ಹೌದು ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಪಡೆದ ಕುಂದಾನಗರಿ ಕುಂದಣಗಿತ್ತಿ ನಗರದಲ್ಲಿ ಈಗಾಗಲೇ ಹೊಸ ಕಟ್ಟಡವು ನಗರ ಬಸ್ಸು ನಿಲ್ದಾಣದಿಂದ ಮುಕ್ತ ಸಂಚಾರಕ್ಕೆ ಅಣಿಯಾಗಿ ಹಲವಾರು ದಿನಗಳು ಗತಿಸಿರುತ್ತದೆ. ತುಂಬಾ ಸುಂದರವಾಗಿ ನಿರ್ಮಿತಗೊಂಡ ಬಸ್ಸ್ ನಿಲ್ದಾಣದಿಂದ ಪ್ರಯಾಣಿಕರು ಹಲವಾರು ತೊಂದರೆ ಅನುಭವಿಸುತ್ತಿರುವುದು ಅಷ್ಟೇ ಸತ್ಯ ಹಿಂದೆ ಮುಂದೆ ಬೈಯುತ್ತಾ ಸಂಕಟ..ಸಂಕೋಲೆ ಅನುಭವಿಸುತ್ತಾ ನಿಷ್ಠಾವಂತರಂತೆ ಪ್ರಯಾಣ ..ಪ್ರಯಾಸವನೆಲ್ಲ ಅನುಭವಿಸುತ್ತಿದ್ದಾರೆ.
ಕೇಂದ್ರ ಬಸ್ಸ್ ನಿಲ್ದಾಣಕ್ಕೂ ನಗರ ಬಸ್ಸು ನಿಲ್ದಾಣಕ್ಕೂ ಕಣ್ಣಿಗೆ ಕಾಣಲು ಕೇವಲ ಹತ್ತೇ ಹತ್ತು ನಿಮಿಷದ ಕಾಲು ನಡಿಗೆಯ ದಾರಿ ಇರುತ್ತದೆ. ನಡೆದಷ್ಟು ನಡೆದಷ್ಟು ಮನಸು ಕಾಲು ಬಾರ. ಕೈಯಲ್ಲಿ ಐದು ಕೇಜಿ ಲಗೇಜ್ ಬ್ಯಾಗ್ ಇದ್ದರಂತೂ ಸುಸ್ತೋ..ಸುಸ್ತು ಅನುಭವಿಸುವ ಹೀನಾಯ ಸ್ಥಿತಿ ಎದುರಾಗಿದೆ. ಹಿರಿಯ ನಾಗರಿಗರಿಗಂತೂ ಇದು ಹೇಳತೀರದ ಸಮಸ್ಯೆಯಾಗಿದೆ.
ನಗರ ಬಸ್ಸು ನಿಲ್ದಾಣದಿಂದ ಕೇಂದ್ರ ಬಸ್ಸ್ ನಿಲ್ದಾಣಕ್ಕೆ ರಿಕ್ಷಾ ಮಾಡಿಕೊಂಡು ಹೋಗಲು ಕೇಳಿದರೆ ಮೀಟರ್ ಹಾಕೋಲ್ಲರು ರೂಪಾಯಿ ಅರವತ್ತು , ಐವತ್ತು ಎಂದು ಬಾಯಿಗೆ ಬಂದಂತೆ ಹೇಳಿ ಹಣ ಕೇಳುವರು.
*ಅರ್ಧ ರಾತ್ರಿ ಸಮಯದಲ್ಲಿ ಕೇಂದ್ರ ಬಸ್ಸು ನಿಲ್ದಾಣಕ್ಕೆ ಬಂದು ಇಳಿದು ಮುಂಜಾನೆ ನಗರ ಬಸ್ಸ ಸಂಚಾರ ಆರಂಭದ ದಾರಿ ಕಾಯುತ್ತಾ ಎಲ್ಲಿ ತಂಗಬೇಕು ? ಒಂದೊಂದು ಏರಿಯಾಕ್ಕೆ ಆರು ಗಂಟೆ ,ಏಳು ಗಂಟೆಗೆ, ನಗರ ಬಸ್ಸು ಪ್ರಾರಂಭ ಮಾಡಲಾಗುತ್ತದೆ. ಒಮ್ಮೆ ನಾನೇ ಡಿಸೆಂಬರ್ ತಿಂಗಳ 30 ರಂದು ಬೆಂಗಳೂರಿನಿಂದ ಕೇಂದ್ರ ಬಸ್ಸು ನಿಲ್ದಾಣ ಬೆಳಗಾವಿಗೆ ನಾಲ್ಕು ನಲವತ್ತೈದರ ಸಮಯಕ್ಕೆ ಬಂದು ಇಳಿದೆನು ನಗರ ಬಸ್ಸು ಅರುಗಂಟೆ, ಆರೂವರೆಗೆ ಗಂಟೆಗೆ ಆರಂಭ ಆಗುತ್ತದೆ ಎಂಬುದು ಗೊತ್ತಿದ್ದ ವಿಚಾರ ಆಗಿತ್ತು . ಕೇಂದ್ರ ಬಸ್ಸು ನಿಲ್ದಾಣದಿಂದ ದಾರಿದೀಪದ ಆಸರೆಯಲ್ಲಿ ನಡೆದುಕೊಂಡು ನಗರ ಬಸ್ಸು ನಿಲ್ದಾಣಕ್ಕೆ ಬಂದರೆ ನಗರ ಬಸ್ಸು ನಿಲ್ದಾಣದ ಗೇಟ್ ಆರೂವರೆ ಗಂಟೆ ಆದರೂ ತೆಗೆದಿಲ್ಲ ಹೊರಗಡೆಯೇ ನಿಂತುಕೊಂಡೆ .ಒಂದು ವಿಧದಲ್ಲಿ ಹೇಳಿದರೆ ಇದು ರಾತ್ರಿ ಸಮಯ ಎನ್ನಬಹುದು. ಮೊದಲೇ ನಗರ ಬಸ್ಸು ನಿಲ್ದಾಣದ ಪರಿಸ್ಥಿತಿ ಹೀಗಿದೆ ಎಂಬುದು ಗೊತ್ತಿದ್ದರೆ ಕೇಂದ್ರ ಬಸ್ಸು ನಿಲ್ದಾಣದಲ್ಲಿಯೇ ತಂಗ ಬಹುದಿತ್ತು. ಪ್ರಥಮವಾಗಿ ಈ ಅನುಭವ ನನ್ನಂತೆ ಇನ್ನೂ ಹಲವರಿಗೆ ಆಗಲೂ ಬಹುದು ಆಗುತ್ತಲೂ ಇರಬಹುದು. ಇದಕ್ಕೆ ಸಧ್ಯ ಪರಿಹಾರವಂತೂ ಇಲ್ಲ ಎಂಬುದು ಅಷ್ಟೇ ಸತ್ಯ.
ಕೇಂದ್ರ ಬಸ್ಸು ನಿಲ್ದಾಣ ಹಾಗೂ ನಗರ ಬಸ್ಸು ನಿಲ್ದಾಣಕ್ಕೆ ಹೋಗುವವರಿಗೆ ಡಿವೈಡರ್ ಕಾರಣದಿಂದ ಓಡಾಡುವುದು ತುಂಬಾನೇ ಕಷ್ಟಕರವಾಗಿದೆ. ಸಾರ್ವಜನಿಕರ ಈ ಸಮಸ್ಯೆಗೆ ಏನಾದರೂ ಪರಿಹಾರ ಬೇಕಲ್ಲವೇ ?

-ಶ್ರೀಮತಿ ರಾಜೇಶ್ವರಿ ಎಸ್ ಹೆಗಡೆ
ಬೆಳಗಾವಿ.


