ಹುನಗುಂದ; ದುರ್ಗುಣ ದುರ್ಭಾವ ದುರ್ವಿಚಾರ ಅಳಿದರೆ ಮಾತ್ರ ಧರ್ಮ ಪ್ರಚಾರ ಸಾಧ್ಯ ಎಂದು ಧಾರವಾಡ ಸತ್ತೂರಿನ ಪೂಜ್ಯ ಅಬ್ದುಲ್ ರಜಾಕ್ ಖಾದ್ರಿ ತಿಳಿಸಿದರು.
ಕೂಡಲ ಸಂಗಮದ ಹೂವನೂರಿನಲ್ಲಿ ನಡೆಯುತ್ತಿರುವ ನಾಲ್ಕನೇ ಸ್ವಾಭಿಮಾನಿ ಶರಣಮೇಳದ ಸಮಾರೋಪ ಸಮಾರಂಭದಲ್ಲಿ ಗೋಡೆ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪೂಜ್ಯ ಚನ್ನಬಸವಾನಂದ ಸ್ವಾಮೀಜಿಯವರು ಹಲವಾಯ ಯೋಜನೆಗಳನ್ನು ಸಮಾಜಪರ, ಧರ್ಮಪರವಾಗಿ ಹಾಕಿಕೊಂಡಿದ್ದಾರೆ. ಅವರಿಗೆ ಸಹಕರಿಸುವುದು ಎಲ್ಲರ ಕರ್ತವ್ಯ ಎಂದುಕೊಂಡು ಭಾವಿಸಿ, ಧರ್ಮದ ಏಳ್ಗೆಗೆಗೆ ತನು ಮನ ಧನ ಸೇವೆಗೈಯಬೇಕು. ಕೆಂದು ತಿಳಿಸಿದರು̤
೪ನೇ ಸ್ವಾಭಿಮಾನಿ ಶರಣಮೇಳದಲ್ಲಿ ಕೈಗೊಂಡನಿರ್ಣಯಗಳು :-
*ಪ್ರತೀ ವರ್ಷ ಸ್ವಾಭಿಮಾನಿ ಶರಣ ಮೇಳ ಹಾಗೂ ಕಲ್ಯಾಣ ಪರ್ವ ಆಯೋಜಿಸುವುದು.
*ವರ್ಷಕ್ಕೆ ಒಮ್ಮೆ ಅಂತರಾಷ್ಟ್ರೀಯ ಮಟ್ಟದ ಬಸವ ತತ್ವ ಸಮ್ಮೇಳನ ವಿದೇಶದಲ್ಲಿ ಆಯೋಜಿಸುವುದು.
*ಎರಡು ತಿಂಗಳ ಒಳಗೆ ಮಾತೆ ಗಂಗಾದೇವಿ ಧರ್ಮಗ್ರಂಥ ಬಿಡುಗಡೆ ಮಾಡಬೇಕು. ಇಲ್ಲ ಗಂಗಾದೇವಿ ಸೇರಿದಂತೆ ಬಸವ ಧರ್ಮ ಪೀಠದ ಪೂಜ್ಯರು ಪೀಠತ್ಯಾಗ ಮಾಡಬೇಕು.
* ಲಿಂ. ಮಾತಾಜಿಯವರು ಬರೆದ ಮರಣ ಪತ್ರ ತಿರುಚಿದ್ದಕ್ಕೆ ಮಾತೆ ಗಂಗಾದೇವಿ ಭಕ್ತರ ಕ್ಷಮೆ ಯಾಚಿಸಬೇಕು̤
* ಕೇಂದ್ರ ಸರ್ಕಾರ ಕೂಡಲಸಂಗಮಕ್ಕೆ ನೇರ ರೈಲ್ವೆ ಸಂಪರ್ಕ ಕಲ್ಪಿಸಬೇಕು
* ಕೂಡಲಸಂಗಮವನ್ನು ಅಂತರಾಷ್ಟ್ರೀಯ ಕೇಂದ್ರವನ್ನಾಗಿ ಸರ್ಕಾರ ಅಭಿವೃದ್ಧಿ ಪಡಿಸಬೇಕು ಎಂದು ಬಸವ ಭಕ್ತರ ಸಮ್ಮುಖದಲ್ಲಿ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ನಿರ್ಣಯ ಮಂಡಿಸಿದರು.
ಭಕ್ತರು ಕರತಾಡನ ಮೂಲಕ ಒಪ್ಪಿಗೆ ಸೂಚಿಸಿದರು. ದಿವ್ಯ ಸಾನಿಧ್ಯ : ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ವಹಿಸಿದ್ದರು. ಸಮ್ಮುಖ: ಮಾತೆ ಸತ್ಯಾದೇವಿ ಬಸವ ಮಂಟಪ ಬೀದರ ಸಮ್ಮುಖ ವಹಿಸದ್ದರು. ಪೂಜ್ಯ ಶ್ರೀ ಪ್ರಭುಲಿಂಗ ಸ್ವಾಮೀಜಿ ಬ್ಯಾಲಹಳ್ಳಿ, ಪೂಜ್ಯ ಶ್ರೀ ಸದ್ಗುರು ಗುರು ಸ್ವಾಮಿಗಳು ಚಳ್ಳಕೆರೆ, ಪೂಜ್ಯ ಲಿಂಗಾರೂಢ ಸ್ವಾಮೀಜಿ ಹೂವನೂರು, ಹೈಕೋರ್ಟ್ ವಕೀಲರು ಬೀದರ ಅಶೋಕ ಮಾನೂರೆ ಲಿಂಗಾಯತ ಧರ್ಮ ಸಾರ ಬಿಡುಗಡೆ:ಗೊಳಿಸಿದರು. ಕುಮಾರಿ ತರಂಗಿಣಿ ವಚನ ನೃತ್ಯ ನಡೆಸಿದರು. ಕುಮಾರಿ ಪ್ರಾರ್ಥನಾ ಭರತ ನಾಟ್ಯ ನಡೆಸಿದರು.
ಶಿವರಾಜ ಪಾಟೀಲ ಅತಿವಾಳ, ರವಿಕಾಂತ ಬಿರಾದಾರ, ಭೀಮರಾವ ಬಿರಾದಾರ ಹೈದರಾಬಾದ, ಬಾಬುರಾವ ಟೆಂಗಸಾಲ, ಸಂಜಯ ಪಾಟೀಲ ಗೋಕಾಕ, ಸಂಗಣ್ಣ ಬ್ಯಾಕೋಡ, ಜಗದೇವಿ ಸಂಗಣ್ಣ ಚೆಟ್ಟಿ, ಶಿವಶರಣಪ್ಪ ಪಾಟೀಲ ಬೀದರ, ಮಲ್ಲಿಕಾರ್ಜುನ ಜೈಲರ್ ಇದ್ದರು.
ಭಾಕ್ಸ್; ವಿಶ್ವದ ಎಲ್ಲ ಧರ್ಮಗಳು ಎಲ್ಲ ಕ್ಷೇತ್ರಕ್ಕೂ ಒಳಿತನ್ನೆ ಬಯಸುವ ಉದ್ದೇಶವಾಗಿರುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ಶರಣರ ಸಂತರ ತತ್ವಾದರ್ಶಗಳನ್ನು ರೂಢಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಡೆದರೆ ಎಲ್ಲವೂ ಒಳಿತಾಗುತ್ತದೆ. ಧರ್ಮ ಮತ್ತು ಸಮಾಜಮುಖಿಯಾಗಿ, ನಡೆದಾಡುವ ಪ್ರಾಮಾಣಿಕ ಹಾಗೂ ನಿಷ್ಟೆಯಿಂದ ಶ್ರಮಿಸುವ ಸ್ವಾಮಿಗಳಿಂದ ಭಕ್ತರಿಗೆ ಯಾವಾಗಲೂ ಒಳ್ಳೆಯದೆ ಆಗುತ್ತದೆ. ಈ ಕುರಿತು ಬಸವ ತತ್ವದ ಹಾದಿಯನ್ನು ಮೈಗೂಡಿಸಿಕೊಂಡು ರಾಜ್ಯ ಮತ್ತು ಬೇರೆ ರಾಜ್ಯಗಳಲ್ಲಿ ಬಸವ ಭಕ್ತರನ್ನು ನಿರ್ಮಾಣ ಮಾಡಿದ ಡಾ. ಚನ್ನಬಸವಾನಂದ ಸ್ವಾಮಿಗಳ ಶ್ರಮ ಮೆಚ್ಚುವಂತದ್ದು. ಭಕ್ತರನ್ನೆ ಆಸ್ತಿಯನ್ನಾಗಿಸಿಕೊಂಡು ಇಷ್ಟೆಲ್ಲ ಯಶಸ್ವಿ ಕಾರ್ಯಗಳನ್ನು ಮಡುತ್ತಿರುವದು ನಿಜವಾಗಿಯೂ ಹೆಮ್ಮೆಯ ವಿಷಯ. ಪೂಜ್ಯ ಅಬ್ದುಲ್ ರಜಾಕ್ ಖಾದ್ರಿ. ಸೂಫಿ ಗುರುಗಳು ಧಾರವಾಡ ಸತ್ತೂರ.
ಸಮೀಪದ ಐತಿಹಾಸಿಕ ಸ್ಥಳ ಕೂಡಲಸಂಗಮ ಕ್ರಾಸ್ ಹತ್ತಿರದ ಹೂವನೂರ ಗ್ರಾಮದಲ್ಲಿ ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ, ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಲಿಂಗಾಯತ ಧರ್ಮ ಮಹಾಸಭಾ ಸಹಯೋಗದಲ್ಲಿ ಸ್ವಾಭಿಮಾನಿ ಶರಣ ಮೇಳ ೨೦೨೬ರ ಜನೇವರಿ ೧೪ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಧರ್ಮ ಮತ್ತು ಸಮಾಜಮುಖಿಯಾಗಿ, ನಡೆದಾಡುವ ಪ್ರಾಮಾಣಿಕ ಹಾಗೂ ನಿಷ್ಟೆಯಿಂದ ಶ್ರಮಿಸುವ ಸ್ವಾಮಿಗಳಿಂದ ಭಕ್ತರಿಗೆ ಯಾವಾಗಲೂ ಒಳ್ಳೆಯದೆ ಆಗುತ್ತದೆ. ಈ ಕುರಿತು ಬಸವ ತತ್ವದ ಹಾದಿಯನ್ನು ಮೈಗೂಡಿಸಿಕೊಂಡು ರಾಜ್ಯ ಮತ್ತು ಬೇರೆ ರಾಜ್ಯಗಳಲ್ಲಿ ಬಸವ ಭಕ್ತರನ್ನು ನಿರ್ಮಾಣ ಮಾಡಿದ ಡಾ. ಚನ್ನಬಸವಾನಂದ ಸ್ವಾಮಿಗಳ ಶ್ರಮ ಮೆಚ್ಚುವಂತದ್ದು. ಭಕ್ತರನ್ನೆ ಆಸ್ತಿಯನ್ನಾಗಿಸಿಕೊಂಡು ಇಷ್ಟೆಲ್ಲ ಯಶಸ್ವಿ ಕಾರ್ಯಗಳನ್ನು ಮಡುತ್ತಿರುವದು ನಿಜವಾಗಿಯೂ ಹೆಮ್ಮೆಯ ವಿಷಯ ಎಂದರು.


