ರನ್ನ ಬೆಳಗಲಿ:ಜ.೨೦.,ಪಟ್ಟಣ ಪಂಚಾಯತ್ ಕಾರ್ಯಾಲಯ ಆವರಣದಲ್ಲಿ ಮಂಗಳವಾರ ದಂದು ಸಾಮಾನ್ಯ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ ಪಟ್ಟಣ ಪಂಚಾಯತ್ ಅಧ್ಯಕ್ಷೆ ರೂಪಾ ಹೊಸಟ್ಟಿ ಸಾರ್ವಜನಿಕರ ಕೆಲಸ ಕಾರ್ಯಗಳು ತೀವ್ರಗತಿಯಲ್ಲಿ ಆಗಲಿ,ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಮುಖ್ಯವಾಗಿದೆ.ವಿವಿಧ ಯೋಜನೆಗಳ ಟೆಂಡರ್ ಗಳಿಗೆ ಅರ್ಜಿ ಕರೆದಾಗ.ಕೇವಲ ಒಬ್ಬರೇ ಅರ್ಜಿ ಸಲ್ಲಿಸಿದರೆ ಅದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಮತ್ತೊಮ್ಮೆ ಟೆಂಡರ್ ಕರೆದು ಹೆಚ್ಚಿನ ಅರ್ಜಿ ಬರುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಸ್ಥಾಯಿ ಸಮಿತಿ ಚೇರ್ಮನ್ ಗೌಡಪ್ಪ (ಪ್ರವೀಣ) ಬರಮನಿ ಸರ್ಕಾರ ದಿಂದ ಯೋಜನೆಗಳು ಎಲ್ಲರಿಗೂ ದೊರೆಯುವಂತಾಗಲಿ.ಅರ್ಹತೆ ಇರುವ ಫಲಾನುಭವಿಗಳಿಗೆ ಮಾತ್ರ ಸೋಲಾರ್ ವಾಟರ್ ಹೀಟರ್ ನೀಡಿ,ಯಾವುದೇ ಕಾರಣಕ್ಕೂ ದುರ್ಬಳಕೆ ಆಗದಂತೆ ನೋಡಿಕೊಳ್ಳಿ, ಸಾರ್ವಜನಿಕರು ತೆರಿಗೆ ತುಂಬಿ, ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಬೇಕೆಂದರು.
ಮುಖ್ಯಾಧಿಕಾರಿಗಳಾದ ಈರಣ್ಣ ದಡ್ಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಸಭೆಯ ನಡುವಳಿಗಳನ್ನು ಸಭೆಯಲ್ಲಿ ತಿಳಿಸಿ ಸನ್ ೨೦೨೬-೨೭ನೇ ಸಾಲಿನ ಮುಖ್ಯಾಧಿಕಾರಿಗಳ ಕಚೇರಿ ಬಾಡಿಗೆ ವಾಹನದ ವಾರ್ಷಿಕ ಟೆಂಡರ್ ಧರ ನಿಗದಿ,ಸನ್ ೨೦೨೪-೨೫ನೇ ಸಾಲಿನ ಹಾರ್ದಿಕ ಕಾರ್ಯಕ್ಷೇಮತೆ ವರದಿ,ಪ.ಪಂ. ಸದಸ್ಯರ ಸ್ವಚ್ಛತೆಯ ಬಗ್ಗೆ ಅಧ್ಯಯನ ಪ್ರವಾಸ ಕೈಗೊಳ್ಳುವುದು. ಸನ್ ೨೦೨೫-೨೬ನೇ ಸಾಲಿನ ಎಸ್ ಎಫ್ ಸಿ ಅನುದಾನದಡಿಯಲ್ಲಿ ಆರು ಫಲಾನುಭವಿಗಳಿಗೆ ಸೋಲಾರ್ ವಾಟರ್ ಹೀಟರ್ ಅಳವಡಿಸುವುದು. ಓ ಎಫ್ ಸಿ ಕೇಬಲ್ ಮೊಬೈಲ್ ಟವರ್ಗಳಿಗೆ ಸರ್ಕಾರ ಮಾರ್ಗ ಸೂಚಿಯನ್ವವ ದರ ನಿಗದಿಪಡಿಸುವುದು,ಕಚೇರಿ ವಿವಿಧ ಶಾಖೆಯ ವಾರ್ಷಿಕ ಟೆಂಡರ್ ಕರೆಯುವುದರ
ಬಗ್ಗೆ ಮಾಹಿತಿಯನ್ನು ನೀಡಿದರು.
ಸದಸ್ಯ ಪ್ರವೀಣ ಪಾಟೀಲ ಪಟ್ಟಣದ ಸಾರ್ವಜನಿಕರಿಗೆ ಆಸ್ತಿ ಉತಾರ ನೀಡುವಲ್ಲಿ ಬಹಳ ವಿಳಂಬವಾಗುತ್ತಿದೆ,ಆರಏಳು ತಿಂಗಳು ಗತಿಸಿದರು ಇನ್ನು ಉತಾರೆ ನೀಡದೆ ಇರುವುದು ಸಾರ್ವಜನಿಕರ ಕೋಪಕ್ಕೆ ನಾವು ತುತ್ತಾಗುತ್ತಿದ್ದೇವೆ. ಆದ? ಬೇಗ ಈ ಸಮಸ್ಯೆ ಬಗೆಹರಿಯಬೇಕು.ಶವಯಾತ್ರೆ ವಾಹನಕ್ಕೆ ?೫೦೦, ಅಂತ್ಯಕ್ರಿಯೆ ಸಿದ್ಧತೆಯಾಗಿ ಜೆಸಿಬಿ ಬಾಡಿಗೆಗೆ ?೮೦೦ ನಿಗದಿಗೊಳಿಸಿ,ಹೆಚ್ಚಿನ ಮೊತ್ತ ಬೇಡವೆಂದು ತಿಳಿಸಿದರು.
ಸದಸ್ಯ ಸದಾಶಿವ ಸಂಕ್ರಟ್ಟಿ ಮಾತನಾಡಿ ೭ ಮತ್ತು ೯ನೇ ವಾರ್ಡಗಳ ನಿವಾಸಿಗಳಿಗೆ ಕಂಪ್ಯೂಟರ್ ಉತಾರ ನೀಡಿ, ಆ ವಾರ್ಡ್ ಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಸಮುದಾಯ ಮೊಬಿಲೈಜರಾಗಳಾಗಿ ಆಯ್ಕೆಗೊಂಡ ಲಕ್ಷ್ಮಿ ಸರವಿ ಮತ್ತು ಪ್ರತಿಕ್ಷಾ ಗೋರಬಾಳ ಅವರ ಕಾರ್ಯಕ್ಷೇತ್ರದ ಜವಾಬ್ದಾರಿ ಕುರಿತು ಮುಖ್ಯ ಅಧಿಕಾರಿಗಳು ಮಾಹಿತಿ ನೀಡಿ ಪರಿಚಯಿಸಿದರು.
ಪ.ಪಂ.ಉಪಾಧ್ಯಕ್ಷೆ ಸಹನಾ ಸಾಂಗ್ಲೀಕರ,ಸದಸ್ಯರಾದ ದ್ರಾಕ್ಷಾಯಿಣಿ ಮೂರನಾಳ,ಭೀಮಪ್ಪ ಹೊಸಮನಿ,ಕರೇಪ್ಪ ಕುಂಬಾಳಿ, ಮುತ್ತಪ್ಪ ನಾಯಕ,ಗೌರವ ಅಮಾತಿ, ಅನಿತಾ ಮಲಾವಡಿ,ಮುಬಾರಕ ಅತ್ತಾರ,ನೀಲಕಂಠ ಸೈದಾಪುರ, ಮುತ್ತಪ್ಪ ಸನಹಟ್ಟಿ, ನಾಮ ನಿರ್ದೇಶಿತ ಸದಸ್ಯರಾದ ಬಸವರಾಜ ಗೌರಣ್ಣವರ, ಯಲ್ಲಪ್ಪ ದೊಬಸಿ, ಅಭಿಯಂತರರಾದ ಪ್ರಶಾಂತ ಪಾಟೀಲ,ಸಿಬ್ಬಂದಿಗಳಾದ ಮಹಾಲಿಂಗ ಸಮೇರ,ರಾಜು ಮುಗಳಖೋಡ,ಬಾಬು ಜಕಾತಿ,ಸತ್ಯಪ್ಪ ಹಣಗoಡಿ, ಮತ್ತು ಇನ್ನಿತರರು ಉಪಸ್ಥಿತರಿದ್ದರು.


