ಯುವ ಸಮೂಹದ ಕೊಡುಗೆಯಿಂದ ದೇಶದ ಅಭಿವೃದ್ಧಿ: ಜಯಚಂದ್ರ ರೆಡ್ಡಿ

Sandeep Malannavar
ಯುವ ಸಮೂಹದ ಕೊಡುಗೆಯಿಂದ ದೇಶದ ಅಭಿವೃದ್ಧಿ: ಜಯಚಂದ್ರ ರೆಡ್ಡಿ
WhatsApp Group Join Now
Telegram Group Join Now

ಬಳ್ಳಾರಿ,ಜ.13. ಒಂದು ದೇಶದ ಅಭಿವೃದ್ಧಿ ಮತ್ತು ಪ್ರಗತಿಯು ಆ ದೇಶದ ಯುವ ಸಮುದಾಯದ ಕೊಡುಗೆಯನ್ನು ಅವಲಂಬಿಸಿರುತ್ತದೆ ಎಂದು ಐಡಿಪಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಜಯಚಂದ್ರ ರೆಡ್ಡಿ ಅವರು ಹೇಳಿದರು.
ಭಾರತ ಸರ್ಕಾರದ ಮೇರಾ ಯುವ ಭಾರತ ಬಳ್ಳಾರಿ, ಹಾಗೂ ಐಡಿಪಿಎಸ್ ಸ್ವತಂತ್ರ  ಪದವಿ ಪೂವÀð ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಗರದ ಸ್ವತಂತ್ರ  ಪದವಿ ಪೂವÀð ಕಾಲೇಜಿನ ಆವರಣದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ 164ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಾಷ್ಟಿçÃಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ದೇಶವು ಅಭಿವೃದ್ಧಿಯತ್ತ ಸಾಗುವಲ್ಲಿ ಆ ದೇಶದ ಯುವ ಶಕ್ತಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಂತಹ ಯುವ ಸಮೂಹದ ಶಕ್ತಿ, ಸಾಮರ್ಥ್ಯದ ಬಗ್ಗೆ ವಿಶ್ವಕ್ಕೆ ಸಾರಿ ಹೇಳಿದವರಲ್ಲಿ ಸ್ವಾಮಿ ವಿವೇಕಾನಂದರು ಮೊದಲಿಗರು ಎಂದು ತಿಳಿಸಿದರು.
ಐಡಿಪಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ತಿಪ್ಪಾರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಅಭಿವೃದ್ಧಿಯು ಯುವಕರಿಂದ ಮಾತ್ರ ಸಾಧ್ಯ ಎಂದು ನಂಬಿದ್ದ ವಿವೇಕಾನಂದರು ತಮ್ಮ ಆಲೋಚನೆಗಳು ಮತ್ತು ಚಿಂತನೆಗಳೊAದಿಗೆ ಯುವಕರನ್ನು ಒಗ್ಗೂಡಿಸಲು ಬಯಸಿದವರು. ಈ ಮಹಾನ್ ವ್ಯಕ್ತಿಯ ಹಾಗೂ ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆಯಾಗಿರುವ ಇವರ ಜನ್ಮ ದಿನದ ಸವಿ ನೆನಪಿಗಾಗಿ ನಮ್ಮ ದೇಶದಲ್ಲಿ ಪ್ರತಿವರ್ಷ ಜನವರಿ 12 ರಂದು ರಾಷ್ಟಿçÃಯ ಯುವ ದಿನ ಆಚರಿಸಲಾಗುತ್ತದೆ ಎಂದರು.
ಸ್ವಾಮಿ ವಿವೇಕಾನಂದರು ಒಬ್ಬ ವೀರ ಸನ್ಯಾಸಿ, ತತ್ವಜ್ಞಾನಿ, ಭಾರತ ದೇಶದಲ್ಲಿ ಭಾರತ ಸಂಸ್ಕೃತಿಯನ್ನು ದೇಶ ವಿದೇಶದಲ್ಲಿ ಪ್ರಚಾರ ಮಾಡಿದ ಏಕೈಕ ವ್ಯಕ್ತಿ. ವಿವೇಕಾನಂದರವರ ಜೀವನ ಚರಿತ್ರೆ ಮತ್ತು ಅವರ ಸಾಧನೆ ಅವರು ನಡೆದು ಬಂದAತಹ ದಾರಿ ಯುವ ಜನಾಂಗವು ಅಳವಡಿಸಿಕೊಳ್ಳಬೇಕು ಎಂದು ಯುವಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಐಡಿಪಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಶಿವಪ್ರಸಾದ, ವೆಂಕಟಕೃಷ್ಣ ಎ.ಜಿ.ಎಂ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article