ಎಸ್‌ಡಿಎಂಸಿ ಅಧ್ಯಕ್ಷರಾಗಿ ವಿರೇಶ ಶೇಡಬಾಳ- ಉಪಾಧ್ಯಕ್ಷರಾಗಿ ಸುಮಿತ್ರಾ ಜೋಗಾಣಿ ಆಯ್ಕೆ 

Hasiru Kranti
ಎಸ್‌ಡಿಎಂಸಿ ಅಧ್ಯಕ್ಷರಾಗಿ ವಿರೇಶ ಶೇಡಬಾಳ- ಉಪಾಧ್ಯಕ್ಷರಾಗಿ ಸುಮಿತ್ರಾ ಜೋಗಾಣಿ ಆಯ್ಕೆ 
WhatsApp Group Join Now
Telegram Group Join Now
ಅಥಣಿ : ಇಲ್ಲಿನ ನಮ್ಮೂರ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಮೋಟಗಿ ತೋಟ ಶಿವಯೋಗಿ ನಗರ  ಇದರ ನೂತನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯನ್ನು ಮಂಗಳವಾರ ರಚಿಸಲಾಯಿತು.
ಅಥಣಿ ಗ್ರಾಮೀಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಗಡದೆ ಅವರ ಅಧ್ಯಕ್ಷತೆಯಲ್ಲಿ, ಪಾಲಕರು ಹಾಗೂ ಪೋಷಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ವಿರೇಶ ಶೇಡಬಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಐದು ಜನ ಆಕಾಂಕ್ಷಿಗಳು ತಮ್ಮ ಹೆಸರನ್ನು ಸೂಚಿಸಿದ್ದರು ಕೊನೆಯ ಗಳಿಗೆಯಲ್ಲಿ ಚುನಾವಣೆ ನಡೆದು ಸುಮಿತ್ರಾ ಜೋಗಾಣಿ ಉಪಾಧ್ಯಕ್ಷರಾಗಿ ಆಯ್ಕಯಾದರು.
ಎಸ್‌ಡಿಎಂಸಿ ಸದಸ್ಯರಾಗಿ ಮಂಜು ಮಾಳಿ. ಲೋಕೇಶ್ ಸಿಂದೂರ್. ಇರ್ಫಾನ್ ಮುಲ್ಲಾ. ಮುರುಗೇಶ್ ದರೂರ. ಆಸೀಫ್ ಹುದ್ದಾರ್. ಸಂದೀಪ ಜೋಗಾಣಿ. ಸಂಜು ಕೋರಿ. ಅರುಣ್ ಕೋರಿ. ಯಾಸ್ಮೀನ್ ಮುಲ್ಲಾ. ಲಕ್ಷ್ಮಿ ರಾಠೋಡ. ಸಾವಿತ್ರಿ ಬಡಚಿ. ವಾಣಿಶ್ರೀ ಲಗಳಿ. ಪುನೀತಾ ಕುಟಕೋಳಿ. ಗೀತಾ ಉಪ್ಪಾರ. ಆಯ್ಕೆಯಾಗಿದ್ದಾರೆ.
ಶಿಕ್ಷಣ ಇಲಾಖೆಯ ಎಸ್ ಬಿ ಕರೋಸಿ. ಅಥಣಿ ಗ್ರಾಮೀಣ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಜು ಕರಾಂಡೆ ಎಸ್‌ಡಿಎಂಸಿ ರಚನೆ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಎಸ್‌ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ವಿರೇಶ ಶೇಡಬಾಳ ಮಾತನಾಡಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ. ಶಾಲಾಭಿವೃದ್ಧಿ ಸಮಿತಿಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಉತ್ತಮ ಯೋಜನೆಗಳನ್ನು ರೂಪಿಸಿ ಶಾಲೆಯನ್ನು ಅತ್ಯುತ್ತಮವಾಗಿ ಮುನ್ನಡೆಸಲಾಗುವುದು. ಶಾಲೆಯ ಶಿಕ್ಷಕರೊಂದಿಗೆ ಸಹಕರಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ರೂಪಿಸುವ ಕೆಲಸ ಮಾಡುತ್ತೇನೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಕುರಿತು ಪೋಷಕರಿಗೆ ಅರಿವು ಮೂಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ  ಕೆ ಎಸ್ ಹಾಲಳ್ಳಿ. ಸೇರಿದಂತೆ ಶಾಲೆಯ ಶಿಕ್ಷಕ. ಶಿಕ್ಷಕಿಯರು. ಸಿಬ್ಬಂದಿ ವರ್ಗದವರು. ಪಾಲಕ ಪೋಷಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article