ಮುಧೋಳ:ಜ.೧೩.,ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ, ಉಪನಿರ್ದೇಶಕರ ಕಾರ್ಯಾಲಯ,ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ,ಕ್ಷೇತ್ರ ಶಿಕ್ಷಣಾಧಿಕಾರಿಗಳು,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುಧೋಳ ಮತ್ತು ಕೆ. ಆರ್.ಲಕ್ಕಂ ವಿದ್ಯಾಸಂಸ್ಥೆ ಮುಧೋಳ ಇವರ ಸಹಯೋಗದಲ್ಲಿ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಸನ್ ೨೦೨೫-೨೬ನೇ ಸಾಲಿನ ಬಾಗಲಕೋಟೆ ಜಿಲ್ಲಾ ಮಟ್ಟದ “ಪ್ರತಿಭಾ ಕಾರಂಜಿ” ಹಾಗೂ “ಕಲೋತ್ಸವ” ಸ್ಪರ್ಧೆಗಳು ಸೋಮವಾರ ದಂದು ಕೆ. ಆರ್. ಲಕ್ಕಂ ವಿದ್ಯಾಲಯದಲ್ಲಿ ಜರುಗಿದವು.
ಸೋರಗಾಂವ ಗ್ರಾಮದ ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆಯ ಕು,ಶುಭಶ್ರೀ ರಮೇಶ ಡೊಂಬರ ಮತ್ತು ಕು, ನಂದೀಶ ಶಂಕರ ಮರನೂರ ವಿದ್ಯಾರ್ಥಿಗಳು.ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದ ಡಿವೈಪಿಸಿ ಪ್ರಮೋದಿನಿ ಬಳೂಲಮಟ್ಟಿ,
ವಿ?ಯ ಪರಿವೀಕ್ಷಕ ಶರಣಬಸಪ್ಪ ಹಾಲಾವರ ಮತ್ತು ಇನ್ನಿತರರು ಸೇರಿ ಪ್ರಶಸ್ತಿ ಪತ್ರನೀಡಿ ಗೌರವಿಸಿದರು.
ಈ ಸಾಧಕ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪುರ ಅಬಕಾರಿ ಸಚಿವರು ಬೆಂಗಳೂರು,ಬಾಗಲಕೋಟೆ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎ ಸಿ ಮನ್ನಿಕೇರಿ,ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಮ್ ಮುಲ್ಲಾ,ಪಿಎಂಶ್ರೀ ಶಾಲೆಯ ಮುಖ್ಯೋಪಾಧ್ಯಯ ಬಿ ಆರ್ ಶಿರೂರ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಗೈಬುಸಾಬ್ ನದಾಫ್, ಪದಾಧಿಕಾರಿಗಳು,ಶಿಕ್ಷಕವೃಂದ ಊರಿನ ಗಣ್ಯರು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.


