ಮಹಾಲಿಂಗಪುರ : ಒಟ್ಟು ೩೯ ತಿಂಗಳ ಅವಧಿಯ ಪಟ್ಟಣದ ಅರ್ಬನ್ ಬ್ಯಾಂಕ್ ಗೆ ೨೦ ತಿಂಗಳು ಆಡಳಿತ ನಡೆಸಲು ಅಧ್ಯಕ್ಷರಾಗಿ ಶ್ರೀಶೈಲಪ್ಪ ಹಿಪ್ಪರಗಿ ಮತ್ತು ಉಪಾಧ್ಯಕ್ಷರಾಗಿ ಫಕ್ರುದ್ದೀನ್ ಕುಂಟೋಜಿ ಬುಧವಾರ ದಿವಸ ಅವಿರೋಧವಾಗಿ ಆಯ್ಕೆಯಾಗಿರುವ ಪ್ರಯುಕ್ತ ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಸಹಕರಿಸಿದ ?ರುದಾರರು, ಹಿರಿಯರು ಮತ್ತು ಬ್ಯಾಂಕಿನ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಶ್ರೀಶೈಲಪ್ಪ ಹಿಪ್ಪರಗಿ ನೂತನವಾಗಿ ಅಧ್ಯಕ್ಷ ಸ್ಥಾನ ಅಲಂಕರಿಸಿ ಮಾತನಾಡಿದ ಅವರು, ಯಾವುದೇ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಎಲ್ಲರ ಸಹಕಾರ ಅಗತ್ಯ. ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಒಂದು ಕಾಲದಲ್ಲಿ ನೆಲಕಚ್ಚಿ, ಮುಚ್ಚಿ ಹೋಗಬೇಕಾಗಿದ್ದ ಹಣಕಾಸು ಸಂಸ್ಥೆ,ಇದಕ್ಕೆ ಹಿಂದಿನ ಅನೇಕ ಸದಸ್ಯರು ನಿರಂತರ ಶ್ರಮ ವಹಿಸಿ ಬೆಳೆಸಿರುವ ಕಾರಣ ಸಂಸ್ಥೆಗೆ ಐದು ಪ್ರಶಸ್ತಿಗಳು ಲಭ್ಯವಾಗಿವೆ.
ಈ ಹಿಂದಿನ ನಿಕಟ ಪೂರ್ವ ಅಧ್ಯಕ್ಷ ಶೇಖರ ಅಂಗಡಿ ಆಡಳಿತದಲ್ಲಿ ಬ್ಯಾಂಕಿಗೆ ೫೧ ಲಕ್ಷ ರೂಗಳ ಲಾಭವಾಗಿರುವುದು ಬ್ಯಾಂಕ್ ಇತಿಹಾಸ ಎಂದು ಶ್ಲಾಘನೆ ವ್ಯಕ್ತಪಡಿಸಿ, ಮುಂದೆಯೂ ಬ್ಯಾಂಕ್ ಅಭಿವೃದ್ಧಿ ಹೊಂದಬೇಕಾದರೆ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶೇರುದಾರರು ಹಾಗೂ ಡಿಪಾಸಿಟ್ ದಾರರು ಕೈ ಜೋಡಿಸಬೇಕೆಂದು ಅವರಲ್ಲಿ ಮನವಿ ಮಾಡಿದರು.
ನೂತನ ಉಪಾಧ್ಯಕ್ಷ ಫಕ್ರುದ್ದೀನ್ ಕುಂಟೋಜಿ ಮಾತನಾಡಿ, ಎರಡು ದಶಕಗಳಿಂದ ಬ್ಯಾಂಕ್ ಅಭಿವೃದ್ಧಿಗೆ ಪದಾಧಿಕಾರಿಗಳು, ಸದಸ್ಯರು ಮತ್ತು ಸಿಬ್ಬಂದಿಗಳು ಬ್ಯಾಂಕ್ ಉನ್ನತಿಗೆ ಶ್ರಮಿಸುತ್ತ ಬಂದಿದ್ದು, ಮುಂದೆಯೂ ಶೃಧ್ಧೆ ಭಕ್ತಿಯಿಂದ ಕಾರ್ಯ ನಿರ್ವಹಿಸುತ್ತ ಬ್ಯಾಂಕ್ ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ ಎಂದರು.
ಜಿಲ್ಲಾ ಪಂಚಮಸಾಲಿ ಸಂಘದ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ, ಮಾಜಿ ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಹಾದೇವ ಮಾರಾಪೂರ ಮಾತನಾಡಿ, ಪೈಪೋಟಿ ಜಮಾನಾದಲ್ಲಿ ಸ್ಥಳೀಯ ಬ್ಯಾಂಕ್ ಗಳೇ ಅಭಿವೃದ್ಧಿ ಹೊಂದುವಂತೆ ಎಲ್ಲರೂ ಸಂಕಲ್ಪ ಮಾಡಬೇಕು.ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಠೇವಣಿ ಮಾಡುವುದರಿಂದ ಸ್ಥಳೀಯರಿಗೆ ಯಾವುದೇ ರೀತಿಯ ಲಾಭವಾಗುವುದಿಲ್ಲ.ಆದ್ದರಿಂದ ಸ್ಥಳೀಯ ಬ್ಯಾಂಕ್ ಗಳಲ್ಲಿಯೇ ಠೇವಣಿ ಮಾಡಿ ಲಾಭ ಮತ್ತು ಪ್ರಯೋಜನ ಪಡೆಯಬೇಕೆಂದು ಪಟ್ಟಣದ ಜನತೆಗೆ ಕಿವಿ ಮಾತು ಹೇಳಿದರು.
ಬುಧವಾರ ಮುಂಜಾನೆ ೧೧ ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಯಾರೂ ಪೈಪೋಟಿ ಮಾಡದ ಕಾರಣ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಚುನಾವಣಾಧಿಕಾರಿ ಎಸ್. ಎಂ. ಗುಣದಾಳ ಅವಿರೋಧ ಘೋ?ಣೆ ಮಾಡಿದರು. ನಿಕಟಪೂರ್ವ ಅಧ್ಯಕ್ಷ ಶೇಖರ ಅಂಗಡಿ ಮತ್ತು ಉಪಾಧ್ಯಕ್ಷ ಗಿರೆಪ್ಪ ಕಬಾಡಿ,ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು, ಹಿತೈಷಿಗಳು ಮತ್ತು ಹಿಪ್ಪರಗಿ ಪರಿವಾರದವರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಕೋರಿ ಶಾಲು ಹೊದಿಸಿ ಗೌರವಿಸಿದರು.ಹಿರಿಯರ ಒಡಂಬಡಿಕೆಯಂತೆ ಒಟ್ಟು ೬೦ ತಿಂಗಳ ಅವಧಿಯಲ್ಲಿ ನಿಕಟಪೂರ್ವ ಅಧ್ಯಕ್ಷ ಶೇಖರ ಅಂಗಡಿ ೨೦, ಪ್ರಸ್ತುತ ೨೦ ತಿಂಗಳು ಮತ್ತು ಮುಂದೆ ೨೦ ತಿಂಗಳ ಅವಧಿಗಾಗಿ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಇನ್ನುಳಿದ ನಿರ್ದೇಶಕರಾದ ವೀರಪಾಕ್ಷಯ್ಯ ಪಂಚಕಟ್ಟಿಮಠ, ಅಶೋಕ.ಜ.ಅಂಗಡಿ, ಹೊಳೆಯನ್ನು ಬಾಡಗಿ, ಅಕ್ಷತಾ ಹಲಗತ್ತಿ, ಲಕ್ಷ್ಮಿ ದಿನ್ನಿಮನಿ, ವೃತ್ತಿಪರ ನಿರ್ದೇಶಕ ಪುಂಡಲೀಕ ಜನಗೊಂಡ ಮತ್ತು ಸಿಬ್ಬಂದಿಗಳಾದ ಮಹಾಲಿಂಗಪ್ಪ ಗುಜ್ಜರ, ಎಸ್.ಆರ್.ಹಿಕಡಿ, ಸುನೀತಾ ಹುಬ್ಬಳ್ಳಿ,ಸಲಿಂ ವಾಲಿಕಾರ, ರಾಜು ಕಾಗಿ, ಮಕ್ತುಮ ದಂಡಿನ ಹಾಗೂ ಷೇರುದಾರರು ಇದ್ದರು. ಆಯ್. ಎಸ್.ಮಠದ ಸ್ವಾಗತಿಸಿ, ಬ್ಯಾಂಕ್ ವ್ಯವಸ್ಥಾಪಕ ಎಸ್.ಎಂ.ಗುಣದಾಳ ನಿರೂಪಿಸಿ, ಸದಸ್ಯ ಗುರುಪಾದಪ್ಪ ಅಂಬಿ ವಂದಿಸಿದರು.
ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಗೆ ಅಧ್ಯಕ್ಷ ,ಉಪಾಧ್ಯಕ್ಷರ ಅವಿರೋಧ ಆಯ್ಕೆ


