ಮಹಾಲಿಂಗಪುರ ತಾಲೂಕು ಹೋರಾಟ ವೇದಿಕೆಗೆ ಭಾಜಪ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ.
ಮಹಾಲಿಂಗಪುರ: ೧೩೭೮ ದಿನಗಳಿಂದ ನಡೆಯುತ್ತಿರುವ ಮಹಾಲಿಂಗಪುರ ತಾಲೂಕಾ ಹೋರಾಟ ಅತಿ ದೀರ್ಘಕಾಲದ ಮತ್ತು ಆಶ್ಚರ್ಯದಾಯಕ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು.
ಶುಕ್ರವಾರ ಮಧ್ಯಾಹ್ನ ಸ್ಥಳೀಯ ತಾಲೂಕು ಹೋರಾಟ ವೇದಿಕೆಗೆ ಭೇಟಿ ನೀಡಿದ ಅವರು ಹೋರಾಟಗಾರರ ಮನವಿಯನ್ನು ಸ್ವೀಕರಿಸಿ, ಮಹಾಲಿಂಗಪುರ ಇಡೀ ರಾಜ್ಯದ ಜನರಿಗೆ ಚಿರಪರಿಚಿತವಾಗಿದ್ದು ನಾನು ಸಹ ಮಹಾಲಿಂಗಪುರದ ಹೆಸರನ್ನು ಸಾಕ? ಬಾರಿ ಕೇಳಿದ್ದೇನೆ ಅದು ಅಲ್ಲದೆ ಒಂದೂವರೆ ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯುಳ್ಳ ಮಹಾಲಿಂಗಪುರ ಪಟ್ಟಣ ಸರ್ವ ರೀತಿಯಲ್ಲೂ ತಾಲೂಕು ಘೋ?ಣೆಗೆ ಯೋಗ್ಯವಾಗಿದ್ದು ಸರ್ಕಾರ ಹೋರಾಟಗಾರರ ಮನವಿಗೆ ಇದುವರೆಗೂ ಸ್ಪಂದಿಸದಿರುವುದು ವಿ?ದನೀಯ ಆದ್ದರಿಂದ ನಾನು ಸದರಿ ವಿ?ಯವನ್ನು ಸದನದಲ್ಲಿ ಮಂಡಿಸುತ್ತೇನೆ ಮತ್ತು ಕಂದಾಯ ಸಚಿವ ಕೃ?ಭೈರೇಗೌಡ ಅವರಿಗೂ ತಾಲೂಕು ಘೋ?ಣೆಯ ಅನಿವಾರ್ಯತೆ ಬಗ್ಗೆ ವಿವರವಾಗಿ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಮುಖಂಡರಾದ ಗಂಗಾಧರ ಮೇಟಿ,ಧರೆಪ್ಪ ಸಾಂಗ್ಲೀಕರ, ರಂಗನಗೌಡ ಪಾಟೀಲ, ಸುಭಾಸಗೌಡ ಪಾಟೀಲ, ವಿದ್ಯಾದರ ಸವದಿ,ಅರ್ಜುನ ಹಲಗಿಗೌಡರ, ಸುಭಾಸ ಶಿರಬೂರ, ನಿಂಗಪ್ಪ ಬಾಳಿಕಾಯಿ, ಶಿವಲಿಂಗ ಟಿರ್ಕಿ, ಮಹಾದೇವ ಮರಾಪುರ, ಮಾರುತಿ ಕರೋಶಿ, ಸಿದ್ದಪ್ಪ ಶಿರೋಳ, ಹಣಮಂತ ಜಮಾದಾರ, ಶಿವಾನಂದ ಅಂಗಡಿ,ಡಿ.ಬಿ.ನಾಗನೂರ, ಮಹಾಲಿಂಗಪ್ಪ ಅವರಾದಿ, ಅಣ್ಣಪ್ಪ ಕಾಮಗೌಡರ, ಈಶ್ವರ ಮುರಗೋಡ, ಪರಪ್ಪ ಬ್ಯಾಕೋಡ, ವಿನೋದ ಉಳ್ಳೆಗಡ್ಡಿ, ದುಂಡಪ್ಪ ಇಟ್ನಾಳ, ಪರಶು ಕೊಣ್ಣೂರ, ರಫೀಕ್ ಮಲದಾರ,ಕರೆಪ್ಪ ಮೇಟಿ, ರಾಜೇಂದ್ರ ಮಿರ್ಜಿ, ಭೀಮಶಿ ಸಸಲಾಟ್ಟಿ, ಬಸಪ್ಪ ಉಳ್ಳಾಗಡಿ, ಕಲೀಲ ಮುಲ್ಲಾ, ಲಕ್ಷ್ಮಣ ಕಿಲಾರಿ, ಚಿದಾನಂದ ಧರ್ಮಟ್ಟಿ, ಹನಮಂತ ರಡರಟ್ಟಿ, ಶರಣು ಹಡಪದ,ಅಲ್ಲಪ್ಪ ದಡ್ಡಿಮನಿ, ಚಿದಾನಂದ ಚಿಂದಿ, ರಾಜು ತೇರದಾಳ, ದುಂಡಪ್ಪ ಚನ್ನಾಳ, ಚನ್ನು ದೇಸಾಯಿ,ಬಂದು ಪಕಾಲಿ, ಮಲ್ಲಪ್ಪ ಸಂಗಣ್ಣವರ ಸೇರಿದಂತೆ ಇತರರಿದ್ದರು.


