ್ಪಿಸಿ ಕೊಡುತ್ತದೆ ಇದರಿಂದ ಮಕ್ಕಳಿಗೆ ದೇಶದ ಮೇಲೆ ಗೌರವ ಹೆಚ್ಚಾಗಿ ಉತ್ತಮ ಪ್ರಜೆಗಳಾಗುವ ವೇದಿಕೆಯನ್ನು ಕಲ್ಪಿಸಿಕೊಡಲಿದೆ, ಇಂಥ ಕಾರ್ಯಕ್ರಮಗಳಲ್ಲಿ ತಪ್ಪದೇ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕೆಂದರು.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಮಾತನಾಡಿ, ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿಸಬೇಡಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಭಾರತ ಸ್ಕೌಟ್ಸ್  ಮತ್ತು ಗೈಡ್ ಸಂಸ್ಥೆ ಆಗಾಗ ಹಮ್ಮಿಕೊಳ್ಳುವ ಇಂಥ ಕಾರ್ಯಕ್ರಮಗಳಲ್ಲಿ  ಭಾಗವಹಿಸಿ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಪಡೆದುಕೊಳ್ಳಬೇಕೆಂದರು.
 ಕಾರ್ಯಕ್ರಮದ ಆಯೋಜಕರೂ ಹಾಗೂ ಎ ಎಸ್ ಓ ಸಿ ಗೈಡ್ಸ್ ಮತ್ತು ರೇಜರ್ ಇನ್ ಮತ್ತು ಕಲ್ಯಾಣ ಕರ್ನಾಟಕ ಉಸ್ತುವಾರಿಗಳಾದ ಮಲ್ಲೇಶ್ವರಿ ಜುಜಾರೆ ಪ್ರಾಸ್ತಾವಿಕ  ಮಾತನ್ನಾಡಿ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯು ಸುಮಾರು 75 ವರ್ಷದ ಹಿಂದೆ ವೆಂಕಣ್ಣ ಮತ್ತು ಗುರುರಾಜ ರಾವ್, ಮಲ್ಲಿಕಾರ್ಜುನಯ್ಯ A M, ಮತ್ತು ತಂಡದವರ ನೇತೃತ್ವದಲ್ಲಿ ಪ್ರಾರಂಭವಾಯಿತು.
ಇವರು ನೇತೃತ್ವದಲ್ಲಿ ಬಳ್ಳಾರಿ ಮಕ್ಕಳು ರಾಜ್ಯ ಪುರಸ್ಕಾರ ರಾಷ್ಟ್ರಪತಿ ಅವಾರ್ಡ್ ಹಾಗೂ ಪ್ರಧಾನಮಂತ್ರಿ ಪಾರಿತೋಷಕ ಪದಕಗಳನ್ನು ಪಡೆಯುತ್ತಿದ್ದು ಹಾಗೂ ಅಂತರಾಷ್ಟ್ರೀಯ ಮಟ್ಟದ ಜಂಬೂರೇಟ್, ಗೀತ ಗಾಯನ, ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ನಮ್ಮ ಬಳ್ಳಾರಿ ಜಿಲ್ಲೆಯಿಂದ ಸುಮಾರು 30000 ರೋವರ್ಸ್ ಮತ್ತು ರೇಂಜರ್ಸ್ ಸ್ಕೌಟ್ಸ್ ಮತ್ತು ಗೈಟ್ಸ್ ಕಬ್ – ಬುಲ್ ಬುಲ್ ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ಭಾಗಿಯಾಗಿದ್ದಾರೆ
ನಮ್ಮ ಸಂಸ್ಥೆಯು ಪ್ರತಿವರ್ಷ ಪ್ರತಿ ತಿಂಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಈ ಕಾರ್ಯಕ್ರಮಗಳ ಯಶಸ್ವಿಗಾಗಿ ಸಂಸ್ಥೆಯ ರಾಜ್ಯ ಮತ್ತು ಜಿಲ್ಲೆಯ ಪದಾಧಿಕಾರಿಗಳು ಕೆಲಸ ಮಾಡುತ್ತಾರೆ ಜೊತೆಗೆ ಈ ರೀತಿಯಾಗಿ ಜಿಲ್ಲೆಯ ಶಾಲೆ ಕಾಲೇಜುಗಳು ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಲ್ಲಿ ಇನ್ನು ಮುಂದೆ ಸಂಸದರು ತಿಳಿಸಿದಂತೆ ರಾಜ್ಯ ಅಥವಾ ರಾಷ್ಟ್ರಮಟ್ಟದ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.
 ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಉಮಾದೇವಿ,  ಹಂಪಿ ವಿಶ್ವವಿದ್ಯಾಲಯದ ರಿಜಿಸ್ಟರ್ ವಿರುಪಾಕ್ಷಿ ಪೂಜಾರಹಳ್ಳಿ, ಆದರ್ಶ ವಿದ್ಯಾಲಯದ ಕುಮಾರಸ್ವಾಮಿ ಬಳಿಗಾರ, ತೋರಣಗಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅರಳಾಪುರ ವೀರೇಶಪ್ಪ,
 ಭರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ಉಪಾಧ್ಯಕ್ಷ ಮಲ್ಲೇಶಪ್ಪ ಜಿಲ್ಲಾ ಕಾರ್ಯದರ್ಶಿ ವಿಜಯ ಸಿಂಹ ಸಂಡೂರು ತಾಲೂಕಿನ ಕಾರ್ಯದರ್ಶಿ ಸೋಮಪ್ಪ  ಸೇರಿದಂತೆ ಹಲವರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article