ರೂಪಕ ಸ್ಪರ್ಧೆ : ಶ್ರೀ ಗುರುಸಾರ್ವಭೌಮ ಭಜನಾ ಮಂಡಳಕ್ಕೆ ಪ್ರಥಮ ಬಹುಮಾನ

Hasiru Kranti
ರೂಪಕ ಸ್ಪರ್ಧೆ : ಶ್ರೀ ಗುರುಸಾರ್ವಭೌಮ ಭಜನಾ ಮಂಡಳಕ್ಕೆ ಪ್ರಥಮ ಬಹುಮಾನ
WhatsApp Group Join Now
Telegram Group Join Now

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು : ಪ್ರೊ. ಜಿ. ಕೆ. ಕುಲಕರ್ಣಿ

ಬೆಳಗಾವಿ ೧೩ – ಶ್ರೀನಿವಾಸ ಭಜನಾ ಮಂಡಳ ಮತ್ತು ವಿಶ್ವಮಧ್ವ ಮಹಾಪರಿಷತ್ತ ಸಂಯುಕ್ತ ಆಶ್ರಯದಲ್ಲಿ ದಾಸವರೇಣ್ಯ ಪುರಂದರದಾಸ ಪುಣ್ಯನಿಥಿ ನಿಮಿತ್ತ ಎಂಟು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ದಿ. ೧೨ ರಂದು ಚೆನ್ನಮ್ಮ ನಗರದ ಶ್ರೀ ಸತ್ಯಪ್ರಮೋದ ಸಭಾಗೃದಲ್ಲಿ ರೂಪಕ ಸ್ಪರ್ಧೆ ಜರುಗಿತು .

ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ್ದ ರಂಗಕರ್ಮಿ ಶಿರೀಷ ಜೋಶಿ ಮಾತನಾಡಿ ಸ್ಪರ್ದೆಗಳು ನಮಗೆ ಹಲವಾರು ವಿಷಯಗಳನ್ನು ನಮಗೆ ಕಲಿಸಿಕೊಡುತ್ತವೆ. ಆದ್ದರಿಂದ ನಿರ್ಣಾಯಕನಾಗಿ ಪಾಲ್ಗೊಳ್ಳಲು ನನಗೆ ತುಂಬ ಖುಷಿ ಎಂದು ಹೇಳಿ ಕಲಾವಿದರಿಗೆ ವಸ್ತ್ರ ವಿನ್ಯಾಸ, ಅಭಿನಯ ಕುರಿತಾದ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದರು.

ಸ್ಪರ್ಧೆಯ ಸಂಯೋಜಕರಾದ ಪ್ರೊ. ಜಿ. ಕೆ. ಕುಲಕರ್ಣಿಯವರು ಮಾತನಾಡಿ ಯಾಂತ್ರಿಕ ಜೀವನ ನಡೆಸುತ್ತಿರುವ ಮಹಿಳೆಯರಲ್ಲಿರುವ ಕಲೆ, ಪ್ರತಿಭೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಭಜನಾ ಮಂಡಳಗಳು ಈ ಸ್ಪರ್ಧಯಲ್ಲಿ ಪಾಲ್ಗೊಳ್ಳದೇ ಇದ್ದುದು ಮನಸ್ಸಿಗೆ ಬೇಸರವನ್ನುಂಟು ಮಾಡಿತು ಎಂದು ಹೇಳಿದರು.

ಪ್ರಥಮ ಬಹುಮಾನ ಪಡೆದ ಗುರುಪ್ರಸಾದ ನಗರದವ ಶ್ರೀ ಗುರುಸಾರ್ವಭೌಮ ಭಜನಾ ಮಂಡಳದವರು ಕಪಟ ಸನ್ಯಾಸಿ. (ಸುಭದ್ರಾ ಕಲ್ಯಾಣ) ರೂಪಕವನ್ನಾಡಿದರು.ವಿದ್ಯಾ ಕೇಸ್ತಿಕರ (ಕೃಷ್ಣ), ವತ್ಸಲಾ ಭಟ್ (ರುಕ್ಮಿಣಿ), ಸರಸ್ವತಿ ಕುಲಕರ್ಣಿ (ಸತ್ಯಭಾಮಾ), ಗೀತಾಕುಲಕರ್ಣಿ (ವಾಸುದೇವ), ಶಾರದಾ(ದೇವಕಿ), ಅರುಣಾ ಕುಲಕರ್ಣಿ (ಪಾರ್ಥ), ಸುಮೇಧಾ (ಸುಭದ್ರಾ), ಪ್ರೀತಿ ಕುಲಕರ್ಣಿ (ಬಲರಾಮ), ಮೇಧಾ ಕರಜಗಿ (ನಾರದ), ಖುಷಿ ಕುಲಕರ್ಣಿ(ಗೋಪಾಲಕ) ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡರು. ಈ ರೂಪಕದ ರಚನೆ, ನಿರೂಪಣೆ ಮತ್ತು ನಿರ್ದೇಶನ ವಿಜಯಲಕ್ಷ್ಮಿ ವೆಂ ಕುಲಕರ್ಣಿಯವರದಾಗಿತ್ತು

ದ್ವಿತೀಯ ಬಹುಮಾನ ಪಡೆದ ಹಿಂದವಾಡಿಯ ವೇಣುಗೋಪಾಲ ಭಜನಾ ಮಂಡಳದವರು ’ಕೃಷ್ಣ ಪಾರಿಜಾತ’ ರೂಪಕವನ್ನಾಡಿದರು. ಗೀತಾ ದೇಶಪಾಂಡೆ (ಕಷ್ಣ), ಕಲ್ಪನಾ ಕಾಕಡೆ(ಸತ್ಯಭಾಮಾ), ದೀಪ್ತಿ ಕುಲಕರ್ಣಿ(ರುಕ್ಮಿಣಿ), ರಾಧಾ ಗುಮಾಸ್ತೆ(ವಿಷ್ಣು), ಮಂದಾ ಗುಂಡೇನಟ್ಟಿ(ಲಕ್ಷ್ಮೀ), ಅಂಜನಾ ಕುಲಕರ್ಣಿ (ಪುಷ್ಫವಲ್ಲಿ), ಧನಲಕ್ಷ್ಮೀ ಪಾಟೀಲ(ನಾರದ), ಅಕ್ಷತಾ ಕುಲಕರ್ಣಿ(ದೇವೇಂದ್ರ). ರೂಪಕದ ರಚನೆ, ನಿರ್ದೇಶನ ಚಂದ್ರಿಕಾ ಕುಲಕರ್ಣಿಯವರದಾಗಿದ್ದು ತಬಲಾ ಸಾಥ ಆರ್ ಆರ್. ಕುಲಕರ್ಣಿ ಇವರದಾಗಿತ್ತು.

ತೃತೀಯ ಬಹುಮಾನವನ್ನು ಭಾಗ್ಯನಗರದ ಹರಿದಾಸ ಭಜನಾ ಮಂಡಳದವರಾಡಿದ ’ಸೀನಪ್ಪ ನಾಯಕರು’ ರೂಪಕ ಪಡೆದುಕೊಂಡಿತು. ಸೋನಾಕ್ಷಿ ಹಳ್ಳೆಪ್ಪನವರು(ಕೃಷ್ಣ), ಪ್ರತಿಭಾ ಹಳ್ಳೆಪ್ಪನವರ (ಪುರಂದರದಾಸರು), ಅಂಜನಾ ಸರದೇಶಪಾಂಡೆ (ಸರಸ್ವತಿಬಾಯಿ) ಅಲ್ಲದೇ ವಾಣಿ ಮೋಕಾಶಿ, ಅಲಕಾ ಕುಲಕರ್ಣಿ, ರೂಪಾ ದೇಶಪಾಂಡೆ, ಸುಚಿತ್ರಾ ಕುಲಕರ್ಣಿ, ವಿದ್ಯಾ ಕುಲಕರ್ಣಿ, ವಿದ್ಯಾ ದೇಶಪಾಂಡೆ, ವೀಣಾ ಗಲಗಲಿ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಚನೆ, ನಿರ್ದೇಶನ ಹಾಗೂ ನಿರೂಪಣೆ ಅಂಜನಾ ದೇಶಪಾಂಡೆಯವರದಾಗಿತ್ತು.

ಈ ಸ್ಪರ್ಧೆಯಲ್ಲಿ ಒಟ್ಟು ಐದು ಭಜನಾ ಮಂಡಳಗಳು ಭಾಗವಹಿಸಿದ್ದವು. ರಂಗ ಕಲಾವಿದರಾದ ಶಿರೀಷ ಜೋಶಿ, ಶ್ರೀಮತಿ ಪದ್ಮಾ ಕುಲಕರ್ಣಿ, ಶ್ರೀಮತಿ ಶಾಂತಾ ಆಚಾರ್ಯ ನಿರ್ಣಾಯಕರಾಗಿ ಆಗಮಿಸಿದ್ದರು.

WhatsApp Group Join Now
Telegram Group Join Now
Share This Article