ಬೆಳಗಾವಿ ಜ., ೧೭- ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಬೆಳಗಾವಿಯ, ಶುಶ್ರೂಷಾ ಮಹಾವಿದ್ಯಾಲಯದಲ್ಲಿ ಜನವರಿ ೧೭ ೨೦೨೬ ರಂದು ೩೯ನೇ ಡಿಪ್ಲೋಮಾ ನರ್ಸಿಂಗ ಬ್ಯಾಚ್ ಮತ್ತು ೩೬ನೇ ಬಿ.ಎಸ್ಸಿ. ನರ್ಸಿಂಗ ಬ್ಯಾಚನ ಜ್ಯೋತಿ ಬೆಳಗುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಬೆಳಗಾವಿಯ, ಶುಶ್ರೂಷಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.(ಡಾ).ವಿರೇಶಕುಮಾರ ನಂದಗಾವ ಅವರು ಸರ್ವರನ್ನು ಸ್ವಾಗತಿಸಿ ಗಣ್ಯರನ್ನು ಪರಿಚಯಿಸಿದರು. ನಂತರ ಅತಿಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ, ಮಕ್ಕಳ ಶುಶ್ರೂಷಾ ಆರೋಗ್ಯ ವಿಭಾಗದ ಪ್ರಾಯೋಗಿಕ ದಾಖಲೆ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ, ನಿಲಿಮಾ ಸೋನವಾನೆ, ಸಹಾಯಕ ನಿರ್ದೇಶಕರು, ಸಾರ್ವಜನಿಕ ಆರೋಗ್ಯ ಇಲಾಖೆ, ಮಹಾರಾಷ್ಟ್ರ ಸರ್ಕಾರ, ಅವರು ಯುವ ನರ್ಸಿಂಗ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನರ್ಸಿಂಗ್ ವೃತ್ತಿಯು ತುಂಬಾ ಉದಾತ್ತ ವೃತ್ತಿಯಾಗಿದೆ; ಕೌಶಲ್ಯ ಮತ್ತು ಅನುಭವವು ನಿಮ್ಮನ್ನು ಪರಿಪೂರ್ಣರನ್ನಾಗಿ ಮಾಡುತ್ತದೆ, ಮತ್ತು ಆಸ್ಪತ್ರೆಯು ಒಂದು ದಯಾಳು ದೇವಾಲಯವಾಗಿದೆ ನಾವು ದೇವರ ಹೆಸರಿನಲ್ಲಿ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದ ಕಾರ್ಯವಾಹಿ ಕುಲಪತಿಗಳಾದ ಡಾ. ಎನ್.ಎಸ್.ಮಹಾಂತಶೆಟ್ಟಿ ಅವರು ಅಧ್ಯಕ್ಷೀಯ ನುಡಿಗಳಲ್ಲಿ ನರ್ಸಿಂಗ ವಿದ್ಯಾರ್ಥಿಗಳನ್ನು ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಅಭಿನಂದಿಸಿದರು ಮತ್ತು ಶುಶ್ರೂಷಕರಿಲ್ಲದೆ ಆಸ್ಪತ್ರೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲವೆಂದು ಅವರು ಉಲ್ಲೇಖಿಸಿದರು

ಬೆಳಗಾವಿಯ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ, ನರ್ಸಿಂಗ ಕಾಲೇಜಿನ ಡೀನ ಪ್ರೊ.(ಡಾ). ಸಂಗೀತಾ ಖರಡೆ ಮತ್ತು ಉಪಪ್ರಾಂಶುಪಾಲರಾದ ಪ್ರೊ.(ಡಾ).ಪ್ರೀತಿ ಭೂಪಾಲಿ, ಇವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋದಿಸಿದರು
ಈ ಕಾರ್ಯಕ್ರಮದಲ್ಲಿ ೧೦೬ ಬಿ.ಎಸ್ಸಿ. ನರ್ಸಿಂಗ ವಿದ್ಯಾರ್ಥಿಗಳು ಮತ್ತು ೧೦೦ ಡಿಪ್ಲೊಮಾ ನರ್ಸಿಂಗ ವಿದ್ಯಾರ್ಥಿಗಳು ಪ್ರಮಾಣ ವಚನವನ್ನು ಸ್ವೀಕರಿಸಿದರು.
ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ ಬೆಳಗಾವಿಯ, ಶುಶ್ರೂಷಾ ಮಹಾವಿದ್ಯಾಲಯದ ಸಹ-ಪ್ರಾಧ್ಯಾಪಕರಾದ ಡಾ. ಶ್ವೇತಾ ದಂಡಗಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯವಾಯಿತು.


