ಬಳ್ಳಾರಿ. ಜ. 14: ನಗರದ ರಾಯಲ್ ಸರ್ಕಲ್ ನ ಗಡಿಯಾರ ಗೋಪುರದಲ್ಲಿ ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಸಿದ್ದರಾಮೇಶ್ವರ ಜಯಂತಿಯ ಮೆರವಣಿಗೆ ಸಂದರ್ಭದಲ್ಲಿ ಹಚ್ಚಿದ ಪಟಾಕಿಯ ಕಿಡಿ ಒಂದು ಗೋಪುರದ ರಕ್ಷಾ ಹೊದಿಕೆಗೆ (ಗ್ರೀನ್ ಮ್ಯಾಟ್ಗೆ) ತಗುಲಿ ಬೆಂಕಿ ಹತ್ತಿಕೊಂಡಿದೆ. ನಂತರ ಅದು ಗಡಿಯಾರ ಗೋಪುರದ ತುದಿಯವರೆಗೂ ಸಾಗಿ ತುದಿಯಲ್ಲಿದ್ದ ಗಡಿಯಾರ ಬೆಂಕಿಗೆ ಅಹುತಿಯಾಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿ ಬಾರಿ ಅವಘಡ ಒಂದನ್ನು ಪಾರು ಮಾಡಿದ್ದಾರೆ. ಯಾವುದೇ ಜೀವ ಹಾನಿಯಾಗಲಿ ಅನಾಹುತವಾಗಲಿ ನಡೆದಿಲ್ಲ ಎಂದು ತಿಳಿದುಬಂದಿದೆ.


