ಇಂಡಿ : ದೇಶದ ಅಭಿವೃದ್ಧಿಗೆ ಶಿಕ್ಷಣ ಮುಖ್ಯ- (ಪೂರಕ)ವಾಗಿದೆ ಆದ್ದರಿಂದ ಈ ಸರ್ಕಾರಿ ನೂತನ ಪ್ರೌಢ ಶಾಲೆಯ ಸದುಪಯೋಗ ಪಡೆದುಕೊಂಡು ಉನ್ನತ ಶಿಕ್ಷಣ ಪಡೆದುಕೊಂಡು ಭವ್ಯ ಭಾರತದ ನಾಗರೀಕರಾಗಬೇಕು’ ಎಂದು ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹೇಳಿದರು.
ಹೊರ್ತಿಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಪಂಚಾ ಯತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ ಚಡಚಣ ಇವರ ಸಹಯೋಗದಲ್ಲಿ ಸೋಮವಾರ ಕನ್ನಡ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ನೂತನ ಪ್ರೌಢ ಶಾಲೆ ಉದ್ಘಾಟಿಸಿ, ನಂತರ ವೇದಿಕೆ ಮೇಲೆ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ತತ್ವ, ಸಂದೇಶ, ಆದರ್ಶ ಅವರ ದೇಶಾ ಭೀಮಾನದ ಸ್ಫೂರ್ತಿಯನ್ನು ಯುವ ಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಶಾಸಕ ಯಶವಂತರಾಯಗೌಡ ಹೇಳಿದರು.
ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಚಿದಾನಂದ ಆರ್.ಕಟ್ಟಿಮನಿ ಪ್ರಾ ಸ್ತಾವಿಕವಾಗಿ ಮಾತನಾಡಿ’ ಹೊರ್ತಿ ಹಾಗೂ ಸುತ್ತಲೀನ ಗ್ರಾಮಗಳ ವಿದ್ಯಾರ್ಥಿಗಳು ಈ ನೂತನ ಪ್ರೌಢ ಶಾಲೆಯ ಸದುಪಯೋಗ ಪಡೆದು ಕೊಳ್ಳಬೇಕು’ಎಂದರು.
ಕಾರ್ಯಕ್ರಮದ ಮುನ್ನ ನಾಗಠಾಣ ನಾಗಠಾಣ ಶಾಸಕ ವಿಠಲ ಕಟಕದೊಂಡ ಸ್ಮಾರ್ಟ್ ಕ್ಲಾಸ್ (ಎಲ್ ಇಡಿ) ಸ್ಕ್ರೀನ್ ಹಾಗೂ ವಾಚನಾಲಯ ಉದ್ಘಾಟಿಸಿ ನಂತರ ವೇದಿಕೆ ಮೇಲೆ ಸರಸ್ವತಿ ಹಾಗೂ ಪೂಜ್ಯ ಸಿದ್ಧೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು ಮಾತನಾಡಿ,’ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಈ ಸ್ಮಾರ್ಟ್ ಕ್ಲಾಸ್ (ಎಲ್ ಇಡಿ) ಸ್ಕ್ರೀನ್ ದ ಮೂಲಕ ಪಠ್ಯ ಶಿಕ್ಷಣ ಹಾಗೂ ವಿಜ್ಞಾನ ಪ್ರಯೋಗಗಳ ಮೂಲಕ ಮತ್ತು ಪಠ್ಯತರ ಚಟುವಟಿಕೆಗಳನ್ನು ಬೇಗನೆ ಅರಿತು ಕೊಳ್ಳಲು ಆಸಕ್ತಿದಾ ಯಕಾಗಿ ಸಹಾಯವಾಗುತ್ತದೆ’ ಎಂದು ಹೇಳಿದರು.
ಹೊರ್ತಿ ಗ್ರಾಮ ಪಂಚಾಯಿತಿ ಜಯಶ್ರೀ ಭೋಸಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು. ಹೊರ್ತಿ ಪಿಕೆಪಿಎಸ್ ಅಧ್ಯಕ್ಷ ಮಹಾದೇವ ಬಾ. ಪೂಜಾರಿ, ಸಹಕಾರಿ ದುರೀಣ ಶ್ರೀಮಂತ ಇಂಡಿ, ಜಿ. ಪಂ ಮಾಜಿ ಸದಸ್ಯ ಗುರಣಗೌಡ ಪಾಟೀಲ, ಸರ್ವೋದಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ರೇವಣಸಿದ್ಧ ಶಿ. ಪೂಜಾರಿ,ಚಡಚಣ ಬಿಐಇಆರ್ ಟಿ ಎಸ್ ಎಸ್ ಬೋರ್ಗಿ, ಹೊರ್ತಿ ವಲಯ ಶಿಕ್ಷಣ ಸಂಯೋಜಕ ಗಂಗಾಧರ ಆರ್. ಕಟ್ಟಿಮನಿ, ಹೊರ್ತಿ ವಿವಿಧ ಶಾಲೆಯ ಮುಖ್ಯ ಗುರುಗಳಾದ ಎಸ್ ಎಸ್. ಮಕಣಾ ಪುರ, ಎಸ್ ಎಂ.ಕಿಣಗಿ, ಆರ್ ಡಿ. ಮುಲ್ಲಾ, ಎಂ ಆರ್. ಮೇತ್ರಿ, ಎಸ್ ಎಂ.ರಾಠೋಡ, ಎಸ್ ಆರ್. ಕುಲಕ ರ್ಣಿ, ಜಿ ಎಸ್.ಹಿರೇಮಠ, ಎ ಎಸ್. ಹೊನ್ನಕೋರೆ, ಎಸ್. ಬಿ.ಬೋಳೆ ಗಾಂವ ಹೊರ್ತಿಯ ಎಂಪಿಎಸ್ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಶಿವಲಿಂಗಪ್ಪ ಶಿ. ಪೂಜಾರಿ ಹಾಗೂ ಕೆಜಿ ಎಸ್ ಶಾಲೆಯ ಎಸ್ ಡಿಎಂ ಸಿ ಅಧ್ಯಕ್ಷೆ ಲಕ್ಷ್ಮಿ ಆರ್.ವಡ್ಡರ ಮತ್ತು ಉಪಾಧ್ಯಕ್ಷ ಶಿವಕಾಂತಪ್ಪ ದಳವಾಯಿ, ಹೊರ್ತಿ ಯುಬಿಎಸ್ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಜಾಕೀರ್ ನದಾಫ್, ಹೊರ್ತಿ ಎಲ್ ಪಿ ಎಸ್ ಎಚ್ ಕೆ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಎಸ್ ಎಂ.ತಳಕೇರಿ ಹಾಗೂ ಚಡಚಣ ವಲಯ ಶಿಕ್ಷಕ ಸಂಘದ ಎಲ್ಲಾ ಹಂತದ ಪದಾಧಿಕಾರಿಗಳು ಹಾಗೂ ಶಿಕ್ಷಣ ಸಂಯೋಜಕರು ಮತ್ತು ಬಿಆರ್ ಪಿ, ಸಿಆರ್ ಪಿ, ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರು,ಗ್ರಾಮಸ್ಥರು ಉಪಸ್ಥಿತ ರಿದ್ದರು. ಎಸ್ ಎಸ್.ಬೋರಗಿ ಸ್ವಾಗತಿಸಿದರು, ಮುಖ್ಯ ಶಿಕ್ಷಕ ಸತೀಶ ಕುಲಕರ್ಣಿ ನಿರೂಪಿಸಿದರು. ಶಾಲಾ ಮುಖ್ಯ ಗುರು ಎಸ್ ಎಸ್.ಮಕಣಾಪುರ ವಂದಿಸಿದರು.


