ರಾಷ್ಟ್ರೀಯ ಮಹಿಳಾ ಕಾರ್ಯದರ್ಶಿಯಾಗಿ ಬಿ.ಪದ್ಮಾವತಿ ಸುಭಾಷ್ ಆಚಾರ್ಯ ನೇಮಕ

Sandeep Malannavar
ರಾಷ್ಟ್ರೀಯ ಮಹಿಳಾ ಕಾರ್ಯದರ್ಶಿಯಾಗಿ ಬಿ.ಪದ್ಮಾವತಿ ಸುಭಾಷ್ ಆಚಾರ್ಯ ನೇಮಕ
WhatsApp Group Join Now
Telegram Group Join Now

ರಾಷ್ಟ್ರೀಯ ಮಹಿಳಾ ಕಾರ್ಯದರ್ಶಿಯಾಗಿ ಬಿ.ಪದ್ಮಾವತಿ ಸುಭಾಷ್ ಆಚಾರ್ಯ ನೇಮಕ

ಬಳ್ಳಾರಿ:17.. ಆಲ್ ಇಂಡಿಯಾ ವಿರಾಟ್ ವಿಶ್ವಕರ್ಮ ವುಮೆನ್ ಅಂಡ್ ಯೂಥ್ ಫೆಡರೇಷನ್ ನ ರಾರಾಷ್ಟ್ರೀಯ ಮಹಿಳಾ ಕಾರ್ಯದರ್ಶಿಯಾಗಿ ಬಳ್ಳಾರಿಯ ಬಿ.ಪದ್ಮಾವತಿ ಸುಭಾಷ್ ಆಚಾರ್ಯ ಅವರು ನೇಮಕಗೊಂಡಿದ್ದಾರೆ.

ಈ ಕುರಿತು ಫೆಡರೇಷನ್ ರಾಷ್ಟ್ರೀಯ ಅಧ್ಯಕ್ಷೆ ಡಾ.ಸುಮನ ಅವರು ನೇಮಕಾತಿ ಆದೇಶ ನೀಡಿದ್ದು, ಮೂರು ವರ್ಷದ ಅವಧಿಯಲ್ಲಿ ಫೆಡರೇಷನ್ ಆಶಯದಂತೆ ಸಮುದಾಯದ ಸಂಘಟನೆ, ಶಿಕ್ಷಣ, ಆರೋಗ್ಯ, ಔದ್ಯೋಗಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ಕಾರ್ಯದರ್ಶಿ ಬಿ.ಪದ್ಮಾವತಿ ಸುಭಾಷ್ ಆಚಾರ್ಯ ಅವರು ತಮ್ಮ ಈ ನೇಮಕಾತಿಗಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಎಐವಿಎಫ್ ಧಾರ್ಮಿಕ ಪರಿಷತ್ ನ ಅಧ್ಯಕ್ಷರಾದ ವೇದ ಬ್ರಹ್ಮರ್ಷಿ ಸ್ಥಪತಿ, ಜೋತಿಷ್ಯ ಶಾಸ್ತ್ರಜ್ಞರು, ಅಂತರಾಷ್ಟ್ರೀಯ ಧಾರ್ಮಿಕ ಪರಿಷತ್ ಅಧ್ಯಕ್ಷರು, ಸನಾತನ ಧರ್ಮ ಪ್ರಚಾರಕರು, ಕಾಲಜ್ಞಾನಿ ಪೋತುಲೋರಿ ವೀರಬ್ರಹ್ಮೇಂದ್ರ ಸ್ವಾಮಿಯ ಪ್ರಚಾರಕರೂ ಟಿ.ಮೋಹನ್ ರಾವ್ ಶರ್ಮಾ, ದೆಹಲಿಯ ಅಲ್  ಇಂಡಿಯಾ ವುಮೆನ್ ಅಂಡ್ ಯ್ಯೂತ್  ಫೆಡರೇಷನ್ ಫೌಂಡರ್ಸ್ ರಾಜೇಶ್ವರಿ, ವೇದ ಬ್ರಹ್ಮರ್ಷಿ ಜೈನ ಕುಮಾರ್ ವಿಶ್ವ ಕರ್ಮ, ಸಂಸ್ಥೆಯ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ಮತಿ ಸುಮನ್ ಶ್ರೀನಿವಾಸನ್, ಚಿನ್ನಯ್ಯ ಆಚಾರ್ಯ ಜಗದೀಶನ್, ರಾಷ್ಟ್ರೀಯ ಗೌರವಾಧ್ಯಕ್ಷರು, ರಾಷ್ಟ್ರೀಯ ಜನರಲ್  ವಿಂಗ್ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಧ್ಯಕ್ಷೆ ಸುನಿತಾ, ಕರ್ನಾಟಕ ಕಾರ್ಯ್ಯದರ್ಶಿ ಮಹೇಶ್ವರಿ, ತೆಲಂಗಾಣ ಅಮರ ವೀರುಡು, ಮಲಿದಶವೀರುಡು, ತೆಲಂಗಾಣ ರಾಜ್ಯಕ್ಕಾಗಿ ಹೋರಾಡಿದ್ದ ಕಾಸೋಜ ಶ್ರೀ ಕಾಂತ್ ಆಚಾರ್ಯ ಅವರ ತಾಯಿ, ತೆಲಂಗಾಣ ಮಹಿಳಾ ಅಧ್ಯಕ್ಷೆ ಶಂಕ್ರಮ್ಮ, ಸೇರಿದಂತೆ ವಿಶ್ವ ಬ್ರಾಹ್ಮಣ ಸಮಾಜದ ಗುರು ಹಿರಿಯರು, ಧುರೀಣರು ಮತ್ತು ಎಲ್ಲ ಹಿತೈಷಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ಎಲ್ಲರ ಮಾರ್ಗದರ್ಶನದಲ್ಲಿ ಸಮುದಾಯದ ಸಂಘಟನೆಗೆ ಶ್ರಮಿಸುವುದಾಗಿ ಬಿ.ಪದ್ಮಾವತಿ ಸುಭಾಷ್ ಆಚಾರ್ಯ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article