ರನ್ನ ಬೆಳಗಲಿ:ಜ.೧೩., ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಸೋಮವಾರ ದಂದು ಸ್ವಾಮಿ ವಿವೇಕಾನಂದ ಪ್ರತಿಷ್ಟಾನ ಆಶ್ರಯದಲ್ಲಿ ೧೬೩ನೇ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ಜರಗಿತು.
ಸಾನಿಧ್ಯ ವಹಿಸಿದ ಶಿವಯ್ಯ ಹಿರೇಮಠ ಪೂಜ್ಯರು ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಮಂಗಳಾರತಿ ಮಾಡಿದರು.
ಯೋಗ ಶಿಕ್ಷಕರ ರಾಘವೇಂದ್ರ ನೀಲಣ್ಣವರ ಮಾತನಾಡಿ ಭಾರತದ ಸಂಸ್ಕೃತಿ ಮತ್ತು ಧಾರ್ಮಿಕತೆಯ ನೇತಾರ ವಿವೇಕಾನಂದರು,ಎಲ್ಲ ಯುವಕರು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ವಿಶ್ವಕ್ಕೆ ತತ್ವಜ್ಞಾನ ಬೋಧಿಸಿ, ಭಾರತೀಯರನ್ನು ಪ್ರೀತಿಸುವಂತೆ ಕರೆಕೊಟ್ಟ ಧೀಮಂತ ಜ್ಞಾನಯೋಗಿ ವಿವೇಕಾನಂದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮತ್ತು ವಿವೇಕಾನಂದರ ವೇ?ಧರಿಸಿದ. ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದ ಪ್ರತಿ?ನ ದಿಂದ ವಿವೇಕಾನಂದರ ಕಿರು ಪುಸ್ತಕವನ್ನು ನೀಡಲಾಯಿತು.
ಪ್ರತಿ?ನದ ಅಧ್ಯಕ್ಷ ಪರಮಾನಂದ ಬಾಳಿಬೂದಿ, ಸಿದ್ದರಾಮಯ್ಯ ಬಬಲಾದಿಮಠ,ಸಂತೋ? ದೊಡಮನಿ,ಪರಮಾನಂದ ಕೋರಿ,ಸಿದ್ದು ನಂದಿಕೇಶ್ವರ, ವಿಠ್ಠಲ ಕರಿಗಾರ,ಶಿವಾನಂದ ಕಿತ್ತೂರ,ವಿಠ್ಠಲ ಕುಂಬಾರ ಮತ್ತು ಪ್ರತಿ?ನದ ಪ್ರಾಧಿಕಾರಿಗಳು, ಗ್ರಾಮದ ಗುರು ಹಿರಿಯರು, ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


