“ನಕಲಿ ಸ್ಟಾಂಪ್‌ಗಳಿಗೆ ಡಿಜಿಟಲ್ ಇ-ಸ್ಟ್ಯಾಂಪ್ ಮೂಲಕ ಬ್ರೇಕ್ “

Hasiru Kranti
“ನಕಲಿ ಸ್ಟಾಂಪ್‌ಗಳಿಗೆ  ಡಿಜಿಟಲ್ ಇ-ಸ್ಟ್ಯಾಂಪ್ ಮೂಲಕ ಬ್ರೇಕ್ “
WhatsApp Group Join Now
Telegram Group Join Now

ಹುನಗುಂದ: ರಾಜ್ಯ ಸರ್ಕಾರ ರಾಜ್ಯಾದ್ಯಂತ ಇ-ಸ್ಟ್ಯಾಂಪ್ ಗೆ ಕೋಕ್ ಕೊಟ್ಟು ಡಿಜಿಟಲ್ ಇ-ಸ್ಟ್ಯಾಂಪ್ ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹುನಗುಂದ ಮತ್ತು ಇಳಕಲ್ ಅವಳಿ ತಾಲೂಕಿನ ಉಪ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಮಂಗಳವಾರ ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಅವಳಿ ತಾಲೂಕು ವ್ಯಾಪ್ತಿಯ ದಸ್ತಾವೇಜು, ಬರಹಗಾರರು, ವಕೀಲರು, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಹಾಗೂ ಸಹಕಾರಿ ಸೌಹಾರ್ದಗಳ ಸಿಬ್ಬಂದಿ ವರ್ಗದವರಿಗೆ ಡಿಜಿಟಲ್ ಇ-ಸ್ಟ್ಯಾಂಪ್ ಬಗ್ಗೆ ತರಬೇತಿ ನೀಡಲಾಯಿತು.
ಡಿಜಿಟಲ್ ಇ-ಸ್ಟ್ಯಾಂಪ್ ಪಡೆಯಲು ಕಾವೇರಿ ೨.೦ ದಲ್ಲಿ ಲಾಗಿನ್ ಪಾಸ್ವರ್ಡ್ ಹಾಕಿದ ನಂತರ ಬೇಕಾದ ವಸಾವೇಜಿನ ಬಾಡಿಗೆ ಒಪಂದ, ಅಫಿಡವಿಟ್, ಮಾರಾಟ ಒಪ್ಪಂದ ಪ್ರಕಾರವನ್ನು ಆಯ್ಕೆ ಮಾಡಿ ವಿವರಗಳನ್ನು ಭರ್ತಿ ಮಾಡಿ, ಅರ್ಜಿದಾರರು ಹಾಗೂ ಸಹಿಯನ್ನು ಆಧಾರಿತ ಪರಿಶೀಲನೆ. ಸ್ಟಾಂಪ್ ತೆಗೆದುಕೊಳ್ಳುವವರು ಮತ್ತು ಕೊಡುವವರ ಆಧಾರ ಓಟಿಪಿ ಕಡ್ಡಾಯವಾಗಿದೆ. ಸಂಬಂಧಿಸಿದ ಇಲಾಖೆ ಕಡ್ಡಾಯವಾಗಿದೆ.
ಇ-ಸ್ಟಾಂಪ್ ಪಡೆಯಲು ಸೇವಾ ಶುಲ್ಕ ಮೊದಲ ವ್ಯಕ್ತಿಗೆ ೨೦ರೂ ಹೆಚ್ಚುವರಿ ವ್ಯಕ್ತಿಗಳಿಗೆ ತಲಾ ೫ ರೂ. ನಿಗದಿ ಮಾಡಲಾಗಿದೆ. ಕನಿಷ್ಠ ೨೫ ರೂ. ಯಿಂದ ಗರಿಷ್ಠ ೧೦೦ ರೂ. ಸೇವಾ ಶುಲ್ಕ ಇರಲಿದೆ. ಎಂದು ತರಬೇತಿದಾರರಾದ ದೇವೇಂದ್ರ ಸುತ್ತಾರ ಹಾಗೂ ಗಿರೀಶ ಮೋರೆ ತಿಳಿಸಿದರು.
ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ನಾಗರಿಕರು ಮನೆಯಿ ಬಳಸುತ್ತಿದ್ದ ನಕಲಿ ಸ್ಟ್ಯಾಂಪಗಳಿಗೆ ಸರ್ಕಾರ ಸಧ್ಯ ಡಿಜಿಟಲ್ ಇ-ಸ್ಟಾಂಪ ಮೂಲಕ ಬ್ರೇಕ್ ಹಾಕಲಿದೆ. ಈ ತರಬೇತಿಯಲ್ಲಿ ಉಪ ನೋಂದನೆಯ ಪ್ರಥಮ ವರ್ಜೆಯ ಸಹಾಯಕ ಎಚ್.ಡಿ ಮರಿಸ್ವಾಮಿ, ಸಿಬ್ಬಂದಿಗಳಾದ ಆರ್.ಎಂ. ಮೀತಿ,ಂದಲೇ ಸ್ವತಃ ತಮ್ಮ ಮೊಬೈಲ್ ನಲ್ಲಿ ಡಿಜಿಟಲ್ ಇ-ಸ್ಟ್ಯಾಂಪ್ ಸೃಷ್ಟಿಸಬಹುದು.ಈ ಸೇವೆಯು ದೇಶದಾದ್ಯಂತ ೨೪೦೭ ಲಭ್ಯ. ಇನ್ನು ಒಂದು ಉದ್ದೇಶಕ್ಕಾಗಿ ಖರೀದಿಸಿ ಇನ್ನೊಂದು ಉದ್ದೇಶಕ್ಕೆ ಬಳಸುತ್ತಿದ್ದ ನಕಲಿ ಸ್ಟಾಂಪ್‌ಗಳಿಗೆ ಸರ್ಕಾರ ಸಧ್ಯ ಡಿಜಿಟಲ್ ಇ-ಸ್ಟೈಆಂಪ್ ಮೂಲಕ ಬ್ರೇಕ್ ಹಾಕಲಿದೆ. ಈ ತರಬೇತಿಯಲ್ಲಿ ಉಪನೋಂದಣಿಯ ಪ್ರಥಮ ದರ್ಜೆ ಸಹಾಯಕ ಎಚ್.ಡಿ. ಮರಿಸ್ವಾಮಿ, ಸಿಬ್ಬಂದಿಗಳಾದ ಆರ್.ಎಂ. ಜೋಶಿ, ಸಿ.ಎಂ. ಬಳಕೋಡ, ಸಿದ್ದು ನಾಡಗೇರ, ಅರುಣ್ ಬೊಮ್ಮಣಗಿ, ಮಹಾಂತೇಶ ಕಂಪ್ಲಿ, ಚಂದ್ರಕಲಾ ಮುಕ್ತಪೂರ ಸೇರದಂತೆ ಹುನಗುಂದ ಇಳಕಲ್ಲದ ಬಾಂಡ್ ರೈಟರ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


 ಡಿಜಿಟಲ್ ಇ-ಸ್ಟ್ಯಾಂಪ್ ವಿರುದ್ಧ ಸಾರ್ವಜನಿಕರ ವಿರೋಧ ಮತ್ತು ಆಕ್ರೋಶ–
ಸರ್ಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮೊದಲಿದ್ದ ಇ-ಸ್ಟ್ಯಾಂಪ ವ್ಯವಸ್ಥೆಯನ್ನು ತೆಗೆದು ಸದ್ಯ ಜಾರಿಗೊಳಿಸುತ್ತಿರುವ ಡಿಜಿಟಲ್ ಇ-ಸ್ಟ್ಯಾಂಪ್ ಓಟಿಪಿ ಸೇರಿದಂತೆ ಇನ್ನಿತರ ವ್ಯವಸೆಯಿಂದ ಅನಕ್ಷರಸ್ಥ ಮತ್ತು ಅದರ ಕುರಿತು ಮಾಹಿತಿ ಇಲ್ಲದ ಸಾರ್ವಜನಿಕರಿಗೆ ಹೊರೆಯಾಗಲಿದೆ. ಡಿಜಿಟಲ್ ಇ-ಸ್ಟ್ಯಾಂಪ್ ನಿಂದ ಅನೇಕ ಮಿಸ್ ಯೂಸ್ ಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಇ-ಸ್ಟ್ಯಾಂಪ್ ಮೂಲಕ ಬದುಕು ಕಟ್ಟಿಕೊಂಡ ಅದೆ? ಬಾಂಡ್ ರೈಟರಗಳ ಸಧ್ಯ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯ ಮೂಲಕ ಪೇಪರ ಲೆಸ್ ವ್ಯವಸ್ಥೆಯನ್ನು ತರಲು ಮುಂದಾಗುತ್ತಿದೆ ಎನ್ನುವ ಆತಂಕವಿದೆ. ಇದರಿಂದ ಇದ್ದ ಅಲ್ಪ ಸ್ವಲ್ಪ ಆದಾಯವೂ ಕೂಡಾ ಇಲ್ಲವಂತಾಗುತ್ತದೆ. ಬಾಂಡ್ ರೈಟರಗಳ ಕುಟುಂಬಗಳು ಬೀದಿಗೆ ಬರಲಿದೆ ಎಂದು ಸಭೆಯಲ್ಲಿ ಡಿಜಿಟಲ್ ವ್ಯವಸ್ಥೆಯ ವಿರೋಧಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು–


ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯಿಂದ ರೈತರಿಗೆ, ಜನಸಾಮಾನ್ಯರಿಗೆ, ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗಳು ದೂರವಾಗಲಿದೆ. ಸಾಮಾನ್ಯ ವ್ಯಕ್ತಿಯು ಮನೆಯಲ್ಲಿಯೇ ಕುಳಿತು ತನ್ನ ಮೊಬೈಲ್ ನಲ್ಲಿ ಲಾಗಿನ್ ಮಾಡಿಕೊಂಡು ಡಿಜಿಟಲ್ ಇ-ಸ್ಟ್ಯಾಂಪ್ ಪಡೆಯಬಹುದಾಗಿದೆ. ಇ-ಸ್ಟಾಂಪ್ ವ್ಯವಸ್ಥೆಯಲ್ಲಿದ್ದ ಕೆಲವೊಂದು ನ್ಯೂನ್ಯತೆಗಳನ್ನು ಹೋಗಲಾಡಿಸಲು ಈ ಡಿಜಿಟಲ್ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. ತರಬೇತಿಯಲ್ಲಿ ಸಾರ್ವಜನಿಕರಿಂದ ಬರುವ ಸಮಸ್ಯೆಗಳನ್ನು ಇಲಾಖೆಗೆ ತಿಳಿಸಲಾಗುವುದು. –ಎಸ್.ಡಿ.ನಾಗಠಾಣ ಮತ್ತು ಎಂ. ಉಮೇಶ, ಉಪ ನೋಂದನೆ ಅಧಿಕಾರಿಗಳು ಹುನಗುಂದ-ಇಳಕಲ್,

WhatsApp Group Join Now
Telegram Group Join Now
Share This Article