ಮಲ್ಚಿಂಗ್ ಹಾಗೂ ವಿಡ್ಮೇಟ್, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ರೈತರಿಗೆ ಅನುಕೂಲ: ಶಶಿಕಾಂತ್ ಕೋಟಿಮನಿ
ಬಳ್ಳಾರಿ,ಜ.14- ರೈತರು ಮಲ್ಚಿಂಗ್ ಹಾಗೂ ವಿಡ್ಮೇಟ್, ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಮೆಣಸಿನಕಾಯಿ ಬೆಳೆ ಬೆಳೆಯಬಹುದು ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ ಅವರು ಹೇಳಿದರು.
ತೋಟಗಾರಿಕೆ ಇಲಾಖೆ ಹಾಗೂ ಹಗರಿಯ ಕೃಷಿ ವಿಜ್ಞಾನ ಕೇಂದ್ರ ಇವರ ಸಹಯೋಗದಲ್ಲಿ ಕುರುಗೋಡು ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮ, ಮಾರುತಿ ಕ್ಯಾಂಪ್ ನ ಬಿಳುಬಾವಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಮೆಣಸಿನಕಾಯಿ ಕ್ಷೇತ್ರೋತ್ಸವ ಹಾಗೂ ತಾಂತ್ರಿಕ ಸಲಹೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುರುಗೋಡು ತಾಲ್ಲೂಕಿನಲ್ಲಿ 15,000 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ. ಸಿದ್ಧಮ್ಮನಹಳ್ಳಿ ಗ್ರಾಮದಲ್ಲಿ 2345 ಹೆಕ್ಟರ್ ಪ್ರದೇಶದಲ್ಲಿ ಮೆಣಸಿನಕಾಯ ಬೆಳೆ ಬೆಳೆಯುತ್ತಿದ್ದು, ರೈತರು ಕಾರ್ಯಾಗಾರದ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಹಗರಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಪಾಲಯ್ಯ ಅವರು ಮಾತನಾಡಿ, ಮೆಣಸಿನಕಾಯಿ ಬೆಳೆಯ ಬೇಸಾಯ ಕ್ರಮಗಳಲ್ಲಿ ಬದಲಾವಣೆ, ತಳಿ ಆಯ್ಕೆ, ಸಮಗ್ರ ಕೀಟ ಮತ್ತು ಪೀಡೆ ನಿರ್ವಹಣೆ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಉತ್ತಮ ಗುಣಮಟ್ಟದ ಬೆಳೆ ಬೆಳೆಯಬಹುದು ಎಂದರು.
ರೈತರು ಹೊಲದ ಬದುವಿನಲ್ಲಿ ಬಾರ್ಡರ್ ಬೆಳೆಗಳಾದ ಅಲಸಂದಿ, ಮೆಕ್ಕೆಜೋಳ, ಸಜ್ಜೆ, ತೋಗರಿ, ಅಲ್ಲಲ್ಲಿ ಚೆಂಡು ಹೂವು ನೆಡುವುದರ ಮೂಲಕ ಕೀಟಗಳನ್ನು ಹತೋಟಿಗೆ ತರಬಹುದು ಎಂದು ಮಾಹಿತಿ ನೀಡಿದರು.
ಮಣ್ಣು ವಿಜ್ಞಾನಿ ಡಾ.ರವಿ ಅವರು ಮಾತನಾಡಿ, ರೈತಾಪಿ ವರ್ಗ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸುವ ಕುರಿತು ಮಾಹಿತಿ ನೀಡುವ ಮೂಲಕ ಮಣ್ಣಿನಲ್ಲಿ ಅದರದೇ ಆದ ಲವಣ ಪೋಷಕಾಂಶಗಳ ಗುಣ ಹೊಂದಿರುತ್ತದೆ ಎಂದರು.
ರೈತರು ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಮಾಡಿ ಸಾವಯವ ಕೃಷಿಗೆ ಮಹತ್ವವನ್ನು ನೀಡಬೇಕು. ಮಣ್ಣಿನ ಗುಣಮಟ್ಟ ಹೆಚ್ಚಿಸಲು ರೈತರು ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಯಾವ ಪೋಷಕಾಂಶಗಳು ಕಡಿಮೆಯಾಗಿದೆ. ಅದನ್ನು ಮಾತ್ರ ಬಳಸಿಕೊಂಡು ಉತ್ತಮ ರೀತಿಯ ಬೆಳೆ ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಒಮ್ಮೆ ಮಣ್ಣಿನ ಪರೀಕ್ಷೆ ಮಾಡಿದರೆ ಮೂರು ವರ್ಷಗಳವರೆಗೆ ಸಕ್ರಿಯರಾಗಿ ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಮಾಡಬಹುದು ಎಂದು ಮಾಹಿತಿ ನೀಡಿದರು.
ಡಾ.ಗೋವಿಂದಪ್ಪ ಅವರು ಮಾತನಾಡಿ, ಶೀಲಿಂಧ್ರ ಹಾಗೂ ಕೀಟಗಳನ್ನು ಗುರುತಿಸಿ ರೋಗಕ್ಕೆ ತಕ್ಕ ಔಷಧಿಗಳು ಮಾತ್ರ ಸಿಂಪರಣೆ ಮಾಡಬೇಕು. ರೋಗ ಮತ್ತು ಕೀಟಗಳನ್ನು ನರ್ಸರಿ ಹಂತದಿAದಲೇ ಹತೋಟಿಗೆ ತರಬೇಕು ಹಾಗೂ ಬೆಳೆಯನ್ನು ಸಂರಕ್ಷಿಸಿಕೊಳಬೇಕು ಎಂದರು.
ನಾಟಿ ಮಾಡಿದ 30 ದಿನಗಳ ನಂತರ ಪ್ರತಿ ಎಕರೆಗೆ 10 ರಿಂದ 15 ರವರೆಗೆ ಅಂಟು ಬಲೆಗಳನ್ನು ಹಾಕಿಕೊಳ್ಳಬೇಕು. ಬಯೋ ಜೀವಿಗಳಾದ ಸುಡೋಮೋನಾಸ್, ಟ್ರೆöÊಕೋಡರ್ಮ, ವರ್ಟಿಸಿಲಿಯಮ್ ಲೇಖನಿ, ಬೆವೇರಿಯಾ ಬಸ್ವಿಯಾನಗಳನ್ನು ಸಿಂಪರಣೆ ಮಾಡುವುದರ ಮೂಲಕ ಮೆಣಸಿನಕಾಯಿ ಬೆಳೆಯ ರೋಗಗಳನ್ನು ಹತೋಟಿಗೆ ತರಬಹುದು ಎಂದು ವಿವರಿಸಿದರು.
ಬಳ್ಳಾರಿ ತಾಲ್ಲೂಕು ತೋಟಗಾರಿಕೆ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಯೋಜಕ ಜಾಡ್ರ ಶಂಕ್ರಪ್ಪ ಅವರು ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರಾಘವೇಂದ್ರ.ಕೆ., ಪ್ರವೀಣ್ ಕುಮಾರ್ ಎನ್., ರೈತರಾದ ಇಬ್ರಾಹಿಂ, ವೀರಭದ್ರಗೌಡ, ಹನುಮಂತ ರಾವ್, ಸೀತಾರಾಮ್ ರೆಡ್ಡಿ, ಮಲ್ಲನಗೌಡ.ಎಸ್., ಬಲರಾಮ್ ಹಾಗೂ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಿಗೆ ಸನ್ಮಾನ ಮಾಡಲಾಯಿತ
ಮಲ್ಚಿಂಗ್ ಹಾಗೂ ವಿಡ್ಮೇಟ್, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ರೈತರಿಗೆ ಅನುಕೂಲ: ಶಶಿಕಾಂತ್ ಕೋಟಿಮನಿ
ಬಳ್ಳಾರಿ,ಜ.14
ರೈತರು ಮಲ್ಚಿಂಗ್ ಹಾಗೂ ವಿಡ್ಮೇಟ್, ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಮೆಣಸಿನಕಾಯಿ ಬೆಳೆ ಬೆಳೆಯಬಹುದು ಎಂದು ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ ಅವರು ಹೇಳಿದರು.